ಚೆನ್ನಮ್ಮನ ಕಿತ್ತೂರು ಮತಕ್ಷೇತ್ರದಲ್ಲಿ ಬರುವ ತಿಗಡಿ ಹರನಾಲ ಆನೆಕಟ್ಟು.
#ಸಾರ್ಥಕವಾಗದ_ಹರಿನಾಲ_ತಿಗಡಿ_ಆಣೆಕಟ್ಟು:-
ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ಹರಿನಾಲಾಗೆ ಅಡ್ಡಲಾಗಿ ಚನ್ನಮ್ಮನ ಕಿತ್ತೂರು ವಿಧಾನ ಸಭಾ ಕ್ಷೇತ್ರದ ಬೈಲಹೊಂಗಲ ತಾಲೂಕಿನ ನಾವಲಗಟ್ಟಿ ಸಮೀಪ ತಿಗಡಿ ಬಳಿ 0.73 ಟಿ.ಎಂ.ಸಿ. ಸಾಮರ್ಥ್ಯದ ಚಿಕ್ಕ ಜಲಾ ಶಯ ಕಟ್ಟಲಾಗಿದೆ. ಈ ಯೋಜನೆ ನವೀಲುತೀರ್ಥ ಜಲಾ ಶಯಕ್ಕಿಂತಲೂ ಹಳೆಯದಾಗಿದೆ.
1960ರಲ್ಲಿಯೇ ಯೋಜನೆ ರೂಪಿಸಿದರೂ 2002ರಲ್ಲಿ ಎಸ್.ಎಂ. ಕೃಷ್ಣ ಅವಧಿಯಲ್ಲಿ ಯೋಜನೆ ಆರಂಭ ವಾಯಿತು. ಈ ಚಿಕ್ಕ ಜಲಾಶಯದ ಮೂಲಕ ಬೈಲಹೊಂಗಲ - ಕಿತ್ತೂರು ತಾಲೂಕಿನ 8 ಗ್ರಾಮಗಳ ಕೃಷಿ ಭೂಮಿಗೆ ನೀರೊದಗಿಸುವ ಗುರಿ ಹೊಂದಲಾಗಿತ್ತು. ಜಲಾಶಯದ 9 ಕಿ.ಮೀ. ಉದ್ದದ ಎಡ ದಂಡೆ ಹಾಗೂ 10.72 ಕಿ.ಮೀ. ಉದ್ದದ ಬಲದಂಡೆ ಕಾಲುವೆ ಮೂಲಕ 3,480 ಹೆಕ್ಟೇರ್‌ಗೆ ನೀರಾವರಿ ಸೌಲಭ್ಯ ಕಲ್ಪಿಸಬಹುದು.
ಎರಡೂ ಕಾಲುವೆಗಳ ಕಾಮಗಾರಿ ಪೂರ್ಣಗೊಂಡರೂ ನೀರು ಹರಿಸುತ್ತಿಲ್ಲ. ಕಾಲುವೆಗಳು ಕಸ, ಕಡ್ಡಿ, ಕೆಸರು ತುಂಬಿ ಹಾಳಾಗಿವೆ. ಯೋಜನೆಗಾಗಿ ಜನವಸತಿ ಪ್ರದೇಶದ 198 ಮನೆಗಳ ಪುನರ್‌ವಸತಿ ಕಾರ್ಯ ಇಂದಿಗೂ ಪೂರ್ಣವಾಗದೇ 1500 ಜನರ ಬದುಕು ಅತಂತ್ರವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಜಲಸಂಪನ್ಮೂಲ ಸಚಿವ ರಾಗಿದ್ದಾಗಲೇ ಕಾಲುವೆಗೆ ನೀರು ಹರಿಸುವ ಭರವಸೆ ನೀಡಿದ್ದರು. ಇಂದಿಗೂ ಅದು ಸಾಧ್ಯವಾಗಿಲ್ಲ.
ಬೈಲಹೊಂಗಲ ತಾಲೂಕಿನಲ್ಲಿ 1975ರಲ್ಲಿಯೇ ಜಾರಿ ಯಾದ 11 ಏತ ನೀರಾವರಿ ಯೋಜನೆಗಳು 15 ವರ್ಷಗಳಿಂದ ವಿವಿಧ ಕಾರಣದಿಂದ ಸ್ಥಗಿತಗೊಂಡಿವೆ. ಈ ಯೋಜನೆಯ ಉಪಕರಣಗಳನ್ನು ನವೀಕರಣಗೊಳಿಸಿ ಮರು ಪ್ರಾರಂಭಿಸಿದರೆ 55 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸಬಹುದು.
ಇವುಗಳಲ್ಲದೇ ತುಬಚಿ-ಬಬಲೇಶ್ವರ ಹಾಗೂ ಹೆರಕಲ್ ಯೋಜನೆಗಳನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಿದರೆ ಗರಿಷ್ಠ ಪ್ರಯೋಜನ ಪಡೆಯಬಹುದು. ಏಷ್ಯಾದ ಅತೀ ದೊಡ್ಡದಾದ ರಾಮಥಾಳ ಸೂಕ್ಷ್ಮ ನೀರಾವರಿ ಯೋಜನೆ ಹಳ್ಳ ಹಿಡಿದಿದ್ದು ಸರಿ ದಾರಿಗೆ ತರುವ ಕೆಲಸವಾಗಬೇಕಿದೆ.
ಅಲ್ಲದೆ ತಿಗಡಿ ಹರಿನಾಲ ಕಟ್ಟಲು ಹಾಗೂ ನೀರಿನ ಸಂಗ್ರಹಣೆಗಾಗಿ ಸಾವಿರಾರು ಎಕರೆ ಭೂಮಿಯನ್ನು ಕಳೆದುಕೊಂಡ ರೈತರ ಪಾಡು ಹೇಳ ತಿರದಾಗಿದೆ,ಜಮೀನು ಕೊಟ್ಟ ರೈತರೂಬ್ಬರಾದರೆ,ಪರಿಹಾರ ತೆಗೆದುಕೊಂಡ ರೈತರು ಮತ್ತೂಬ್ಬರಾಗಿದ್ದಾರೆ.
ವಿಪರ್ಯಾಸವೆಂದರೆ ಈಗ ಹರಿನಾಲ ಜಲಾಶಯದ ಹರಿನಾಲ ನೀರಿನ ಕವಲಿಗಳಲ್ಲಿ ನಿರ್ವಹಣೆ ಇಲ್ಲದೆ ಗಿಡಗಂಟಿಗಳು ಬೆಳದು ಕವಲಿಗಳು ಮುಚ್ಚಿ ಹೋಗಿವೆ,ಮತ್ತು ಕವಲಿಯ ಸುತ್ತಮುತ್ತಲಿನ 200ಮೀ ಭೂಮಿಯು ಹಾಳಾಗಿ ಹೋಗಿದೆ,ಅಲ್ಲದೆ ಮತ್ತೆ ಈಗ ಹರಿನಾಲ ಜಲಾಶಯದ ಏತ ನೀರಾವರಿ ಜಾಕ್ವಾರಗಳು ನಿರ್ವಹಣೆ ಇಲ್ಲದೆ ಜಂಗ ಹಿಡಿದು ಹಾಳಾಗಿ ಹೋಗಿವೆ,
ರೈತರು ಹೊಲದ ಉತಾರಗಳಲ್ಲಿ ಮತ್ತೆ ಕರ್ನಾಟಕ ಸರಕಾರ ನೀರಾವರಿ ನಿಗಮ ನಿಯಮಿತ ಎಂದು ದಾಖಲಾಗುತ್ತಿವೆ,ಇದರಿಂದ ರೈತರು ಸಂಕಷ್ಟದಲ್ಲಿ ಕೈ ತೊಳೆಯುತ್ತಿದ್ದಾರೆ,ಜಲಾಶಯ ಆದಾಗಿನಿಂದ ಇಲ್ಲಿಯವರೆಗೆ ಸುಮಾರು ಶಾಸಕರು ನೀರು ಬಿಡಿಸುವ ವಿಚಾರ ಮಾಡಿಲ್ಲ,ಹೋಗಲಿ ಟ್ರಯಲ್ ಗಾದರು ಒಮ್ಮೆ ನೀರು ಬಿಡಿಸಿ ಸ್ವಾಮಿ.
ನೀವು ಯಾವ ಸ್ವಾರ್ಥಕ್ಕಾಗಿ ಭೂಮಿಯನ್ನು ಕಸಿದುಕೊಂಡು, ಹರಿನಾಲ ಜಲಾಶಯ ಕಟ್ಟಿಸಿದಿರಿ,ಭೂಮಿ ಕೊಟ್ಟ ರೈತರಿಗೆ ಹಾಗೂ ಹರಿನಾಲಾ ಹರಿವು ಹರಿದ ರೈತರ ಹೊಲಗಳಿಗೆ ಹರಿನಾಲ ಜಲಾಶಯದ ನಿರ್ವಹಣೆ ಸರಿಯಾಗಿ ಆಗಿ ರೈತರ ಬದುಕು ಹಸನಾಗಲಿ ಕರ್ನಾಟಕ ಸರಕಾರ ಕೊಡಲೆ ಎಚ್ಚೆತ್ತುಕೊಂಡು ಈ ಜಲಾಶಯದ ನೀರು ರೈತರ ಹೊಲಗಳಿಗೆ ಉಪಯೋಗವಾಗಲಿ ಎನ್ನುವುದು ನಮ್ಮ ಆಶಯ.
ಕಿತ್ತೂರು ಕರ್ನಾಟಕದ ನಂಬರ್ ೧ ಡಿಜಿಟಲ್ ಚಾನೆಲ್....
ಶ್ರೀ ಮಹಾಂತೇಶ ಹಿರೇಮಠ ಅವರ ಸಾರಥ್ಯದಲ್ಲಿ........
9743594472