ತಾಲೂಕಾ ಸ್ವೀಪ್ ಸಮೀತಿ ಹಾಗೂ ತಾಲೂಕಾ ಆಡಳಿತ, ತಾಲೂಕ ಪಂಚಾಯತ ಬೈಲಹೊಂಗಲ ಮತ್ತು ಪುರಸಭೆ ಬೈಲಹೊಂಗಲ ವತಿಯಿಂದ “ಪಂಜಿನ ಮೆರವಣಿಗೆ ಹಾಗೂ ಕ್ಯಾಂಡಲ್ ಜಾಥಾ” ಕಾರ್ಯಕ್ರಮಕ್ಕೆ ಶ್ರೀ ಸತೀಶಕುಮಾರ ಸಹಾಯಕ ಚುನಾವಣಾಧಿಕಾರಿಗಳು ಬೈಲಹೊಂಗಲ ಮತಕ್ಷೇತ್ರ-16 ರ ಚಾಲನೆ ನೀಡಿದರು.
ನಗರದ ಪುರಸಭೆ ಕಾರ್ಯಾಲಯದಿಂದ ಕೇಂದ್ರ ಬಸ್ಸ್ ನಿಲ್ದಾಣ ಬೈಲಹೊಂಗಲದವರೆಗೆ ಜಾಥಾ ಕಾರ್ಯಕ್ರಮದಲ್ಲಿ ಚುನಾವಣೆಗೆ ಸಂಬಂಧಿಸಿದ ಘೋಷವಾಕ್ಯಗಳನ್ನು ಹೇಳುತ್ತಾ ಸಾರ್ವಜನಿಕರಿಗೆ ಜಾಗೃತಿ ಮತ್ತು ಕಡ್ಡಾಯ ಮತದಾನ ಮಾಡುವಂತೆ ತಿಳಿಸಿದರು.
ಕೇಂದ್ರ ಬಸ್ ನಿಲ್ದಾಣದಲ್ಲಿ “ಪಂಜಿನ ಮೇರವಣಿಗೆ ಹಾಗೂ ಕ್ಯಾಂಡಲ್” ಮೂಲಕ ಸಾರ್ವಜನಿಕರು “ಚುನಾವಣಾ ಪರ್ವ ದೇಶದ ಗರ್ವ” ಎಂಬ ಮತದಾನದಲ್ಲಿ ಪಾಲ್ಗೊಳ್ಳಬೇಕು ಎಂದು ಗಂಗಾಧರ ಕಂದಕೂರ ಅಧ್ಯಕ್ಷರು ಸ್ವೀಪ್ ಸಮೀತಿ ಬೈಲಹೊಂಗಲ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳು ಬೈಲಹೊಂಗಲ ರವರು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಸಾರ್ವಜನಿಕರಿಗೆ ಮತದಾನ ಜಾಗೃತಿ ಹಾಗೂ ಘೋಷವಾಕ್ಯ ಮತ್ತು ಪ್ರತಿಜ್ಞಾ ವಿಧಿಯನ್ನು ಭೋಧಿಸಿದರು.
ಉಪಸ್ಥೀತಿ, ವಿರೇಶ ಹಸಬಿ ಪುರಸಭೆ ಮುಖ್ಯಾಧಿಕಾರಿಗಳು ಬೈಲಹೊಂಗಲ, ಎ ಎನ್ ಪ್ಯಾಟಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸುರೇಶ ದೊಡ್ಡಬಸಣ್ಣವರ ಸಾಮಾಜಿಕ ಅರಣ್ಯಾಧಿಕಾರಿಗಳು, ಬಿ ಎನ್ ರಘು ಸಹಾಯಕ ನಿರ್ದೇಶಕರು (ಪಂ ರಾಜ್) ಸಿ ಬಿ ಯಮನೂರ, ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಮಹಾದೇವಪ್ಪ ಕುಟ್ರಿ ವ್ಯವಸ್ಥಾಪಕರು ಆರ್ ಎಸ್ ಹಿಟ್ಟಣಗಿ (ಸಿ ಎ ಓ) ಪುರಸಭೆ ಬೈಲಹೊಂಗಲ, ಎಸ್ ಬಿ ಸಂಗನಗೌಡರ ವಿಷಯ ನಿರ್ವಾಹಕರು ಸ್ವೀಪ್ ಸಮೀತಿ ಬೈಲಹೊಂಗಲ, ಎಸ್ ವ್ಹಿ ಹಿರೇಮಠ ಹಾಗೂ ಎಲ್ಲ ತಾಲೂಕಾ ಮಟ್ಟದ ಅಧಿಕಾರಿ ವರ್ಗ ಮತ್ತು ಸಿಬ್ಬಂದಿಗಳು ಹಾಗೂ ಅಂಗನವಾಡಿ ಕಾರ್ಯರ್ತೆಯರು ಮತ್ತು ಪುರಸಭೆ ಕಾರ್ಯಾಲಯದ ಸಿಬ್ಬಂದಿ ವರ್ಗ ಹಾಜರಿದ್ದರು.