Holi Celebration: ಮೆಟ್ರೋ ರೈಲಿನಲ್ಲಿ ಯುವತಿಯರ ಹೋಳಿ; ಅನುಚಿತ ವರ್ತನೆಗೆ ಕಿಡಿ

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಹೊಸದಿಲ್ಲಿ: ಹೋಳಿ ಹಬ್ಬಕ್ಕೆ ಯುವತಿಯರಿಬ್ಬರು ದಿಲ್ಲಿ ಮೆಟ್ರೋದಲ್ಲಿ ಅನುಚಿತವಾಗಿ ರೀಲ್ಸ್‌ ಮಾಡಿ, ಈಗ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಬಿಳಿ ಬಣ್ಣದ ಚೂಡಿದಾರ್‌ ಹಾಗೂ ಸೀರೆ ತೊಟ್ಟಿದ್ದ ಯುವತಿಯರಿಬ್ಬರು ಮೆಟ್ರೋದ ಒಳಗೆ ರೀಲ್ಸ್‌ ಮಾಡಿದ್ದಾರೆ. ಒಬ್ಬರಿಗೊಬ್ಬರು ಬಣ್ಣ ಬಳಿದುಕೊಳ್ಳುತ್ತಾ, ಮೈ ಮೇಲೆ ಬಿದ್ದು ಅಪ್ಪಿಕೊಳ್ಳುತ್ತಾ ಪ್ರಯಾಣಿಕರೆದುರೇ ಅಸಭ್ಯವಾಗಿ ವರ್ತಿಸಿದ್ದಾರೆ. ಈ ವೀಡಿಯೋ ಜಾಲತಾಣದಲ್ಲಿ ವೈರಲ್‌ ಆಗಿದೆ. ಇದೇನು ಮೆಟ್ರೋ ರೈಲೋ ಅಥವಾ ಖಾಸಗಿ ಕೊಠಡಿಯೋ ಎಂದೆಲ್ಲ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.

Post a Comment

0Comments

Post a Comment (0)