ಗಂಗಾವತಿ: ತಾಲೂಕಿನ ಇತಿಹಾಸ ಪ್ರಸಿದ್ಧ ಕಿಷ್ಕಿಂಧಾ ಅಂಜನಾದ್ರಿ ಬೆಟ್ಟದ ಭಕ್ತರ ಕಾಣಿಕೆಯ ಹುಂಡಿ ಹಾಗೂ ದೇಣಿಗೆ ಪುಸ್ತಕ ಎಣಿಕೆ ಕಾರ್ಯ ಮಂಗಳವಾರ ನಡೆಸಲಾಗಿದ್ದು 56 ದಿನಗಳಲ್ಲಿ 30.21 ಲಕ್ಷ ರೂ.ಗಳು ಸಂಗ್ರಹವಾಗಿದೆ. ಇದರಲ್ಲಿ ಪಾಕಿಸ್ತಾನ, ಮೊರಕ್ಕೋ,ಯುಎಇ, ಶ್ರೀಲಂಕಾ ಹಾಗೂ ನೇಪಾಳದಿಂದಲೂ ಆಗಮಿಸಿದ ಭಕ್ತರು ಹಾಕಿದ ನಾಣ್ಯ ಮತ್ತು ನೋಟುಗಳಿವೆ.
ಕಳೆದ ತಿಂಗಳು 9.29 ಲಕ್ಷ ರೂ.ಗಳು ಸಂಗ್ರಹವಾಗಿದ್ದವು. ಹನುಮಜಯಂತಿ ಹಾಗೂ ಲೋಕಸಭಾ ಚುನಾವಣೆಯ ಮಧ್ಯೆದಲ್ಲೂ ಹನುಮನಭಕ್ತರು ಅಂಜನಾದ್ರಿಗೆ ಆಗಮಿಸಿದ್ದರಿಂದ ಹುಂಡಿಗೆ ಭರ್ಜರಿ ಕಲೆಕ್ಷನ್ ಆಗಿದೆ.
ಹುಂಡಿ ಎಣಿಕೆ ಕಾರ್ಯದಲ್ಲಿ ಶಿರಸ್ತೇದಾರಾದ ರವಿಕುಮಾರ ನಾಯಕ್ವಾಡಿ, ಕೃಷ್ಣವೇಣಿ, ಕಂದಾಯ ನಿರೀಕ್ಷಕರಾದ ಮಂಜುನಾಥ ಹಿರೇಮಠ್ , ಮಹೇಶ್ ದಲಾಲ, ಹಾಲೇಶ ಗುಂಡಿ ತಹಶೀಲ್ ಕಾರ್ಯಾಲಯದ ಸಿಬ್ಬಂದಿಗಳಾದ ಶ್ರೀಕಂಠ, ಗುರುರಾಜ, ಮಂಜುನಾಥ ಹಿರೇಮಠ , ಇಂದಿರಾ ,ಅನ್ನಪೂರ್ಣ, ಕವಿತಾ ಕೆ, ಸುಧಾ, ಸೌಭಾಗ್ಯ, ಕವಿತಾ, ಸೈಯದ್ ಮುರ್ತುಜಾ ,ಶ್ರೀರಾಮ ಜೋಶಿ , ಪವನ್ ಕುಮಾರ್ ನಿಲೋಗಲ್, ಹಾಗೂ ಪಿ ಕೆ ಜಿ ಬಿ ಸಣಾಪೂರ ಬ್ಯಾಂಕ್ ಸಿಬ್ಬಂದಿಗಳಾದ ಸುನಿಲ್ , ರಾಜಶೇಖರ್, ಶ್ರೀನಿವಾಸ್ ಪೋಲಿಸ್ ಸಿಬ್ಬಂದಿ , ಹಾಗೂ ವೆಂಕಟೇಶ ದೇವಸ್ಥಾನದ ಸಿಬ್ಬಂದಿವರ್ಗದವರಿದ್ದರು