Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ...
ಚಿಕ್ಕಮಗಳೂರು: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಫಿನಾಡು ವಿಶೇಷತೆಗಳಿಗೆ ಸಾಕ್ಷಿಯಾಗಿದ್ದು, ಮಧುಮಗಳು, ಮಠಾಧೀಶರು, ವಿದೇಶದಿಂದ ಬಂದ ದಂಪತಿಗಳು ಬಂದು ಮತ ಚಲಾಯಿಸಿದರೇ ಮೋದಿ ಅಭಿಮಾನಿಯೊಬ್ಬರು ಮೋದಿ ಮತ್ತೊಮ್ಮೆ ಪ್ರಧಾನಿಯಾಗಲ್ಲೇಂದು ಶೃಂಗೇರಿ ಶ್ರೀ ಶಾರದಾ ದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಮೋದಿ ಹೆಸರಿನಲ್ಲಿ ರಶೀದಿ ಪಡೆದಿರುವ ಅಭಿಮಾನಿ ಸಹಸ್ರನಾಮ ಅರ್ಚನೆ ನರೇಂದ್ರ ಮೋದಿ ಅನುರಾಧ ನಕ್ಷತ್ರ ವೃಶ್ಚಿಕ ರಾಶಿ ಹೆಸರಿನಲ್ಲಿ ಸಹಸ್ರನಾಮ ಅರ್ಚನೆ ಮಾಡಿಸಿದ್ದಾನೆ.
ದೇಶದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಅಧಿಕಾರಕ್ಕೆ ಬರಬೇಕು ಎಂದು ಆಶಿಸಿ ವಿಶೇಷ ಪೂಜೆ ಸಲ್ಲಿಸಿದ್ದಾನೆ.