ಬೆಳಗಾವಿ : ಮದುವೆ ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ ಮರಳುವಾಗ ಭೀಕರ ರಸ್ತೆ ಅಪಘಾತ ಸಂಭವಿಸಿದ ಘಟನೆ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ ನಡೆದಿದೆ.
ಗುರುವಾರ ಮಧ್ಯಾಹ್ನ ಖಾನಾಪುರ ತಾಲೂಕಿನ ಮಂಗ್ಯಾನಕೊಪ್ಪ ಗ್ರಾಮದ ಸಮೀಪದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದ್ದು ಸ್ಥಳದಲ್ಲೇ 6 ಜನ ಸಾವಣಪ್ಪಿದ್ದಾರೆ. ಶಾರುಖ್ ಪೆಂಡಾರಿ ( 30 ) ಇಕ್ಬಾಲ್ ಜಮಾದಾರ ( 50 ) ಸಾನಿಯಾ ಲಂಗೊಟಿ ( 37 ) ಉಮರ್ ಲಂಗೋಟಿ ( 17 ) ಶಬನಮ್ ಲಂಗೋಟಿ ( 37 ) ಪರಾನ್ ಲಂಗೋಟಿ ( 13 ) ಮೃತಪಟ್ಟದ್ದು ಇನ್ನುಳಿದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.