ಲೋಕಸಭೆ ಚುನಾವಣೆ ಪ್ರಚಾರಾರ್ಥಕವಾಗಿ 28 ರಂದು ಮೋದಿಜಿ ಕುಂದಾ ನಗರಕ್ಕೆ ಆಗಮನ...

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಬೆಳಗಾವಿಯ ಕಾಕತಿ ಬರುವ ವೆಲ್ ಕಮ್ ಹೋಟೆಲ್ ಬೆಳಗಾವಿಯಲ್ಲಿ ವಾಸ್ತವ್ಯ...

ರಾಣಿ ಚೆನ್ನಮ್ಮ ಜಿ ಜನ್ಮಸ್ಥಳಕ್ಕೆ ಪ್ರಧಾನಿ ಮೋದಿ ಗೌರವ ಸಲ್ಲಿಸುವರೇ?
" *ಕಿತ್ತೂರಕರ್ನಾಟಕ ರಕ್ಷಣಾ ವೇದಿಕೆ"* 
         *ಕಿತ್ತೂರು ಸಂಸ್ಥಾನದ ರಾಣಿ ಚೆನ್ನಮ್ಮಾಜಿ ಬ್ರೀಟಿಷರ ಆಡಳಿತದ ವಿರುದ್ಧ ದೇಶದಲ್ಲಿಯೇ ಪ್ರಥಮ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಚ್ಚಿದ* *ವೀರ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಇವರು 1824 ಅಕ್ಟೋಬರ್ 23ರಂದು ಕಿತ್ತೂರಿನಲ್ಲಿ ಬ್ರಿಟಿಷ್ ಸೇನೆಯ ಜೊತೆ ಹೋರಾಟ* *ನಡೆಸಿ ದಾರವಾಡದ ಕಲೆಕ್ಟರ್ ಬ್ರಿಟಿಷ್ ಅಧಿಕಾರಿ ರ್ಥ್ಯಾಕರೆಯವರನ್ನು ಗುಂಡಿಕ್ಕುವ* *ಮೂಲಕ ಯುದ್ದದಲ್ಲಿ ವಿಜಯ ಸಾಧಿಸಿದ ವೀರಮಹಿಳೆ ಕಿತ್ತೂರ ರಾಣಿ ಚೆನ್ನಮ್ಮಾಜಿಯವರು.* 
         *ಇವರು ಬೆಳಗಾವಿ ನಗರದಿಂದ ಐದು ಕಿಲೋಮೀಟರ್ ಅಂತರದಲ್ಲಿರುವ ಕಾಕತಿ ಗ್ರಾಮದ ದೇಸಾಯಿ ದಂಪತಿಗಳ ಉದರದಲ್ಲಿ ಜನ್ಮತಾಳಿದ ಚೆನ್ನಮ್ಮಾಜಿ ದೇಸಾಯಿ ವ್ಯಾಡೆಯಲ್ಲಿ ತಮ್ಮ ಬಾಲ್ಯಾವಸ್ಥೆಯನ್ನು ಶಿಕ್ಷಣ ಕುದುರೆ ಸವಾರಿ ಕತ್ತಿವರಸೆ ಅಭ್ಯಾಸ ಮಾಡಿದ ತವರೂರು ಜನ್ಮಸ್ಥಳ ಈ ಕಾಕತೀಯ ದೇಸಾಯಿ ವ್ಯಾಡೆ ಆಗಿದೆ.*
       *ಕಿತ್ತೂರು ಚೆನ್ನಮ್ಮ ಅಬಿವೃದ್ಧಿ ಪ್ರಾಧಿಕಾರವು 2008ರಲ್ಲಿ ರಚನೆಯಾಗಿದ್ದರೂ ಕಿತ್ತೂರು ಚೆನ್ನಮ್ಮಾಜಿ ಜನ್ಮಸ್ಥಳವಾದ ಕಾಕತಿ ದೇಸಾಯಿ ವ್ಯಾಡೆಯು ಮಾತ್ರ ಕೇಂದ್ರ/ರಾಜ್ಯ ಸರ್ಕಾರದಿಂದ ಸಂಪೂರ್ಣ ನಿರ್ಲಕ್ಷಕ್ಕೆ ಒಳಗಾಗಿದೆ. ಕಾಕತಿ ಗ್ರಾಮ ಪಂಚಾಯಿತಿ ಆಸ್ತಿ ಸಂಖ್ಯೆ:521ಇದ್ದು ಆಗಿನ ದೇಸಾಯಿ ವಾಡೆ 39ಗುಂಟೆ ಕ್ಷೇತ್ರವನ್ನು ಹೊಂದಿದ್ದು ಚೆನ್ನಮ್ಮಾಜಿ ಪೂರ್ವಜರಾದ ಪ್ರಭುಲಿಂಗ ಕೆ ದೇಸಾಯಿ ಇತರರ ಹೆಸರಿನಲ್ಲಿ ಇರುತ್ತದೆ.*
         *2024 ಲೋಕಸಭೆ ಚುನಾವಣೆ ಪ್ರಯುಕ್ತ ದೇಶದ ಪ್ರಧಾನಿ ಶ್ರೀ ನರೇಂದ್ರ ಮೋದಿಜೀ ಕಿತ್ತೂರ ರಾಣಿ ಚನ್ನಮ್ಮಾಜಿ ಜನ್ಮಸ್ಥಳದಿಂದ ಕೇವಲ 1ಕಿಲೋಮೀಟರ ಅಂತರದಲ್ಲಿರುವ ಐಟಿಸಿ ವಲ್ ಕಂ ಹೊಟೇಲ್ ನಲ್ಲಿ ಪ್ರಥಮ ಬಾರಿಗೆ ದಿ.27/04/24ರಂದು ವಾಸ್ಥವ್ಯೆ ಮಾಡಲಿದ್ದಾರೆಂದು ವರದಿಯಾಗಿದೆ.*
      *ದೇಶದಲ್ಲಿಯೇ ಬ್ರಿಟಿಷ್ ರ ವಿರುದ್ಧ ಪ್ರಥಮ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಚ್ಚಿದ ವೀರ ರಾಣಿ ಕಿತ್ತೂರು ಚೆನ್ನಮ್ಮಾಜಿ ಜನ್ಮಸ್ಥಳವಾದ ಕಾಕತಿ ದೇಸಾಯಿ ವಾಡೆಗೆ ಪ್ರಧಾನಿ ಶ್ರೀ ನರೇಂದ್ರ ಮೋದಿಯವರನ್ನು ಇಲ್ಲಿ ಕರೆತಂದು ಈ ಜನ್ಮಸ್ಥಳಕ್ಕೆ ಗೌರವ ವಂದನೆ ಸಲ್ಲಿಸುವಂತೆ ಈ ಬಾಗದ ಸಂಸದ ಶ್ರೀ ಅಣ್ಣಾಸಾಬ್ ಜೊಲ್ಲೆ ಹಾಗು ಬಿಜೆಪಿ ಪ್ರಮುಖರಲ್ಲಿ ಕಿತ್ತೂರಕರ್ನಾಟಕ ರಕ್ಷಣಾ ವೇದಿಕೆ ಮುಖ್ಯ ಸಂಘಟಿಕ ಶ್ರೀ ಬಿ.ಎಂ.ಚಿಕ್ಕನಗೌಡರ ವಿನಂತಿಸಿದ್ದಾರೆ.*


Post a Comment

0Comments

Post a Comment (0)