ಕರ್ನಾಟಕ ಯುವ ರಕ್ಷಣಾ ವೇದಿಕೆಯ ಅತ್ತ್ಯುತ್ತಮ ಜಿಲ್ಲಾ ಅಧ್ಯಕ್ಷರಾಗಿ ಬಸವರಾಜ್ ತುಬಾಕಿ ಆಯ್ಕೆ.
ಬೆಳಗಾವಿ. ಕನ್ನಡ ನಾಡು ನುಡಿ, ಸಂಘಟನೆಯಲ್ಲಿ ಕರ್ನಾಟಕ ಯುವ ರಕ್ಷಣಾ ವೇದಿಕೆಯಲ್ಲಿ ಅತ್ತ್ಯುತ್ತಮ ಸೇವೆ ಸಲ್ಲಿಸಿದ್ದಕ್ಕಾಗಿ ಬೆಳಗಾವಿ ಜಿಲ್ಲಾ ಯುವ ರಕ್ಷಣಾ ವೇದಿಕೆ ಅಧ್ಯಕ್ಷ ಬಸವರಾಜ ಶಿ. ತುಬಾಕಿ ಇವರಿಗೆ ಅತ್ತ್ಯುತ್ತಮ ಜಿಲ್ಲಾ ಅಧ್ಯಕ್ಷ ಪ್ರಶಸ್ತಿ, ಅತ್ತ್ಯುತ್ತಮ ಸಂಘಟನಾ ಜಿಲ್ಲಾ ತಂಡ ಪ್ರಶಸ್ತಿ ಮತ್ತು ಅತ್ತ್ಯುತ್ತಮ ಜಿಲ್ಲಾ ಕಾರ್ಯದರ್ಶಿ ಪ್ರಶಸ್ತಿ, ಜಿಲ್ಲೆಯ 6 ತಾಲೂಕು ಅಧ್ಯಕ್ಷರಿಗೆ ಅತ್ತ್ಯುತ್ತಮ ತಾಲೂಕು ಸಂಘಟನಾ ಅಧ್ಯಕ್ಷ ಪ್ರಶಸ್ತಿ ನೀಡುತ್ತಿರುವದು ಬೆಳಗಾವಿ ಜಿಲ್ಲೆಯ ಹೆಮ್ಮೆಯ ವಿಷಯ ಎಂದು ನಟ, ಹಿರಿಯ ಸಾಹಿತಿ ಡಾ. ವಿ ನಾಗೇಂದ್ರಪ್ರಸಾದ ಹೇಳಿದರು.
ಅವರು ಚಿಕ್ಕಬಳ್ಳಾಪುರ ಸಮೀಪದ ಹನಿಯೂರು ಸಮೀಪದ ಹಸಿರು ಭೂಮಿ ರೆಸಾರ್ಟ್ ನಲ್ಲಿ ಅಯೋಗಿಸಲಾಗಿದ್ದ ಕರ್ನಾಟಕ ಯುವ ರಕ್ಷಣಾ ವೇದಿಕೆ ರಾಜ್ಯ ಘಟಕದ 12 ನೇ ವರ್ಷದ ರಾಜ್ಯ ಕಾರ್ಯಕಾರಿಣಿ ಸಭೆ ಹಾಗೂ ಸಾರ್ಥಕ ಕಥೆಯ ಸಂಭ್ರಮದ ಮತ್ತು ಅತ್ತ್ಯುತ್ತಮ ಸೇವಾ ಸಂಘಟನೆ ಮಾಡಿದ ಸಾಧಕರಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷರಾದ ಸುನಿಲ್ ಎಂ, ಎಸ್, ದೊಡ್ಡಬಳ್ಳಾಪುರ ನಗರ ಯೋಜನಾ ಆಯೋಗ ಅಧ್ಯಕ್ಷರಾದ್ ಮಂಜೇಗೌಡ್ರು , ರಾಜ್ಯ ಕಾರ್ಯಾದ್ಯಕ್ಷರಾದ ಪ್ರಭಾಕರ್ ಆರ್ ,ರಾಜ್ಯ ಉಪಾಧ್ಯಕ್ಷರಾದ ಮಹಾಂತೇಶ ಕೂಲಿನವರ , ರಾಜ್ಯ ಕಾರ್ಮಿಕ ಘಟಕ ಗುರುಪ್ರಸಾದ್ ,ನಟ ಅಲ್ಟಿಮೆಟ್ ಸ್ಟಾರ್ ದೀಪಕ್,ನಟರಾಜ್ ಬೊಮ್ಮಸಂದ್ರ, ಎಲ್ಲ ರಾಜ್ಯ ಮತ್ತು ಎಲ್ಲ ಜಿಲ್ಲಾ, ತಾಲೂಕು ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು .