ಕರ್ನಾಟಕ ಮಾಹಿತಿ ಆಯೋಗ ಬೆಳಗಾವಿ ಪೀಠಕ್ಕೆ ಮಾಹಿತಿ ಆಯುಕ್ತರನ್ನು ನೇಮಕ ಗೊಳಿಸುವಂತೆ ಒತ್ತಾಯಿಸಿ ಈದಿನ ಹೆಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಬಾಗಲಕೋಟ ಜಿಲ್ಲಾಘಟಕದ ಕಾರ್ಯಕರ್ತರು ಜಿಲ್ಲಾಧಿಕಾರಿಯವರ ಕಛೇರಿಯ ಆವರಣದಲ್ಲಿ ಪ್ರತಿಭಟನೆಯ ಮೂಲಕ ಆಗಮಿಸಿ ರಾಜ್ಯಪಾಲರಿಗೆ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಬರೆದ ಮನವಿಪತ್ರವನ್ನು ಬಾಗಲಕೋಟೆಯ ಜಿಲ್ಲಾಧಿಕಾರಿಗಳಾದ ಶ್ರೀಮತಿ ಕೆ.ಎಮ್.ಜಾನಕಿಯವರಿಗೆ ಸಲ್ಲಿಸಿದರು.ಮನವಿಪತ್ರ ಸಲ್ಲಿಸಿ ಹೆಚ್. ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಬಾಗಲಕೋಟೆ ಜಿಲ್ಲಾ ಘಟಕದ ಜಿಲ್ಲಾ ಸಂಚಾಲಕರಾದ ನವೀನ ಕಪಾಲಿ ಮಾತನಾಡಿ ಕಳೆದ ಒಂದುವರೆ ವರ್ಷಗಳಿಂದ ಬೆಳಗಾವಿಯ ಸುವರ್ಣ ಸೌಧದಲ್ಲಿ ಇರುವ ರಾಜ್ಯ ಮಾಹಿತಿ ಆಯೋಗದ ರಾಜ್ಯ ಮಾಹಿತಿ ಆಯುಕ್ತರ ಪೀಠ ಖಾಲಿ ಇರುವುದರಿಂದ ಉತ್ತರ ಕರ್ನಾಟಕದ ಜಿಲ್ಲೆಯ ಮಾಹಿತಿ ಹಕ್ಕು ಅರ್ಜಿದಾರರಿಗೆ ಬೆಳಗಾವಿಯ ನ್ಯಾಯಾಲಯದ ಸಭಾಂಗಣದಲ್ಲಿ ಪ್ರಕರಣಗಳು ವಿಚಾರಣೆ ನಡೆಯದೇ ತೀವ್ರ ತೊಂದರೆಯಾಗಿದ್ದು, ಕೆಲವೊಂದು ಅರ್ಜಿಗಳ ವಿಚಾರಣಾ ಪ್ರಕರಣಗಳು ಎರಡು-ಮೂರು ವರ್ಷಗಳಿಂದ ನಡೆಯುತ್ತಿದ್ದು ಇನ್ನೂ ಸಹಿತ ಇತ್ಯರ್ಥಗೊಂಡಿರುವುದಿಲ್ಲ. ಮಾನ್ಯ ರಾಜ್ಯ ಮಾಹಿತಿ ಆಯುಕ್ತರಾದ ಮಾನ್ಯ ಶ್ರೀಮತಿ ಬಿ.ವಿ ಗೀತಾರವರು ದಿನಾಂಕ 11:04:2022 ರಂದು ಕೆ ಪಿ ಎಸ್ಟಿ ಗೆ ನಾಮನಿರ್ದೇಶನ ಪದವಿಗೆ ಅಧಿಕಾರವಹಿಸಿಕೊಂಡ ನಂತರ ಬೆಳಗಾವಿಯ ಪೀಠದಲ್ಲಿ ಆಯುಕ್ತರೇ ಇಲ್ಲದೆ ಪ್ರಕರಣಗಳು ವಿಚಾರಣೆ ನಡೆಯದೇ ಮಾಹಿತಿ ಹಕ್ಕು ಅರ್ಜಿದಾರರಿಗೆ ಸರಿಯಾದ ಸಮಯಕ್ಕೆ ಸಮರ್ಪಕ ಮಾಹಿತಿ ದೊರಕದೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ಪ್ರತಿಭಟನೆ ಉದ್ದೇಶಿಸಿ ಜಿಲ್ಲಾ ಮುಖಂಡ ಶಂಕರ ಮುತ್ತಲಗೇರಿ ಮಾತನಾಡಿ ಬೆಳಗಾವಿ ಪೀಠದ ವ್ಯಾಪ್ತಿಯಲ್ಲಿ ಬರುವ ಬೆಳಗಾವಿ,ಧಾರವಾಡ, ವಿಜಯಪುರ,ಬಾಗಲಕೋಟೆ, ಹಾವೇರಿ ಮತ್ತು ಉತ್ತರಕನ್ನಡ ಜಿಲ್ಲೆಯ ಪ್ರಕರಣಗಳು ವಿಚಾರಣೆ ನಡೆಯುತ್ತಿದ್ದು ಆಯುಕ್ತರ ವರ್ಗಾವಣೆಯ ನಂತರ ಸುಮಾರು 8 ರಿಂದ 10 ಸಾವಿರ ಪ್ರಕರಣಗಳು ಬಾಕಿ ಉಳಿದಿದ್ದು ಅದರಲ್ಲಿ 4000 ಹಳೆಯ ಪ್ರಕರಣಗಳು ಮತ್ತು 6000 ಹೊಸ ಪ್ರಕರಣಗಳು ಬಾಕಿ ಉಳಿದಿದ್ದು ಮಾಹಿತಿ ಹಕ್ಕು ದ್ವಿತೀಯ ಮೆಲ್ಮನವಿ ಅರ್ಜಿದಾರರಿಗೆ ಸರಿಯಾದ ಸಮಯದಲ್ಲಿ ಸಮರ್ಪಕ ಮಾಹಿತಿ ದೊರಕದೆ ಅಸಮಾಧಾನಗೊಂಡಿದ್ದಾರೆ. ಉತ್ತರ ಕರ್ನಾಟಕದ ಜನತೆಯ ಬಹುದಿನಗಳ ಬೇಡಿಕೆಯಂತೆ ಬೆಳಗಾವಿಯಲ್ಲಿ ಸುವರ್ಣಸೌಧದಲ್ಲಿ ರಾಜ್ಯ ಮಟ್ಟದ ವಿವಿಧ ಇಲಾಖೆಗಳ ಕಛೇರಿಗಳು ಸುವರ್ಣಸೌಧದಲ್ಲಿ ಕಾರ್ಯನಿರ್ವಹಿಸಬೇಕೆಂಬ ಕನಸು ಇನ್ನೂ ಉತ್ತರ ಕರ್ನಾಟಕದ ಜನತೆಗೆ ಕನಸಾಗಿಯೇ ಉಳಿದಿದೆ ಈಗಾಗಲೇ ಮಾಹಿತಿ ಆಯೋಗವು ಕೇವಲ ಒಬ್ಬ ಆಯುಕ್ತರನ್ನು ಹೊಂದಿದ್ದು ಇದರಿಂದ ಪ್ರಕರಣಗಳು ಸರಿಯಾದ ಸಮಯಕ್ಕೆ ಇತ್ಯರ್ಥಗೊಳ್ಳುವುದು ಸಾಧ್ಯವೇ ಇಲ್ಲ ಆದ್ದರಿಂದ ಗೌರವಾನ್ವಿತ ರಾಜ್ಯಪಾಲರು ಹಾಗೂ ಮುಖ್ಯ ಕಾರ್ಯದರ್ಶಿಗಳು ಕರ್ನಾಟಕ ಸರ್ಕಾರ ಬೆಂಗಳೂರು ಅವರು ಆಯೋಗಕ್ಕೆ ಇನ್ನೊಬ್ಬ ಆಯುಕ್ತರನ್ನು ನೇಮಕ ಗೊಳಿಸುವಂತೆ ಒತ್ತಾಯಿಸಿ ಹೆಚ್. ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಒಂದು ವರ್ಷದ ಹಿಂದೆಯೇ ನಮ್ಮ ಸಂಘಟನೆಯ ಜಿಲ್ಲಾಧ್ಯಕ್ಷರಾದ ಬಿ.ಎಂ.ಪಾಟೀಲರ ನೇತೃತ್ವದಲ್ಲಿ ಮನವಿ ಪತ್ರ ಸಲ್ಲಿಸಿತ್ತು ಆದರೆ ಇಂದಿನ ವರೆಗೂ ಸರ್ಕಾರದಿಂದ ಯಾವುದೇ ಸುತ್ತೋಲೆ ಹೊರಡಿಸಿಲ್ಲ ಆದ್ದರಿಂದ ಕೂಡಲೇ ಬೆಳಗಾವಿಯ ಕರ್ನಾಟಕ ಮಾಹಿತಿ ಆಯೋಗದ ಪೀಠಕ್ಕೆ ಇಬ್ಬರು ಆಯುಕ್ತರನ್ನು ನಿಯೋಜನೆ ಗೊಳಿಸುವಂತೆ ಒತ್ತಾಯ ಪಡಿಸುತ್ತದೆ ಎಂದರು ಪ್ರತಿಭಟನೆಯ ಸಂದರ್ಭದಲ್ಲಿ ಜಿಲ್ಲಾ ಯುವ ಘಟಕದ ಅಧ್ಯಕ್ಷ ರಾಘು ರಾಠೋಡ, ಜಿಲ್ಲಾ ಮುಖಂಡ ಸಂತೋಷ ಚಿನಿವಾಲ, ಕಾರ್ಮಿಕ ಮುಖಂಡ ಪರಶುರಾಮ ಬುಳ್ಳಾಪೂರ, ಸಂಗಮೇಶ ದುಬಲಗುಂಡಿ, ಗಣೇಶ ಬಡಿಗೇರ,ಮಂಜುನಾಥ ಸವದಿ,ಹನಮಂತ, ಅಬ್ದುಲ,ವಿಜಯ,ಸಂಗಮೇಶ ಸೇರಿದಂತೆ ಇನ್ನಿತರ ಕಾರ್ಯಕರ್ತರು ಭಾಗವಹಿಸಿದ್ದರು
"ಬೆಳಗಾವಿ ಪೀಠಕ್ಕೆ ಮಾಹಿತಿ ಆಯುಕ್ತರನ್ನು ನೇಮಕ ಮಾಡುವಂತೆ ಒತ್ತಾಯಿಸಿ ಕರವೇಯಿಂದ ರಾಜ್ಯಪಾಲರಿಗೆ ಮನವಿ ಸಲ್ಲಿಕೆ"
By -
March 13, 2024
0
Tags: