ಚನ್ನಮ್ಮನ ಕಿತ್ತೂರಿನಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ, ತಾಲೂಕು ಆಡಳಿತದಿಂದ ಪೂರ್ವಭಾವಿ ಸಭೆ...!

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಚನ್ನಮ್ಮನ ಕಿತ್ತೂರಿನಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ, ತಾಲೂಕು ಆಡಳಿತದಿಂದ ಪೂರ್ವಭಾವಿ ಸಭೆ...!
ಕಿತ್ತೂರಿನಲ್ಲಿ ಅಂಬೇಡ್ಕರ್ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಗುವುದು : ಸಿ.ಬಿ ಯಮನೂರ
ಚೆನ್ನಮ್ಮನ ಕಿತ್ತೂರು : ನಗರದ ಪಟ್ಟಣ ಪಂಚಾಯತಿಯ ಸಭಾಂಗಣದಲ್ಲಿ ಅಂಬೇಡ್ಕರ್ ಜಯಂತಿ ಅಂಗವಾಗಿ ಪೂರ್ವಭಾವಿ ಸಭೆ ಜರುಗಿತು. ಸಭೆಯ ನೇತೃತ್ವ ವಹಿಸಿದ್ದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸಿ.ಬಿ ಯಮನೂರು ಈ ಬಾರಿ ಅಂಬೇಡ್ಕರ್ ಜಯಂತಿಯನ್ನು ಅರ್ಥ ಪೂರ್ಣವಾಗಿ ವಿಜೃಂಭಣೆಯಿಂದ ಆಚರಿಸುವಂತೆ ಸಲಹೆ ನೀಡಿದರು.
ನಗರದ ಹೃದಯ ಭಾಗವಾದ ಚೆನ್ನಮ್ಮನ ವರ್ತುಲದಿಂದ ವಿವಿಧ ವಾಧ್ಯಮೇಳದೊಂದಿಗೆ ಡಾ!! ಬಾಬಾಸಾಹೇಬ್ ಅಂಬೇಡ್ಕರರ ಸುಂದರವಾದ ಭಾವಚಿತ್ರವುಳ್ಳ ವಾಹನ ಮುಖಾಂತರ ಎಲ್ಲ ಶಾಲಾ ಮಕ್ಕಳು, ಅಧಿಕಾರಿಗಳು, ನಾಗರಿಕರು, ಸಮಾಜದ ಮುಖಂಡರು ಸೇರಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಯಂತಿಯನ್ನು ಆಚರಿಸಲಾಗುತ್ತದೆ ಎಂದು ಸಿ.ಬಿ ಯಮನೂರ ಹೇಳಿದರು.
ಏ. 14 ರಂದು ನಡೆಯುವ ಡಾ!!ಬಿ.ಆರ್. ಅಂಬೇಡ್ಕರ್ ಅವರ 133 ನೇ ಜಯಂತಿ ಇದಾಗಿದ್ದು ಈ ಬಾರಿ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಇದ್ದರು ಸಹ ಡಾ!! ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿಗೆ ಯಾವುದೇ ಅಡಚಣೆ ಆಗದ ಹಾಗೆ ಜಿಲ್ಲಾಡಳಿತದ ಗೈಡ್ ಲೈನ್ ಪ್ರಕಾರ ಮತ್ತು ದಲಿತ ಸಮುದಾಯದ ಮುಖಂಡರ ಸಲಹೆ ಮೇರೆಗೆ ಆಚರಿಸಲಾಗುತ್ತದೆ ಎಲ್ಲರೂ ಸಹ ಈ ಜಯಂತಿಯಲ್ಲಿ ಭಾಗವಹಿಸುಂತೆ ಮನವಿ ಮಾಡಿಕೊಂಡರು.
ಇದೇ ಸಂದರ್ಭದಲ್ಲಿ ದಲಿತ ಸಮಾಜ ಮುಖಂಡರಾದ ಪಕ್ಕಿರಪ್ಪ ಜಾಂಗಟಿ, ರಾಜು ಜಾಂಗಟಿ, ಬಸವರಾಜ ಕೆಳಗಡೆ, ಮಡಿವಾಳಪ್ಪ ವಕ್ಕುಂದ, ಸಂಜು ಲೋಕಾಪುರ ಹಾಗೂ ಇತರೆ ಮುಖಂಡರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.

Post a Comment

0Comments

Post a Comment (0)