ನೇಸರಗಿ ಠಾಣಾ ವ್ಯಾಪ್ತಿಯಲ್ಲಿ ಅಪರಿಚಿತ ವ್ಯಕ್ತಿಯ ಕೊಳೆತ ಶವ ಪತ್ತೆ
ನೇಸರಗಿ ಪೋಲಿಸ್ ಠಾಣಾವ್ಯಾಪ್ತಿಯಲ್ಲಿ ಬರುವ ಹಣಮನಟ್ಟಿ ಗ್ರಾಮದ ಹಳ್ಳನೋಡಿ ಸರದ ಹತ್ತಿರದ ನಿರ್ಜನ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ (ಆಸ್ತಿ ಪಂಜರ) ಪತ್ತೆಯಾಗಿದ್ದು ಪ್ರಕರಣ ನೇಸರಗಿ ಠಾಣೆಯಲ್ಲಿ ದಾಖಲಾಗಿದೆ.
ಮೃತ ವ್ಯಕ್ತಿ ಸುಮಾರು 30-40 ವರ್ಷದ ಆಸುಪಾಸಿನ ವ್ಯಕ್ತಿಯಾಗಿದ್ದು. ಕಾಡು ಪ್ರಾಣಿಗಳು ಮೃತ ದೇಹವನ್ನು ಸಂಪೂರ್ಣವಾಗಿ ಎಳೆದಾಡಿದ ಪರಿಣಾಮ ವ್ಯಕ್ತಿಯ ಶರೀರ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಕೇವಲ ಆಸ್ತಿ ಪಂಜರ ಎಲ್.ಎಸ್ ಡೋಣಿ ವಚನ ವಿಶೇಷ ತನಿಖೆ ನಡೆಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಕಾಡು ಪ್ರಾಣಿಗಳು ಶವವನ್ನು ಎಳೆದಾಡಿದ ಪರಿಣಾಮವಾಗಿ ವ್ಯಕ್ತಿಯ ಶವ ಗುರುತು ಸಿಗದ ಸ್ಥಿತಿಯಲ್ಲಿ ಪತ್ತೆಯಾಗಿದೆ. ವ್ಯಕ್ತಿಯ ಮರಣದ ಹಿಂದೆ ಹಲವು ಅನುಮಾನಗಳು ವ್ಯಕ್ತವಾಗಿದ್ದು. ಸದರಿ ವ್ಯಕ್ತಿಯ ಗುರುತು ಪತ್ತೆಯಾದರೆ ಮಾತ್ರ ಮರಣದ ಅಸಲಿ ಸತ್ಯ ಹೊರ ತರಲು ಸಾಧ್ಯತೆ ಹೆಚ್ಚಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಸದ್ಯ ಪ್ರಕರಣ ನಡೆದ ಸ್ಥಳಕ್ಕೆ ನೇಸರಗಿ ಪೋಲಿಸ್ ಠಾಣೆಯ ಪಿಎಸ್ಐ ಎಲ್.ಎಸ್ ಡೋಣಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ವಿಶೇಷ ತನಿಖೆ ಆರಂಭಿಸಿದ್ದಾರೆ ಮಾಹಿತಿ ಲಭ್ಯವಾಗಿದೆ.