ವಿಧಾನಸಭೆಯಲ್ಲಿಂದು ಮಾತನಾಡಿದ ಯೋಗಿ ಆದಿತ್ಯನಾಥ್ (Yogi Adityanath), ಅಯೋಧ್ಯೆ ಬಳಿಕ ಶ್ರೀಕೃಷ್ಣ ಜನ್ಮಭೂಮಿ ಭೂ ವಿವಾದದ ಪರಿಹಾರವು ಬಿಜೆಪಿಯ ಆದ್ಯತೆಯಾಗಿದೆ ಅಂತ ಹೇಳಿದ್ದಾರೆ
By -
February 16, 2024
0
ಉತ್ತರ ಪ್ರದೇಶ: ಅಯೋಧ್ಯೆಯಲ್ಲಿ (Ayodhya) ರಾಮಮಂದಿರ (Ram Mandir) ಉದ್ಘಾಟನೆ ವೈಭವದಿಂದ ನಡೆದಿದ್ದು, ಇದೀಗ ಹಿಂದೂ (Hindu) ಧರ್ಮೀಯರ ಪಾಲಿನ ಪ್ರಸಿದ್ಧ ಯಾತ್ರಾಸ್ಥಳವಾಗಿ ಮಾರ್ಪಟ್ಟಿದೆ. ಅಯೋಧ್ಯೆಯ ರಾಮಜನ್ಮಭೂಮಿ (Ram Janmabhoomi) ಹೋರಾಟ ಸಕ್ಸಸ್ ಆದ ಬೆನ್ನಲ್ಲೇ, ಮಥುರಾದಲ್ಲಿರುವ (Mathura) ಶ್ರೀಕೃಷ್ಣ ಜನ್ಮಭೂಮಿಯೂ (Shri Krishna Janmabhoomi) ಹಿಂದೂಗಳಿಗೆ ಮರಳಿ ಸಿಗಬೇಕು ಎಂಬ ಕೂಗು ಜೋರಾಗಿದೆ. ಮಥುರಾದಲ್ಲಿರುವ ಶಾಹಿ ಈದ್ಗಾ ಮಸೀದಿ (Shahi Idga Masjid) ಜಾಗದಲ್ಲೇ ಮೊದಲು ಶ್ರೀಕೃಷ್ಣನ ದೇಗುಲವಿತ್ತು, 1669-70ರಲ್ಲಿ ಮೊಘಲ್ ರಾಜ (Mughal emperor) ಔರಂಗಜೇಬನ (Aurangzeb) ಆದೇಶದ ಮೇರೆಗೆ ಈ ಮಸೀದಿಯನ್ನು ನಿರ್ಮಿಸಲಾಗಿದೆ ಎನ್ನಲಾಗಿದೆ. ಇದೀಗ ಈ ಬಗ್ಗೆ ಉತ್ತರ ಪ್ರದೇಶ (Uttar Pradesh) ವಿಧಾನಸಭೆಯಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್ (Yogi Adityanath), ಅಯೋಧ್ಯೆ ಬಳಿಕ ಶ್ರೀಕೃಷ್ಣ ಜನ್ಮಭೂಮಿ ಭೂ ವಿವಾದದ ಪರಿಹಾರವು ಬಿಜೆಪಿಯ ಆದ್ಯತೆಯಾಗಿದೆ ಅಂತ ಹೇಳಿದ್ದಾರೆ
Tags:
.jpeg)