ಸುಪ್ರಸಿದ್ದ ಶ್ರೀ ವೀರಭಧ್ರೆಶ್ವರ ಜಾತ್ರಾ ಪ್ರಯುಕ್ತ ಉಚಿತ ಗುಗ್ಗುಲೋತ್ಸವ, ಒಡಪು, ವೀರಗಾಷೆ ಸಂಭ್ರಮ.
ನೇಸರಗಿ. ಇಲ್ಲಿನ ಸುಪ್ರಸಿದ್ದ ಶ್ರೀ ವೀರಭದ್ರೇಶ್ವರ ಜಾತ್ರಾ ನಿಮಿತ್ಯವಾಗಿ ಬುಧವಾರದಂದು ಬೆಳಿಗ್ಗೆ 8 ಘಂಟೆಗೆ ಉಚಿತ ರವಿ ಗುಗ್ಗುಲೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ದೇವರ ಅಭಿಷೇಕ, ಮಹಾಪೂಜೆ, ರುದ್ರಾಭಿಷೇಕ, ಕಲ್ಲೋಳಿ, ನೇಸರಗಿ ಪುರವಂತರಿಂದ ಬೃಹತ್ ಒಡಪುಗಳ ಕಾರ್ಯಕ್ರಮ ನೆರವೇರಿತು. ದೇವಸ್ಥಾನದಿಂದ ಪ್ರಾರಂಭವಾದ ಗುಗ್ಗಳ ಮೆರವಣಿಗೆ ಪ್ಯಾಟಿ ಓಣಿ ಮುಖಾಂತರ ಕರ್ನಾಟಕ ಚೌಕನಲ್ಲಿ ಜೈ ಹನುಮಾನ ಸಂಬಳ ಮಜಲ್ ಅವರಿಂದ ಒಡಪು, ವಿರಗಾಸೆ, ಕುಣಿತದ ವಿಶೇಷ ಕಾರ್ಯಕ್ರಮಗಳು ಅದ್ದೂರಿಯಾಗಿ ನೆರವೇರಿದ್ದವು. ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಭಕ್ತಿ, ಭಾವದೊಂದಿಗೆ ಸಡಗರ ಸಂಭ್ರಮದಿಂದ ನೆರವೇರಿತು.