ಬೆಂಗಳೂರು: ಅನಾರೋಗ್ಯಕ್ಕೆ ಕಾರಣವಾಗುತ್ತಿರುವ ಅಂಶಗಳು ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಬಾಂಬೆ ಮಿಠಾಯಿ ಮಾದರಿಗಳ ಪರೀಕ್ಷೆಗೆ ಕಳುಹಿಸಿರುವ ಬೆನ್ನಲ್ಲೇ ಗೋಬಿ ಮಂಚೂರಿಯ ಮಾದರಿಗಳನ್ನೂ ಪರೀಕ್ಷೆಗೆ ಒಳಪಡಿಸಲು ಆರೋಗ್ಯ ಇಲಾಖೆ ಮುಂದಾಗಿದೆ.
ಸಾಮಾನ್ಯವಾಗಿ ಯಾವುದೇ ಒಂದು ಆಹಾರ ಪದಾರ್ಥಗಳನ್ನು ತಯಾರಿಸುವ ಆಹಾರ ಸ್ವಾಸ್ಥ್ಯ ಮಾನದಂಡ ಅನುಸರಿಸಬೇಕು.
ಪ್ರಸ್ತುತ ಹೆಚ್ಚಿನ ಕಡೆಯಲ್ಲಿ ಖಾದ್ಯದ ಚೆಂದ ಹಾಗೂ ರುಚಿ ಹೆಚ್ಚಿಸಿ ಲಾಭಗಳಿಸಲು ರಾಸಾಯನಿಕ ಪದಾರ್ಥ ಬಳಕೆ ಮಾಡಲಾಗುತ್ತಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಇಂತಹ ರಾಸಾಯನಿಕ ಪದಾರ್ಥಗಳು ಅಧಿಕ ಬಳಕೆ ಮಾಡುವ ಆಹಾರಪಟ್ಟಿಯಲ್ಲಿ ಇದೀಗ ಗೋಬಿ ಮಂಚೂರಿ ಸೇರ್ಪಡೆಯಾಗಿದೆ.
ಗೋವಾದಲ್ಲಿ ಬ್ಯಾನ್ ಏಕೆ?: ಗೋವಾದ ಮಾಪುಸಾ ನಗರದಲ್ಲಿ ಗೋಬಿ ಮಂಚೂರಿ ತಯಾರಿಕೆಗೆ ಬಳಸುವ ಕೃತಕ ಬಣ್ಣ ಹಾಗೂ ಕಳಪೆ ಗುಣಮಟ್ಟದ ಸಾಸ್‌ನಿಂದ ಆರೋಗ್ಯದ ಮೇಲೆ ಬೀರುವ ಪರಿಣಾಮಗಳು ಹಾಗೂ ಶುಚಿತ್ವ, ನೈರ್ಮಲ್ಯ ಬಗ್ಗೆ ದೂರುಗಳು ದಾಖಲಾಗಿದ್ದವು.