ಬೈಲಹೊಂಗಲ ತಾಲೂಕಿನ ವಿವಿಧ ಕ್ಷೇತ್ರಗಳಲ್ಲಿ ರೈತರ ಜಮೀನುಗಳಿಗೆ ಕರ್ನಾಟಕ ಸರಕಾರ ಕೃಷಿ ಸಚಿವರಾದ ಎನ್ ಚೆಲುವರಾಯಸ್ವಾಮಿ ಅವರು ಭೇಟಿ ನೀಡಿ ಕೃಷಿ ಇಲಾಖೆಯ ಯೋಜನೆಗಳಲ್ಲಿ ಬರುವ ಕೃಷಿ ಉಪಕರಣಗಳ ಉದ್ಘಾಟನೆ ಹಾಗೂ ಚಾಲನೆ ನೀಡಲು ಆಗಮಿಸಿದ್ದರು.
ಇದೇ ಸಂದರ್ಭದಲ್ಲಿ ಸಮಸ್ತ ಕೃಷಿ ನಿರತ ರೈತ ಸಮುದಾಯದ ವತಿಯಿಂದ ಸರಕಾರ ನೀಡುವ ಬಿತ್ತನೆ ಬೀಜದ ದರ ಕಡಿತಗೊಳಿಸುವ ಬಗ್ಗೆ ಖಾಸಗಿ ವ್ಯಾಪಾರಗಾರರು ಕಾಳ ಸಂತೆಯಲ್ಲಿ ಬೀಜಗಳನ್ನು ದುಪ್ಪಟ್ಟು ಮಾರಾಟ ಮಾಡುವುದನ್ನು ತಡೆಗಟ್ಟಲು, ಸಮರ್ಪಕವಾಗಿ ಬೆಳೆ ಪರಿಹಾರ ನೀಡುವುದು, ಹಾಗೂ ಗ್ರಾಮೀಣ ಪ್ರದೇಶದಲ್ಲಿ ನೆರೇಗಾ ಯೋಜನೆ ಅಡಿ ರೈತರಿಗೆ ಶೇಕಡ 75 ರಷ್ಟು ಉದ್ಯೋಗ ನೀಡಬೇಕೆಂದು ರೈತ ಸಂಘಟನೆಗಳ ಒಕ್ಕೂಟದ ಪ್ರತಿನಿಧಿಗಳಿಂದ ಕೃಷಿ ಸಚಿವರಿಗೆ ಮನವಿ ನೀಡಲಾಯಿತು.