ಬೆಳಗಾವಿಯಲ್ಲಿ ಬಾಡಿಗೆ ಮನೆ ಮಾಡಿದ ಜಗದೀಶ ಶೆಟ್ಟರ್
ಬೆಳಗಾವಿ: ಬೆಳಗಾವಿ ನನ್ನ ಕರ್ಮ ಭೂಮಿ, ಬೆಳಗಾವಿಯಲ್ಲೇ ಮನೆ ಮಾಡುತ್ತೇನೆ ಎಂದು ಟಿಕೆಟ್ ಘೋಷಣೆಯಾದ ಸಂದರ್ಭದಲ್ಲಿ ಹೇಳಿದ್ದ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಇದೀಗ ಬಾಡಿಗೆ ಮನೆ ಮಾಡಿದ್ದಾರೆ.
ಇಲ್ಲಿಯ ಕುಮಾರಸ್ವಾಮಿ ಬಡಾವಣೆಯಲ್ಲಿ ಎರಡು ಮಹಡಿಯ ಬಾಡಿಗೆ ಮನೆಯೊಂದನ್ನು ಹಿಡಿದಿದ್ದು ಯುಗಾದಿಯ ಸಂದರ್ಭದಲ್ಲಿ ಪೂಜೆ ಮಾಡಿ ಮನೆ ಪ್ರವೇಶಿಸಿದ್ದಾರೆ.
ಒಂದು ಹಂತದಲ್ಲಿ ಚುನಾವಣೆ ಫಲಿತಾಂಶ ನೋಡಿ ಬೆಳಗಾವಿಯಲ್ಲಿ ಮನೆ ಮಾಡುವ ಯೋಚನೆಯನ್ನು ಜಗದೀಶ್ ಶೆಟ್ಟರ್ ಮಾಡಿದ್ದಾರೆ ಎನ್ನುವ ಸುದ್ದಿ ಕೂಡ ಹರಡಿತ್ತು. ಆದರೆ, ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ ಅಡ್ರೆಸ್ ಯಾವುದು ಎನ್ನುವ ಪ್ರಶ್ನೆ ಎದ್ದಾಗ, ಶೆಟ್ಟರ್ ಜೊತೆಗೆ ಬಿಜೆಪಿ ಮುಖಂಡರೂ ನಿರುತ್ತರರಾಗುತ್ತಿದ್ದರು. ಕೊನೆಗೆ, ಸುರೇಶ ಅಂಗಡಿ ಅವರ ಮನೆಯೆ ಜಗದೀಶ್ ಶೆಟ್ಟರ್ ಅಡ್ರೆಸ್ ಎಂದು ಸಮರ್ಥಿಸಿಕೊಳ್ಳುವ ಯತ್ನ ನಡೆದಿತ್ತು.