ಬೈಲಹೊಂಗಲ ತಾಲೂಕಿನ ಮೇಕಲಮರಡಿ ಗ್ರಾಮದಲ್ಲಿ ಅದ್ದೂರಿಯಿಂದ ಬಸವ ಜಯಂತಿ ಆಚರಿಸಿದರು.

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಬೈಲಹೊಂಗಲ ತಾಲೂಕಿನ ಮೇಕಲಮರಡಿ
 ಗ್ರಾಮದಲ್ಲಿ ಅದ್ದೂರಿಯಿಂದ ಬಸವ ಜಯಂತಿ ಆಚರಿಸಿದರು. 

ಮೇಕಲಮರಡಿ -- ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮೇಕಲಮರಡಿ ಗ್ರಾಮದಲ್ಲಿ ಬಸವ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು.

ಮುಂಜಾನೆ ಸಾಂಸ್ಕೃತಿಕ ನಾಯಕ ವಿಶ್ವ ಗುರು ಶ್ರೀ ಬಸವೇಶ್ವರ ಭಾವ ಚಿತ್ರಕ್ಕೆ ಅಲಂಕಾರ ಮಾಡಿ ಪೂಜೆ ಸಲ್ಲಿಸಿ ನೈವೇದ್ಯ ಅಪಿ೯ಸಲಾಯಿತು.

ಸಾಯಂಕಾಲ ಗ್ರಾಮದ ರೈತರು ತಮ್ಮ ಏತ್ತುಗಳಿಗೆ ವಿಷೇಶವಾಗಿ ಅಲಂಕಾರ ಮಾಡಿ ಮೆರವಣಿಗೆಯಲ್ಲೀ ಪಾಲ್ಗೊಂಡರು.

ಸುಮಾರು 10 ಜೋಡು ಎತ್ತುಗಳು ಮೆರವಣಿಗೆಯಲ್ಲಿ ಭಾಗಿಯಾಗಿದ್ದು ನೋಡುಗರ ಕಣ್ಮನ ಸೆಳೆದವು.

ಯುವಕರು ಗುಲಾಲ ಎರುಚುತ್ತಾ ಜೈ ಬಸವೇಶ್ವರ ಮಾಹಾರಾಜಕಿ ಜೈ ಎಂದು ಘೋಷಣೆ ಕೂಗಿ ಸಂಭ್ರಮಿಸಿದರು.

ಶ್ರೀ ವಿಶ್ವ ಗುರು ಬಸವೇಶ್ವರ ಭಾವಚಿತ್ರ ಸಮೇತ ಅಲಂಕಾರಗೊಂಡ ಎತ್ತುಗಳನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಅದ್ದೂರಿಯಾಗಿ ಮೆರವಣಿಗೆ ಮಾಡಿದರು.

ವರದಿ ಬಸವರಾಜ ಕುರಗುಂದ 
ಕಿತ್ತೂರು ಕ್ರಾಂತಿ ಟಿವಿ ಮೇಕಲಮರಡಿ

Post a Comment

0Comments

Post a Comment (0)