ಬೈಲಹೊಂಗಲ : ನಾಳೆ ನಗರದ ಪ್ರವಾಸಿ ಮಂದಿರದಲ್ಲಿ ಸು,ಕ,ವೃ,ನಿ ಪತ್ರಕರ್ತರ ಸಂಘದ ಅತ್ಯಂತ ಮಹತ್ವದ ಸಭೆಯನ್ನು ಇದೇ ಮೊದಲ ಬಾರಿಗೆ ಬೈಲಹೊಂಗಲದಲ್ಲಿ ಆಯೋಜನೆ ಮಾಡಲಾಗಿದೆ.
ಅತ್ಯಂತ ಜನಪ್ರಿಯ ಪತ್ರಿಕೋದ್ಯಮದ ಹೃದಯ ಸ್ಪರ್ಶಿ ಸಂಘಟನೆಯಾಗಿರುವ ಸುವರ್ಣ ಕರ್ನಾಟಕ ವೃತ್ತಿನಿರತ ಪತ್ರಕರ್ತರ ಸಂಘದ ಸಭೆ ಇದ್ದಾಗಿದ್ದು. ರಾಜ್ಯ ಘಟಕದ ನಿರ್ದೇಶನ ಮೂಲಕ ಬೆಳಗಾವಿ ಜಿಲ್ಲಾ ಘಟಕದ ರಚನೆ ಮತ್ತು ಪದಾಧಿಕಾರಿಗಳ ಆಯ್ಕೆ ಕೂಡಾ ನಡೆಯಲಿದೆ.
ಅದೇ ರೀತಿ ಕ್ರಾಂತಿ ನೆಲದಲ್ಲಿ ಈ ಬಾರಿಯ " ಪತ್ರಿಕೋತ್ಸವದಲ್ಲಿ ನಾನು " ಎಂಬ ಮಹತ್ವದ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಈ ಸಭೆಯನ್ನು ಬೈಲಹೊಂಗಲದಲ್ಲಿ ಆಯೋಜಸಲಾಗಿದೆ.
ಸಭೆ ಅತ್ಯಂತ ಮಹತ್ವ ಪಡೆದಿದ್ದು ಈ ಭಾಗದ ಪ್ರಮುಖ ವಿಚಾರವಾದಿಗಳು, ಚಿಂತಕರು, ಇತಿಹಾಸಕಾರರು, ಕಾನೂನು ತಜ್ಞರು, ಹಿರಿಯ ಪತ್ರಕರ್ತರು - ಲೇಖಕರು ಈ ಸಭೆಯಲ್ಲಿ ಭಾಗವಹಿಸಲಿದ್ದು ಸಭೆಯ ನೇತೃತ್ವ ವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ನಾಳೆಯ ಸಭೆಯಲ್ಲಿ ಜಿಲ್ಲಾ ಘಟಕದ ನೂತನ ಸದಸ್ಯರು ಉಪಸ್ಥಿತ ಇರಲಿದ್ದಾರೆ.