ಹಿರೇಕೋಡಿ ಜ ಪಂ ನಲ್ಲಿ ಹೆಚ್ಚಿನ ಅಭಿವೃದ್ಧಿಗೆ ಪ್ರಿಯಾಂಕಾ ಜಾರಕಿಹೋಳಿಗೆ ಮತ ನೀಡಿ:ವಿ.ಪ ಸದಸ್ಯ ಪ್ರಕಾಶ್ ಹುಕ್ಕೇರಿ...

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಹಿರೇಕೋಡಿ ಜಿ.ಪಂ ನಲ್ಲಿ ಹೆಚ್ಚಿನ  ಅಭಿವೃದ್ಧಿಗೆ ಪ್ರೀಯಾಂಕಾ ಜಾರಕಿಹೋಳಿಗೆ ಮತ ನೀಡಿ:ವಿ.ಪ ಸದಸ್ಯ ಪ್ರಕಾಶ ಹುಕ್ಕೇರಿ
ಚಿಕ್ಕೋಡಿ:ಹಿರೇಕೋಡಿ ಜಿಲ್ಲಾ ಪಂಚಾಯತ ಸರ್ವಾಂಗೀಣ ವಿಕಾಸಕ್ಕೆ ಶ್ರಮಿಸಿದೇನೆ.ಹೀಗಾಗಿ ಇನ್ನೂ ಹೆಚ್ಚಿನ ಅಭಿವೃದ್ಧಿಗಾಗಿ ನಮ್ಮ ಅಭ್ಯರ್ಥಿಯಾದ ಪ್ರೀಯಾಂಕಾ ಜಾರಕಿಹೋಳಿಗೆ ಮತವನ್ನು ನೀಡಿ ಎಂದು ವಿ‌.ಪ ಸದಸ್ಯ ಹಾಗೂ ದೆಹಲಿಯ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ ಹೇಳಿದರು.
ಚಿಕ್ಕೋಡಿ ಲೋಕಸಭಾ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿಯಾದ ಪ್ರೀಯಾಂಕಾ ಜಾರಕಿಹೋಳಿಪರ ಪ್ರಚಾರರ್ಥವಾಗಿ ಚಿಕ್ಕೋಡಿ ತಾಲೂಕಿನ ನೇಜ್ ಗ್ರಾಮದಲ್ಲಿ ಹಿರೆಕೋಡಿ  ಜಿಲ್ಲಾ ಪಂಚಾಯತ ಚುನಾವಣೆಯ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.ನೇಜ್ ಗ್ರಾಮದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದೇನೆ.ಕಾರ್ಯಕರ್ತರೆ ನನ್ನ ಗುರು.ಎಲ್ಲಿಯವರೆಗೆ ರಾಜಕೀಯದಲ್ಲಿ ಇರೋತೀನಿ ಅಲ್ಲಿಯವರೆಗೆ ಜನರ ಸೇವೆಯನ್ನು ಮಾಡಿಕೊಂಡು ಬರುತ್ತೇನೆ.ಶಾಸಕ ಗಣೇಶ ಹುಕ್ಕೇರಿಯವರ ಕೈ  ಮತ್ತಷ್ಟು ಬಲ ಪಡಿಸಲು ನಮ್ಮ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರೀಯಾಂಕಾ ಜಾರಕಿಹೋಳಿ ಮತವನ್ನು ನೀಡಿ ಎಂದರು.ಯಡೂರ ಕಲ್ಲೋಳ ಸೇತುವೆ ಮುಗಿದ ಬಳಿಕ ನೇಜ್ ಕೆರೆಗೆ ೧೨ ತಿಂಗಳ ಕಾಲ ನೀರು ಹರಿಸುತ್ತೇವೆ ಎಂದರು.
ಬಳಿಕ ಮಾಜಿ ಜಿಲ್ಲಾ ಪಂಚಾಯತ ಸದಸ್ಯ  ಸದಸ್ಯ ಸುದರ್ಶನ ಖೋತ‌ ಮಾತನಾಡಿ ಪ್ರಧಾನಿ ಮೋದಿಯವರು  ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಗೆ ೧೫ ಲಕ್ಷ ಹಾಕ್ತಿವಿ,ವರ್ಷಕ್ಕೆ ೨ ಕೋಟಿ ಉದ್ಯೋಗ ಸೃಷ್ಠಿ ಮಾಡುತ್ತೇವೆ ಎಂದು ಸುಳ್ಳು ಹೇಳಿದರು. ಪೆಟ್ರೋಲ್ ,ಡಿಸೆಲ ದರ ಹೆಚ್ಚಳ ಮಾಡಿದರು.ಈ ದೇಶದಲ್ಲಿ ಜಾತಿಯ  ವಿಷ ಬೀಜವನ್ನು ಬಿತ್ತಿ‌ ದೇಶದಲ್ಲಿ ಅಸಮಾಧಾನ ಸೃಷ್ಠಿಸಿದ್ದಾರೆ.ಕಾಂಗ್ರೆಸ್ ಪಕ್ಷವು‌ ಜಾತ್ಯಾತೀತ ಪಕ್ಷವಾಗಿದೆ.ಕರ್ನಾಟಕ ಸರ್ಕಾರದ ಕಾಂಗ್ರೆಸ್ ಸರ್ಕಾರವು ಜಾರಿಗೆ ತಂದಿರುವ ಪಂಚ ಗ್ಯಾರಂಟಿಗಳು ಜನರಿಗೆ ಅನುಕೂಲವಾಗಿದೆ.ಈ ಹಿನ್ನೆಲೆಯಲ್ಲಿ ನಮ್ಮ ಅಭ್ಯರ್ಥಿಯಾದ ಪ್ರೀಯಾಂಕಾ ಜಾರಕಿಹೋಳಿಯವರಿಗೆ ಮತವನ್ನು ನೀಡಿ ಗೆಲ್ಲಿಸಿಕೊಂಡು ಬರೋಣಾ ಎಂದರು.
ಸದಲಗಾ ಬ್ಲಾಕ್ ಅಧ್ಯಕ್ಷ ಅನೀಲ ಪಾಟೀಲ ಮಾತನಾಡಿ ಚಿಕ್ಕೊಡಿ-ಸದಲಗಾ ಕ್ಷೇತ್ರದಿಂದ‌ ಕಾಂಗ್ರೆಸ್ ಅಭ್ಯರ್ಥಿಯಾದ ಪ್ರೀಯಾಂಕಾ ಜಾರಕಿಹೋಳಿಯವರನ್ನು ಹೆಚ್ಚಿನ ಮತಗಳನ್ನು ನೀಡಿ ಗೆಲ್ಲಿಸಿಕೊಂಡು ಬರೋಣಾ..ದೇಶದ ಬಿಜೆಪಿ ಸರ್ಕಾರ ಜನವಿರೋಧಿ ಸರ್ಕಾರವಾಗಿದೆ.ಕಳೆದ ೧೦ ವರ್ಷಗಳಿಂದ ದೇಶದಲ್ಲಿ ಯಾವುದೇ ಅಭಿವೃದ್ಧಿ ಮಾಡಿಲ್ಲ.ಬಿಜೆಪಿ ಪಕ್ಷವು ಹಿಂದೂ-ಮುಸ್ಲಿಂರ ಮಧ್ಯೆ ಜಗಳ ಹಚ್ಚುವ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ‌ರಾಜು ಪಾಟೀಲ, ಮಲ್ಲು ಹವಾಲ್ದಾರ್, ಪುಂಡಲೀಕ ಖೋತಾ ಅಣ್ಣಾಸಾಹೇಬ‌ ಮಗದುಮ್ಮ, ಗ್ರಾಮ ಪಂಚಾಯ ಅಧ್ಯಕ್ಷ್ಯೆ ಅಮೃತಾ ರಾಜಗೌಡ ಪಾಟೀಲ,ಉಪಾಧ್ಯಕ್ಷ ಸೋಲೋಚನಾ,ಅಜಯಸಿಂಹ ಶಿತೋಳೆ ಸರ್ಕಾರ,ಪ್ರಕಾಶ ಮಗದುಮ್ಮ, ಅರುಣ ಬೋನೆ,ರಮೇಶ ಪಾಟೀಲ, ನಿರಂಜನ ಕಾಂಬಳೆ,ಬಾಬಾಣ್ಣಾ ಖೋತ,ಅಪ್ಪು ಸುಟ್ಟಟಿ,ಶಕೀಲ ಬೇಗ,ಸುನೀಲ ಮಹಿಪತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು..

ವರದಿ ರಾಜು ಕೋಳಿ, ಇಂಗಳೆ


Tags:

Post a Comment

0Comments

Post a Comment (0)