ಬೈಲಹೊಂಗಲ: ಬಡ ಜನತೆಯ ಬದುಕು ಹಸನಾಗಿ ಹೊಸ ಬದುಕು ಕಟ್ಟಿಕೊಳ್ಳಲು ಅಲ್ಲಾನು ಆಶೀರ್ವದಿಸಲೆಂದು ಮೌಲಾನಾ ಹಾಫೀಜ್ ಕೊರವಿನಕೊಪ್ಪ ಹೇಳಿದರು.
ಪಟ್ಟಣದ ಈದ್ಗಾ ಮೈದಾನದಲ್ಲಿ ರಂಜಾನ್ ಹಬ್ಬ ಅಂಗವಾಗಿ ಗುರುವಾರ ನಡೆದ ಮುಸ್ಲಿಂ ಸಮಾಜ ಬಾಂಧವರ ಸಾಮೂಹಿಕ ಪ್ರಾರ್ಥನೆ ನೇತೃತ್ವವಹಿಸಿ ಅವರು ಮಾತನಾಡಿದರು.
ಪ್ರಕೃತಿ ಮಾತೆ ಮುನಿದರೆ ಏನೆಲ್ಲಾ ಸಂಕಷ್ಟಗಳು ಎದುರಾಗುತ್ತವೆ ಎಂಬುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಮಾನವನ ದುರಾಸೆಯಿಂದ ಅರಣ್ಯ ನಾಶ ಮಾಡಿ ತಮ್ಮ ಜೀವನಕ್ಕೆ ನಾವೇ ಕುತ್ತು ತಂದುಕೊಳ್ಳುತ್ತಿರುವುದು ದುಃಖದ ಸಂಗತಿಯಾಗಿದೆ.
ಇನ್ನಾದರೂ ಪ್ರತಿಯೊಬ್ಬರು ಪ್ರಕೃತಿ ಮಾತೆಗೆ ಕೇಡು ಬಯಸದೆ ಸಸಿಗಳನ್ನು ನೆಟ್ಟು, ಅವುಗಳ ಲಾಲನೆ, ಪೋಷಣೆ ಮಾಡಿ ಪ್ರಕೃತಿ ಸಂಪತ್ತನ್ನು ಉಳಿಸಿ, ಬೆಳೆಸಿಕೊಂಡು ಹೋಗಬೇಕು. ಸಮಾಜದಲ್ಲಿ ಶಾಂತಿ, ಸಹಬಾಳ್ವೆ, ಸಹೋದರತೆ, ಸೌಹಾರ್ದತೆ ಸದಾಕಾಲ ಇರಬೇಕು. ಈ ವರ್ಷ ಮಳೆ, ಬೆಳೆ ಚನ್ನಾಗಿ ಆಗಿ ನಾಡು ಸಮೃದ್ಧಿಯಿಂದ ಕೂಡಿರಲೆಂದು ಅಲ್ಲಾಹುವಿನಲ್ಲಿ ಪ್ರತಿಯೊಬ್ಬರು ಶ್ರದ್ಧೆ, ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಬೇಕು ಎಂದರು.