ನಾಲ್ಕು ದಿನಗಳ ಕಾಲ ನಿರಂತರ ರಾಮನಾಮಸ್ಮರಣೆ ಬೈಲೂರ, ತಿಗಡೂಳ್ಳಿ, ಹುಣಶೀಕಟ್ಟಿ ಅನೇಕ ಗ್ರಾಮದ ಪ್ರತಿದಿನ ಸಾಯಂಕಾಲ ಭಜನೆ ಮಾಡಿದರು ಮತ್ತು ಎಂ.ಕೆ.ಹುಬ್ಬಳ್ಳಿ ಅಶ್ವತ್‌ಲಕ್ಷಿö್ಮÃ ನರಸಿಂಹ ದೇವಸ್ಥಾನದ ಮಹಿಳಾ ಭಕ್ತರು ಕೀರ್ತನ ಸೇವೆ ಮಾಡಿದರು. ಜಾತ್ರೆಗೆ ಬಂದ ಭಕ್ತರಿಗೆ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಶ್ರೀಮಠಕ್ಕೆ ಆಗಮಿಸಿದ ಭಕ್ತರು ಶ್ರೀರಾಮನ ದರ್ಶನ ಪಡೆದರು.
ಚನ್ನಮ್ಮನ ಕಿತ್ತೂರ ತಾಲೂಕಿನ ಕಾದರವಳ್ಳಿ ಗ್ರಾಮದ ಶ್ರೀರಾಮ ಮಂದಿರದ ಖಂಡೂ ಬಾಬಾ ಆಶ್ರಮದಲ್ಲಿ ರಾಮ ನವಮಿ ಜಾತ್ರಾ ಮಹೋತ್ಸವ ಏ.೧೪ ರಿಂದ ಶ್ರೀ ರಾಮನವಮಿ ಜಾತ್ರೆ ಆರಂಭವಾಗಿದ್ದು ಏ.೧೭ ಬುಧವಾರ ರಂದು ಶ್ರೀರಾಮ ನವಮಿಯ ಅದ್ಧೂರಿ ಆಚರಣೆಯೊಂದಿಗೆ ಸಂಪನ್ನಗೂAಡಿತು.
ಪ್ರತಿದಿನ ಮುಂಜಾನೆ ಮತ್ತು ಸಾಯಂಕಾಲ ಅನೇಕ ಮಹಾತ್ಮರಿಂದ ಪ್ರವಚನ ಮತ್ತು ರಾಮ ನಾಮಸ್ಮರಣೆ, ನಡೆಯಿತು. ಏ ೧೭ ರಂದು ಶ್ರೀರಾಮ ದೇವರನ್ನು ತೊಟ್ಟಲಲ್ಲಿ ಹಾಕಿ, ಮುತೈದಿಯರು ಆರತಿ ಬೆಳಗಿ ಜೋಗುಳ ಪದ ಹಾಡಿದರು, ಮಕ್ಕಳಾಗದವರು ಸಂತಾನ ಭಾಗ್ಯಕ್ಕಾಗಿ ಮಹಿಳೆಯರು ಶ್ರೀರಾಮನ ಸನ್ನಿದಾನದಲ್ಲಿ ತೊಟ್ಟಿಲನ್ನು ತೂಗಿ ಬೇಡಿಕೊಂಡು ಉಡಿ ತುಂಬಿಸಿಕೊAಡರು, ನಂತರ ವರ ಪಡೆದವರು ಟೆಂಗಿನ ಕಾಯಿ ತುಲಾಭಾರ ಸೇವೆ ಮಾಡಿದರು. ೪ ದಿನಗಳ ಕಾಲ ಸಾವಿರಾರು ಭಕ್ತರು ಹಾಗೂ ಮಹಾತ್ಮರ ಸನ್ನಿಧಾನದಲ್ಲಿ ರಾಮನವಮಿ ಉತ್ಸವ ಅದ್ಧೂರಿಯಾಗಿ ಆಚರಿಸಲಾಯಿತು.
ಶ್ರೀಮಠದ ಪೀಠಾಧಿಪತಿಗಳಾದ ಗುರುಪುತ್ರ ಮಹಾರಾಜರಿಗೆ ಕಿರೀಟ ಧಾರಣೆ, ಮಹಾಪೂಜೆ ಕಾರ್ಯಕ್ರಮ ನೆರವೇರಿಸಲಾಯಿತು. ತುಳಸಿಗೇರಿ ರಾಮಾನಂದ ಮಹಾಸ್ವಾಮಿಜಿ ಅಧ್ಯಕ್ಷತೆ ವಹಿಸಿದ್ದರು. ರೂಗಿ ಅಡವಿದ್ದೇಶ್ವರ ಮಠದ ನಿತ್ಯಾನಂದ ಸ್ವಾಮಿಜಿ, ಸವಟಗಿಯ ಲಿಂಗಯ್ಯಾ ಸ್ವಾಮಿಜಿ, ನೇಗಿನಾಳದ ಅದ್ವೆöÊತಾನಂದ ಸ್ವಾಮಿಜಿ, ಮಾಜಿ ಶಾಸಕ ಮಹಾಂತೇಶ ದೊಡಗೌಡರ, ಜಿಪಂ ಮಾಜಿ ಉಪಾಧ್ಯಕ್ಷ ಚನ್ನಬಸಪ್ಪ ಮೊಖಾಶಿ ಹಾಗೂ ನಾನಾ ಮಠದ ಶ್ರೀಗಳು, ಅನೇಕ ಗಣ್ಯರು ಉಪಸ್ಥಿತರಿದ್ದರು.