ಸ್ಪಂದನ ಕಾಲೇಜು ಇಳಕಲ್ -ಹುನಗುಂದ - ಅವಳಿ ತಾಲೂಕುಗಳಿಗೆ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ,
ಇಳಕಲ್
ಇಳಕಲ್ :-ಸ್ಥಳೀಯ ಪ್ರತಿಷ್ಠಿತ ಸ್ಪಂದನ ಪದವಿ ಪೂರ್ವ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ೨೦೨೩-೨೪ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೇಯ – ೧ ರ ಫಲಿತಾಂಶದ ವಿಜ್ಞಾನ ವಿಭಾಗದಲ್ಲಿ ಅವಳಿ ತಾಲೂಕುಗಳಿಗೆ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತಿಯ ಸ್ಥಾನವನ್ನು ಪಡೆದಿರುತ್ತಾರೆಂದು ಕಾಲೇಜಿನ ಪ್ರಾಚಾರ್ಯರಾದ ಅಮರೇಶ, ಬಿ ಕೌದಿಯವರು ತಿಳಿಸಿದರು.
ಪ್ರಥಮ ಸ್ಥಾನ ಕು. ಸುಧಾ, ಜಿ, ಹಂಗರಗಿ ೫೮೮/೬೦೦ (೯೮%), ದ್ವಿತೀಯ ಸ್ಥಾನ ಕು. ಅಕ್ಷತಾ, ಜೆ, ಹಂಪನಾಳ ೫೮೪/೬೦೦ (೯೭.೩೩%) ತೃತೀಯ ಸ್ಥಾನ ಕು. ಸುಷ್ಮೀತಾ, ಆರ್, ಕೋಟಿ ೫೮೦/೬೦೦ (೯೬.೬೬%) ಅಂಕಗಳನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಕಾಲೇಜಿನ ಒಟ್ಟು ೨೬೦ ವಿದ್ಯಾರ್ಥಿಗಳಲ್ಲಿ ಅತ್ಯುತ್ತಮ ಶ್ರೇಣಿ-೧೧೯, ಪ್ರಥಮ ಶ್ರೇಣಿ-೧೩೪ ಹಾಗೂ ದ್ವಿತೀಯ ಶ್ರೇಣಿಯಲ್ಲಿ-೦೪ ವಿದ್ಯಾಥಿ೯ಗಳು ತೆರ್ಗಡೆ ಹೊಂದಿರುತ್ತಾರೆ ಹಾಗೂ ಒಟ್ಟು ಕಾಲೇಜಿನ ಫಲಿತಾಂಶ ೯೮.೮೪% ಬಂದಿರುತ್ತದೆಂದು ತಿಳಿಸಿದರು.
ಕಾಲೇಜಿನ ನಿರ್ದೇಶಕ, ಉಪನ್ಯಾಸಕರಾದ ವೀರೇಶ. ಡಿ. ಬಾಚೇನಹಳ್ಳಿ, ರವಿ.ಎಲ್. ಅರಸಿದ್ದಿ ಮತ್ತು ಬಸವರಾಜ.ಸಿ.ತುಂಬಗಿ ಹಾಗೂ ಬೋಧಕ & ಬೋಧಕೇತರ ಸಿಬ್ಬಂದಿಗಳು ಶುಭಕೋರಿದ್ದಾರೆ.