ಪ್ರತಿ ವರ್ಷ ಪದ್ಧತಿಯಂತೆ ಇಂಚಲ ಗ್ರಾಮದ ಗ್ರಾಮದೇವತೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿತು
ಸವದತ್ತಿ ತಾಲೂಕಿನ ಇಂಚಲ ಗ್ರಾಮದಲ್ಲಿ ಪ್ರತಿ ವರ್ಷ ಪದ್ಧತಿಯಂತೆ ಗ್ರಾಮದೇವತೆಯರ ಉಡಿ ತುಂಬವ ಕಾರ್ಯಕ್ರಮ ವಿಜ್ರಂಭಣೆಯಿಂದ ಜರಗಿತು. ಕಾರ್ಯಕ್ರಮದಲ್ಲಿ ಪರಮ ಪೂಜ್ಯ ಡಾ. ಶ್ರೀ ಶಿವಾನಂದ ಭಾರತಿ ಮಹಾಸ್ವಾಮೀಜಿಗಳು ಹಾಗೂ ಪರಮ ಪೂಜ್ಯ ಪೂರ್ಣಾನಂದ ಭಾರತಿ ಮಹಾ ಸ್ವಾಮೀಜಿಗಳು ಗ್ರಾಮದೇವಿಯ ದೇವಸ್ಥಾನಕ್ಕೆ ಆಗಮಿಸಿ ದೇವಿಗೆ ಉಡಿ ತುಂಬಿ ಮಂಗಳಾರತಿಯನ್ನು ನೆರವೇರಿಸಿದರು ಗ್ರಾಮದ ಸುಮಂಗಲರು ಆರತಿ ತೆಗೆದುಕೊಂಡು ದೇವಿಗೆ ಉಡಿ ತುಂಬಲು ತಾಂಬೂಲ ಹಣ್ಣು ಕಾಯಿ, ಹೋಳಿಗೆ, ಕಡಬು ನೈವೇದ್ಯವನ್ನು ನೀಡಿ ಗ್ರಾಮದಲ್ಲಿ ಬರುವ ದೇವಸ್ಥಾನಗಳಿಗೆ ನೈವೇದ್ಯ ನೀಡಿದರು. ನಾಡಿಗೆ ಒಳ್ಳೆಯದಾಗಲಿ ಈ ವರ್ಷ ಚೆನ್ನಾಗಿ ಮಳೆ ಬೆಳೆ ನೀಡಲಿ, ಯಾವುದೇ ರೋಗಗಳು ಬರದಂತೆ ದೇವಿಯ ಆಶೀರ್ವಾದ ನಮಗೆಲ್ಲ ಇರಲಿ ಎಂದು ಗುರುಹಿರಿಯರು ಹಾಗೂ ಮಹಿಳೆಯರು ಬೇಡಿಕೊಂಡರು.