ವನಸಿರಿಯ ಪೌಂಡೇಶನ್ ವತಿಯಿಂದ ಹೆಕ್ಕಿ ಪಕ್ಷಿಗಳ ಗುಟುಕು ನೀರಿನ ಅರವಟ್ಟಿಗೆ ಉದ್ಘಾಟನೆ ಕಾರ್ಯಕ್ರಮ
*ವನಸಿರಿ ಫೌಂಡೇಶನ್ ವತಿಯಿಂದ ಹಕ್ಕಿ ಪಕ್ಷಿಗಳ ಗುಟುಕು ನೀರಿನ ಅರವಟ್ಟಿಗೆ ಉದ್ಘಾಟನೆ ಕಾರ್ಯಕ್ರಮ*
ಸಿಂಧನೂರು ನಗರದ ಕುಷ್ಟಗಿ ರಸ್ತೆಯ ಅಗ್ನಿ ಶಾಮಕ ಠಾಣೆಯ ಆವರಣದಲ್ಲಿ ವನಸಿರಿ ಫೌಂಡೇಶನ್ ರಾಜ್ಯ ಘಟಕದ ವತಿಯಿಂದ ಹಕ್ಕಿ ಪಕ್ಷಿಗಳ ಗುಟುಕು ನೀರಿನ ಅರವಟ್ಟಿಗೆ ಅಭಿಯಾನ ಕಾರ್ಯಕ್ರಮ ತುಂಬಾ ಅದ್ದೂರಿಯಾಗಿ ನೆರವೇರಿತು.
ಕಾರ್ಯಕ್ರಮವನ್ನು ಗಿಡಗಳಿಗೆ ಮಣ್ಣಿನ ಅರವಟ್ಟಿಗೆಗಳನ್ನು ಕಟ್ಟಿ ಕಾಳು ನೀರು ಹಾಕುವ ಮೂಲಕ ಸಿಂಧನೂರು ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘದ ಅದ್ಯಕ್ಷರಾದ ಡಿ.ಎಚ್ ಕಂಬಳಿ ಅವರು ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಪರಮ ಪೂಜ್ಯರು,ರಾಜಕೀಯ ಮುಖಂಡರು,ಪರಿಸರ ಪ್ರೇಮಿಗಳು, ಐಕ್ಯೂ ಶಾಲೆ,ಶ್ರೀಕೃಷ್ಣ ದೇವರಾಯ,ನ್ಯಾಷನಲ್ ಪದವಿ ಪೂರ್ವ ಕಾಲೇಜು,ಶ್ರೀ ಮಂಜುನಾಥ ಶಾಲೆ ಜಾಲಿಹಾಳ,ಸನ್ ರೈಸ್ ಕಾಲೇಜುಗಳ ಶಿಕ್ಷಕರು ವಿದ್ಯಾರ್ಥಿಗಳು,ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು,ಪತ್ರಿಕಾ ಮಿತ್ರರು,ವನಸಿರಿ ಫೌಂಡೇಶನ್ ಸದಸ್ಯರು ಭಾಗವಹಿಸಿ ಯಶಸ್ವಿಗೊಳಿಸಿದರು.