ದ್ವಿತೀಯ ಪಿಯುಸಿಯಲ್ಲಿ ವಿದ್ಯಾರ್ಥಿಗಳ ಸಾಧನೆ

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0

ದ್ವಿತೀಯ ಪಿಯುಸಿಯಲ್ಲಿ ವಿದ್ಯಾರ್ಥಿಗಳ ಸಾಧನೆ

ಬೈಲಹೊಂಗಲ: ಸಮೀಪದ ಇಂಚಲ ಗ್ರಾಮದ ಶಿವಾನಂದ ಭಾರತಿ ಶಿಕ್ಷಣ ಸಂಸ್ಥೆಯ ಶಿವಯೋಗೀಶ್ವರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ದ್ವಿತೀಯ ಪಿಯುಸಿ ಫಲಿತಾಂಶ ಶೇ.77 ರಷ್ಟಾಗಿದೆ.

ಕಲಾ ವಿಭಾಗದಲ್ಲಿ ವಿದ್ಯಾರ್ಥಿನಿ ಮಹಾದೇವಿ ದರಗುಂಟಿ ಶೇ.97.66 ಪ್ರಥಮ, ಅನಿತಾ ಹಾರೂಗೊಪ್ಪ 95.83, ಯಶೋಧಾ ನಿಂಗೋಜಿ ದ್ವಿತೀಯ 95.83, ಸ್ಪೂರ್ತಿ ದೇಸಾಯಿ 95.5 ತೃತೀಯ ಸ್ಥಾನ ಪಡೆದಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಸ್ನೇಹಾ ಸೋಮಣ್ಣವರ 96 ಪ್ರಥಮ, ರಾಹುಲ್ ಗೌಡರ 93.67 ದ್ವಿತೀಯ, ನಾಗಪ್ಪ ಹಂಜಿ 93.5, ಕಸ್ತೂರಿ ಪಮ್ಮಾರ 93.5 ತೃತೀಯ ಸ್ಥಾನ ಪಡೆದಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ತೇಜಸ್ವಿನಿ ಸಂಗನಗೌಡರ 94.3 ಪ್ರಥಮ, ಸವಿತಾ ಚವಲಿ 92.5 ದ್ವಿತೀಯ, ಕೀರ್ತಿ ಶಿಂತ್ರಿ 91.5 ತೃತೀಯ ಸ್ಥಾನ ಪಡೆದಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆ ಅಧ್ಯಕ್ಷ ಶಿವಾನಂದ ಭಾರತಿ ಸ್ವಾಮೀಜಿ, ಆಡಳಿತಾಧಿಕಾರಿ ಪೂರ್ಣಾನಂದ ಸ್ವಾಮೀಜಿ, ಪ್ರಾಚಾರ್ಯ ಎಸ್.ಟಿ.ಕಾಂಬಳೆ ಹಾಗೂ ಆಡಳಿತ ಮಂಡಳಿ ಸದಸ್ಯರು, ಉಪನ್ಯಾಸಕರು ಹರ್ಷ ವ್ಯಕ್ತಪಡಿಸಿದ್ದಾರೆ.

Post a Comment

0Comments

Post a Comment (0)