ಬಿಜೆಪಿ ಜಿಲ್ಲಾ ರೈತ ಮೋರ್ಚಾ ಗ್ರಾಮ ಪರಿಕ್ರಮ ಯಾತ್ರೆ ಸಮಾರೋಪ...!
ಕಿತ್ತೂರು ಕ್ರಾಂತಿ...
ಬೈಲಹೊಂಗಲ: ಸಮೀಪದ ಹೊಸೂರು ಗ್ರಾಮದಲ್ಲಿ ಬೆಳಗಾವಿ ಗ್ರಾಮಾಂತರ ಜಿಲ್ಲಾ ಮಟ್ಟದ ಬಿಜೆಪಿ ರೈತ ಪರಿಕ್ರಮ ಯಾತ್ರಾ ಸಮಾರೂಪ ಕಾರ್ಯಕ್ರಮವನ್ನು ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ಜಗದೀಶ ಬೂದಿಹಾಳ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಯಿತು,
ಮನೆಮನೆಗೆ ತೆರಳಿ ಮಾನನೀಯ ಪ್ರಧಾನಮಂತ್ರಿ ಅವರ ಫಲಾನುಭವಿಗಳ ಸಮೃದ್ಧಿ ಮೋದಿಯ ಗ್ಯಾರಂಟಿ ಎಂಬ ಕರಪತ್ರವನ್ನು ಎಲ್ಲಾ ಫಲಾನುಭವಿಗಳಿಗೆ ತಲುಪಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕರಾದ ಶ್ರೀ ಜಗದೀಶ್ ಮೆಟಗುಡ್ಡ ಅವರು ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರು ರೈತರಿಗೆ ಅನುಕೂಲವಾಗುವಂತೆ ಅನೇಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ ದೇಶದ ಅಭಿವೃದ್ಧಿಗೆ ಮತ್ತೋಮ್ಮೆ ಮೋದಿಜೀ ಅವರನ್ನು ಬೆಂಬಲಿಸಬೇಕೆಂದು ವಿನಂತಿಸಿದರು, ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ಜಗದೀಶ ಬೂದಿಹಾಳ ಮಾತನಾಡಿ ಮೋದಿಜಿಯವರು ಸಬ್ ಕಾ ಸಾಥ್ ಸಬ್ಕಾ ವಿಕಾಸ್ ಎಂಬ ಪರಿಕಲ್ಪನೆಯಲ್ಲಿ ದೇಶವನ್ನು ಮುನ್ನಡೆಸುತ್ತಾ ಬಂದಿದ್ದಾರೆ, ರೈತ ನಮ್ಮ ದೇಶದ ಬೆನ್ನೆಲುಬು ರೈತರಿಗಾಗಿ ಹಲವಾರು ಯೋಜನೆಗಳನ್ನು ನೀಡಿದ್ದಾರೆ ಸದ್ಯದ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ, ಜನ ಜಾನುವಾರುಗಳಿಗೆ ನೀರಿಲ್ಲದಂತೆ ಮಾಡಿ ರೈತರನ್ನ ಬೀದಿಗೆ ಎಳೆಯುವ ಕೇಲಸ ಮಾಡುತ್ತಿದೆ ಶಿಘ್ರವೇ ಸರ್ಕಾರ ಎಚ್ಚೆತ್ತುಕೊಂಡು ರೈತಪರ ನಿಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು, ರಾಜ್ಯ ಮಾಧ್ಯಮ ಸಮಿತಿ ಸದಸ್ಯ ಎಪ್ ಎಸ್ ಸಿದ್ದನಗೌಡ್ರ ಪ್ರಾಸ್ತಾವಿಕವಾಗಿ ಮಾತನಾಡಿ ರೈತ ವಿದ್ಯಾಸಿರಿ, ರೈತರಿಗಾಗಿ 6000 ರೂ ಗಳ ನೇರ ವರ್ಗಾವಣೆ, ಫಸಲ ಭೀಮಾ ಯೋಜನೆ, ಹತ್ತು ಹಲವಾರು ಯೋಜನೆಗಳು ಇಂದು ಜಾರಿಯಲ್ಲಿವೆ ಎಂದರೆ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಜೀ ಅವರೆ ಕಾರಣ ಎಂದರು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ಗುರುಪಾದ ಕಳ್ಳಿ, ಉಪಾಧ್ಯಕ್ಷರಾದ ಸುಭಾಷ ತುರುಮರಿ ,ಮಂಡಲ ಪ್ರಧಾನ ಕಾರ್ಯದರ್ಶಿ ಲಕ್ಕಪ್ಪ ಕಾರಗಿ, ಜಿಲ್ಲಾ ಓಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂತೋಷ ಹಡಪದ, ಅಶೋಕ ಇಂಗಳಗಿ, ಆನಂದ ಬೂದಿಹಾಳ, ಮಲ್ಲಿಕಾರ್ಜುನ ಕಮತಗಿ, ಮಲ್ಲಿಕಾರ್ಜುನ ಒಕ್ಕುಂದ, ಹೊಸೂರ ಗ್ರಾಮಸ್ಥರು ಪಕ್ಷದ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.