ಸ್ನೇಹಿತನ ಮೋಸದ ಜಾಲಕ್ಕೆ ಹೊಸೂರಿನ ಯುವಕ ಮಂಜುನಾಥ ಬರ್ಬರ ಹತ್ಯೆ!! ಒಬ್ಬ ಅಂದರ ಇನ್ನೊಬ್ಬ ಬಾಹರ್..?
ಸವದತ್ತಿ : ತಾಲ್ಲೂಕಿನ ಹೊಸೂರು ಗ್ರಾಮದಲ್ಲಿ ಕಳೆದ ಒಂದೂವರೆ ತಿಂಗಳ ಹಿಂದೆ 16/2/24 ರಂದು ನಡೆದ ಯುವಕನೊಬ್ಬನ ಬರ್ಬರ ಹತ್ಯೆಗೆ ಯುವಕನ ತಾಯಿ ನ್ಯಾಯಕ್ಕಾಗಿ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದ್ದು. ತನ್ನ ಮಗನನ್ನು ಭೀಕರವಾಗಿ ಹತ್ಯೆ ಮಾಡಿದ ವ್ಯಕ್ತಿಗಳನ್ನು ತಕ್ಷಣ ಬಂದಿಸುಂತೆ ತನ್ನ ಅಳಲನ್ನು ತೋಡಿಕೊಂಡ ಘಟನೆ ಬೆಳಗಾವಿ ಜಿಲ್ಲೆಯ ಹೊಸೂರು ಗ್ರಾಮದಲ್ಲಿ ನಡೆಸಿದೆ.
ಕೇವಲ ಹೊಲಕ್ಕೆ ಹಾದು ಹೋಗುವ ದಾರಿ ವಿಷಯಕ್ಕೆ ಸಂಬಂಧಿಸಿ ನಡೆದ ಮೋಸದ ಜಾಲದಲ್ಲಿ 24 ವಯಸ್ಸಿನ ಮಂಜುನಾಥ ಕೋಲಕಾರ್ ಬಲಿಯಾಗಿದ್ದು. ಆರೋಪ ಎದುರಿಸುತ್ತಿರುವ 2 ಇಬ್ಬರು ಆರೋಪಿಗಳಲ್ಲಿ ಒಬ್ಬನನ್ನು ಬಂಧಿಸಿ ಇನ್ನೊಬ್ಬ ಆರೋಪಿಯನ್ನು ಇದುವರೆಗೊ ಬಂಧಿಸದಿರುವುದೇ ಮೃತನ ತಾಯಿಯ ಆಕ್ರೋಶಕ್ಕೆ ಕಾರಣವಾಗಿ ಹಲವು ಅನುಮಾನಗಳನ್ನು ಸೃಷ್ಟಿ ಮಾಡುತ್ತಿದ್ದೆ.
ಇನ್ನೂ ಮಂಜುನಾಥ ಕೋಲಕಾರ್ ಎಂಬ 24 ವಯಸ್ಸಿನ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದು. ಯುವಕನನ್ನು ಕೊಡ್ಲಿಯಿಂದ ಕುತ್ತಿಗೆ, ಮುಖ ಮತ್ತು ತಲೆಗೆ ಹೊಡೆದು ಪಕ್ಕದಲ್ಲಿ ಇದ್ದ ಕಲ್ಲು ತಲೆಯ ಮೇಲೆ ಎತ್ತಾಕಿ ಮಂಜುನಾಥನನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ಕೊಲೆಯಾದ ವ್ಯಕ್ತಿಯ ಕುಟುಂಬದವರು ಮುರಗೋಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇನ್ನೂ FIR ದಾಖಲಾದ ಬಳಿಕ ಕಾರ್ಯ ಪ್ರವೃತರಾದ ಅಧಿಕಾರಿಗಳು ಕಂಪ್ಲೀಟ್ ನಲ್ಲಿ ನಮೂದಾಗಿದ್ದ ಇಬ್ಬರು ಆರೋಪಿಗಳಲ್ಲಿ ಕೇವಲ ಒಬ್ಬ ಆರೋಪಿಯನ್ನು ಮಾತ್ರ ಬಂಧಿಸಿದ್ದಾರೆ ಇನ್ನೊಬ್ಬ ಪ್ರಮುಖ ಮೊದಲನೆ ಆರೋಪಿಯನ್ನು ಬಂದಿಸಿಲ್ಲ ಎಂದು ಮೃತನ ಕುಟುಂಬ ತಮ್ಮ ಆಕ್ರೋಶವನ್ನು ಅಧಿಕಾರಿಗಳ ವಿರುದ್ಧ ಹೊರ ಹಾಕಿದ್ದಾರೆ.
ಇನ್ನೂ ಆರೋಪ ಎದುರಿಸುತ್ತಿರುವ ಜೋಬಾಳಿ ಪಾಪು ಮತ್ತು ಪ್ರದೀಪ ಹರಿಜನ ಎಂಬ ಈ ಇಬ್ಬರಲ್ಲಿ ಪ್ರದೀಪ ಹರಿಜನನ್ನು ಮಾತ್ರ ಪೋಲಿಸ್ ಅಧಿಕಾರಿಗಳು ಬಂಧಿಸಿದ್ದು ಇನ್ನೊಬ್ಬ ಪ್ರಮುಖ ಆರೋಪಿ ಜೋಬಾಳಿ ಪಾಪುನನ್ನು ಬಂದಿಸುವಲ್ಲಿ ಅಧಿಕಾರಿಗಳು ಮೀನಾಮೇಷ ಎದುರಿಸುತ್ತಿದ್ದಾರೆ ಎಂದು ಸಹ ಮೃತ ಯುವಕನ ತಾಯಿ ಮತ್ತು ತಂದೆ ಗಂಭೀರವಾಗಿ ಆರೋಪಿಸಿದ್ದಾರೆ.
ಕೊಲೆಯ ಆರೋಪ ಹೊತ್ತ ಒಬ್ಬ ಆರೋಪಿ ಯಾರ ಭಯ ವಿಲ್ಲದೆ ರಾಜಾರೋಷವಾಗಿ ಓಡಾಡುತ್ತಿದ್ದು ಹಲವು ನಿಗೂಢ ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು.
ಸದ್ಯ ಅಧಿಕಾರಿಗಳ ಜಾಣ್ಮೆಯ ಪ್ರಕರಣದ ಸಂಪೂರ್ಣ ತನಿಖಾ ವರದಿಯ ನಂತರ ಪ್ರಕರಣಕ್ಕೆ ಹೊಸ ತಿರುವು ಪಡೆಯಲಿದ್ದು. ಸದ್ಯ ನಿಗೂಢತೆಯನ್ನು ಸೃಷ್ಟಿ ಮಾಡಿರುವ ಮರ್ಡರ್ ಕೇಸ್ ಅನುಮಾನಗಳ ಮಧ್ಯೆ ಒಂದು ಕುಟುಂಬದ ಕುಡಿ ದಾರುಣವಾಗಿ ಅಂತ್ಯ ಕಂಡಿದ್ದೆ. ಆತನ ಅಗಲಿಕೆ ಇಡೀ ಕುಟುಂಬಕ್ಕೆ ಬರ ಸಿಡಿಲಿನಂತೆ ಅಪ್ಪಳಿದ್ದು.
ಶೋಕ ಸಾಗರದಲ್ಲಿ ಮುಳುಗಿರುವ ಕುಟುಂಬಕ್ಕೆ ಧೈರ್ಯ ತುಂಬಿ ನ್ಯಾಯ ಒದಗಿಸಬೇಕಾದವರು ಯಾರು ಎಂಬ ಗೊಂದಲಕ್ಕೆ ಅಧಿಕಾರಿಗಳು ಉತ್ತರಿಸಬೇಕಾದ ಸ್ಥಿತಿ ಉದ್ಬವಿಸಿದೆ. ಒಟ್ಟಾರೆ ಪ್ರಕರಣಕ್ಕೆ ಹೊಸ ತಿರುವು ಪಡೆದಿದ್ದು ಹಲವು ಅನುಮಾನಕ್ಕೆ ದಾರಿಯಾಗಿದೆ..?