ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಅನಂತಕುಮಾರ್ ಹೆಗಡೆ 4,79,649 ಮತಗಳ ಅಂತರದಿಂದ ಜೆಡಿಎಸ್‌ನ ಆನಂದ್ ಅನ್ನೋಟಿಕರ್ ಅವರನ್ನು ಸೋಲಿಸಿದರು. ಅನಂತಕುಮಾರ ಹೆಗಡೆ 7,86,042 ಮತಗಳನ್ನು ಪಡೆದರು. ಬಿಜೆಪಿಯ ಅನಂತಕುಮಾರ್ ಹೆಗಡೆ ಅವರು ಉತ್ತರ ಕನ್ನಡ ಕ್ಷೇತ್ರದ ಹಾಲಿ ಸಂಸದರಾಗಿದ್ದಾರೆ. ಉತ್ತರ ಕನ್ನಡ ಲೋಕಸಭಾ ಕ್ಷೇತ್ರವು ಕರ್ನಾಟಕದ ಆಸುಪಾಸಿನೊಳಗೆ ಬರುತ್ತದೆ. ಯಲ್ಲಾಪುರ, ಹಳಿಯಾಳ, ಕುಮಟಾ, ಕಿತ್ತೂರು, ಖಾನಾಪುರ, ಶಿರಸಿ, ಕಾರವಾರ, ಭಟ್ಕಳಗಳು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಅಂಶವಾಗಿರುವ ವಿಧಾನಸಭಾ ಕ್ಷೇತ್ರಗಳಾಗಿವೆ.
2019 ರ ಲೋಕಸಭೆ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ 74.10% ಮತದಾನವಾಗಿದೆ. ಈ ಕ್ಷೇತ್ರದಲ್ಲಿ ಒಟ್ಟು 14 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.
ದೇಶದಲ್ಲಿ 3ನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಕಷ್ಟು ತಯಾರಿ ನಡೆಸಿರುವ ಬಿಜೆಪಿ ಪಕ್ಷಕ್ಕೆ ಈ ಬಾರಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿ ಆಯ್ಕೆ ಕಗ್ಗಂಟ್ಟಾಗಿ ಪರಿಣಮಿಸಿದ್ದು ಈ ಬಾರಿ ಯಾರನ್ನ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಿದೆ ಎಂಬ ಅನುಮಾನ ದಟ್ಟವಾಗಿದೆ.
ರಾಜ್ಯದಲ್ಲಿ ಅತ್ಯಂತ ಕುತೂಹಲ ಕೆರಳಿಸಿರುವ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೋದಿ ಅಲೆ ಬಲು ಜೋರಾಗಿದ್ದು ಸದ್ಯದ ಹಾಲಿ ಸಂಸದರ ವಿವಾದಾತ್ಮಕ ಹೇಳಿಕೆ ಕೂಡಾ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಹಿಂದುತ್ವದ ಸಿದ್ಧಾಂತದಿಂದಲ್ಲೇ ತನ್ನ ಅಧಿಕಾರವನ್ನು ಪಡೆಯುತ್ತಿರುವ ಬಿಜೆಪಿ ಪಕ್ಷಕ್ಕೆ ಈ ಬಾರಿ ಸದ್ಯದ ಹಾಲಿ ಸಂಸದ ಅನಂತಕುಮಾರ ಹೆಗಡೆ ವಿರುದ್ಧ ಕ್ಷೇತ್ರದಲ್ಲಿ ಸಾಕಷ್ಟು ಅಸಮಾಧಾನ ಕೂಡಾ ವ್ಯಕ್ತವಾಗಿದ್ದು ಜೊತೆಗೆ ವಿವಾದಾತ್ಮಕ ಹೇಳಿಕೆಗಳು ಸಹ ಬಿಜೆಪಿ ಪಕ್ಷವನ್ನು ಇಕ್ಕಟ್ಟಿನಲ್ಲಿ ಸಿಲುಕುವಂತೆ ಮಾಡಿದೆ.
ಮೋದಿ ಅಲೆಯ ಜೊತೆಗೆ ಬಿಜೆಪಿಯ ಭದ್ರ ಕೋಟೆಯಾದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಈ ಬಾರಿಯ ಚುನಾವಣೆಗೆ ಸಂವಿಧಾನ ತಿದ್ದುಪಡಿ ವಿಚಾರದ ಗಾಳಿ ಬಿಜೆಪಿಗೆ ತಟ್ಟಲಿದ್ದು. ಸ್ಥಳೀಯ ನಾಯಕರ ಮತಯಾಚನೆಗೂ ಸಹ ಪರಿಣಾಮ ಬೀರುವ ಸಾಧ್ಯತೆ ಕೂಡಾ ಹೆಚ್ಚಾಗಿದೆ ಎಂದು ಬಲ್ಲ ಮೂಲಗಳ ಪ್ರಕಾರ ವ್ಯಕ್ತವಾಗಿದೆ.
ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಗೊಂದಲಕ್ಕೂ ಕಾರಣವಾಗಿರುವ ಅನಂತಕುಮಾರ ಹೆಗಡೆಗೆ ಮತ್ತೆ ಬಿಜೆಪಿ ಮಣೆ ಹಾಕುತ್ತಾ ಅಥವಾ ಬೇರೆ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಾ ಎಂಬ ಕುತೂಹಲ ಬಿಜೆಪಿ ಕಾರ್ಯಕರ್ತರಲ್ಲಿ ಇದ್ದು ಕೊನೆಯ ಕ್ಷಣದಲ್ಲಿ ಬಿಜೆಪಿಯ ಹೈಕಮಾಂಡ್ ನಿರ್ಧಾರದ ಮೇಲೆ ಪಕ್ಷದ ನಿಲುವು ನಿರ್ಧಾರವಾಗಲಿದೆ.
ಈ ವರೆಗೂ ಬಿಜೆಪಿ ತನ್ನ ಅಭ್ಯರ್ಥಿ ಆಯ್ಕೆ ಮಾಡದಿರುವುದು ಹಲವು ಅನುಮಾನಗಳನ್ನು ಸೃಷ್ಟಿಸಿದ್ದು. ಬಿಜೆಪಿಯಲ್ಲಿ ಹೊಸ ಮುಖಕ್ಕೆ ಬಿಜೆಪಿ ಮಣೆ ಹಾಕಲಾಗುತ್ತಿದ್ದೆ ಎಂಬ ಅನುಮಾನ ಕೂಡಾ ಕ್ಷೇತ್ರದಲ್ಲಿ ಜೋರಾಗಿದೆ. ಟಿಕೆಟ್ ಆಕಾಂಕ್ಷಿಗಳಲ್ಲಿ ಹಲವಾರು ಪ್ರಬಲ ನಾಯಕರ ಪಟ್ಟಿ ಜೋರಾಗಿದ್ದು. ಅಂತಿಮವಾಗಿ ಬಿಜೆಪಿ ಯಾರಿಗೆ ಟಿಕೆಟ್ ನೀಡಲಿದೆ ಎಂಬ ಕುತೂಹಲ ಕೂಡಾ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಒಂದು ವೇಳೆ ಬಿಜೆಪಿ ಪಕ್ಷ ಅಭ್ಯರ್ಥಿ ಬದಲಾವಣೆಗೆ ಮಣೆ ಹಾಕಿದರೆ. ಪಕ್ಷದಲ್ಲಿ ಆಗುವ ಅಸಮಾಧಾನ, ಬಂಡಾಯ, ಬೇರೆ ಪಕ್ಷ ಸೇರ್ಪಡೆಯಾಗುವ ಸಾಧ್ಯತೆ ಕೂಡಾ ಇದ್ದು. ಆ ವಿಚಾರವಾಗಿಯೂ ಸಹ ಬಿಜೆಪಿಯಲ್ಲಿ ಸಾಕಷ್ಟು ಚರ್ಚೆಗೂ ಗ್ರಾಸವಾಗಿದೆ ಎಂದು ಇತರೆ ಮೂಲಗಳಿಂದ ಮಾಹಿತಿ ಬಹಿರಂಗವಾಗಿದೆ.
ಸದ್ಯ ಬಿಜೆಪಿ ಅಂತಿಮವಾಗಿ ಯಾರನ್ನ ತನ್ನ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಿದೆ ಎಂಬುದರ ಮೇಲೆ ಪಕ್ಷದ ನಿಲುವು ಪ್ರಕಟವಾಗಲಿದ್ದು. ಸಾಕಷ್ಟು ಕುತೂಹಲಕಾರಿ ಬೆಳವಣಿಗೆ ಕಂಡಿರುವ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಯಾವ ರೀತಿಯಲ್ಲಿ ಈ ಬಾರಿಯ ಚುನಾವಣೆ ಎದುರಿಸಲಿದೆ ಎನ್ನುವುದನ್ನು ಕಾದುನೋಡಬೇಕು.