ಬೈಲಹೊಂಗಲ ತಾಲೂಕಿನ ಯರಡಾಲ ಗ್ರಾಮದಲ್ಲಿ ಶ್ರೀ ಗ್ರಾಮದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಶ್ರೀದೇವಿಗೆ ಹೋಮ್, ಹವನ, ವಿಶೇಷ ಪೂಜೆ, ಪ್ರಾರ್ಥನೆ, ಕುಂಕುಮಾರ್ಚನೆ, ಪೂಜಾ ವಿಧಿ - ವಿಧಾನಗಳು ಯಮಕನಮರಡಿಯ ವೇ. ಮೂ. ಚೇತನ್ ಹಾಗೂ ಗುರುಸ್ವಾಮಿ ಇವರ ನೇತೃತ್ವದಲ್ಲಿ ಸಂಭ್ರಮದಿಂದ್ ಜರುಗಿದವು. ಈ ಸಂಧರ್ಭದಲ್ಲಿ ವೇ . ಮೂ. ದುಂಡಯ್ಯ ಹಿರೇಮಠ, ಶ್ರೀ ಗ್ರಾಮದೇವಿ ಜಾತ್ರಾ ಮಹೋತ್ಸವ ಕಮಿಟಿಯ ಅಧ್ಯಕ್ಷ ಸಿ. ಆರ್. ಪಾಟೀಲ್, ಬಸಪ್ಪ ಬನಶೆಟ್ಟಿ, ಮಲ್ಲಪ್ಪ ರಾಜಗೋಳಿ, ಮಲ್ಲನಗೌಡ ಪಾಟೀಲ್, ಬಸನಗೌಡ ಪಾಟೀಲ್, ಪಿಕೆಪಿಸ್ ಅಧ್ಯಕ ಈರಣ್ಣ ವಾರದ ಮತ್ತು ಗ್ರಾ. ಪಂ, ಸದಸ್ಯರು, ಜಾತ್ರಾ ಮಹೋತ್ಸವ ಕಮಿಟಿಯ ಸದಸ್ಯರು, ಹಿರಿಯರು, ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.
ಬೈಲಹೊಂಗಲ ತಾಲೂಕಿನ ಯರಡಾಲ ಗ್ರಾಮದಲ್ಲಿ ಶ್ರೀ ಗ್ರಾಮದೇವಿ ಜಾತ್ರಾ ಮಹೋತ್ಸವ...
By -
April 19, 2024
0
Tags: