ಬೈಲಹೊಂಗಲ- ಕಿತ್ತೂರು ರಾಣಿ ಚನ್ನಮ್ಮ ಸ್ಮರಣೋತ್ಸವ ಸಮಿತಿಯ ಸಂಚಾಲಕರಾಗಿ "ಪ್ರಜಾವಾಣಿ " ಪತ್ರಿಕೆಯ ಬೈಲಹೊಂಗಲ ವರದಿಗಾರರಾದ ರವಿಕುಮಾರ ಹುಲಕುಂದ ಅವರು ಆಯ್ಕೆ...

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಬೈಲಹೊಂಗಲ- ಕಿತ್ತೂರು ರಾಣಿ ಚನ್ನಮ್ಮ ಸ್ಮರಣೋತ್ಸವ ಸಮಿತಿಯ ಸಂಚಾಲಕರಾಗಿ "ಪ್ರಜಾವಾಣಿ " ಪತ್ರಿಕೆಯ ಬೈಲಹೊಂಗಲ ವರದಿಗಾರರಾದ ರವಿಕುಮಾರ ಹುಲಕುಂದ ಅವರು ಆಯ್ಕೆಯಾಗಿದ್ದಾರೆ.

ನಗರದ ಗಣಾಚಾರಿ ಶಿಕ್ಷಣ ಸಂಸ್ಥೆಯಲ್ಲಿ ಚನ್ನಮ್ಮ ಐಕ್ಯ ಜ್ಯೋತಿ ಯಾತ್ರೆಯ ನಿಮಿತ್ಯ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಸರ್ವಾನುಮತದಿಂದ ಸಮಿತಿಯ ಸಂಚಾಲಕರಾಗಿ ಪತ್ರಕರ್ತ ರವಿಕುಮಾರ ಹುಲಕುಂದ ಅವರನ್ನು ಆಯ್ಕೆ ಮಾಡಿ ಕೂಡಲ ಸಂಗಮದ ಪೂಜ್ಯ ಬಸವ ಜಯಮೃತ್ಯುಂಜಯ ಸ್ವಾಮೀಜಿ ಘೋಷಣೆ ಮಾಡಿದರು.

ಈ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ಅಧ್ಯಕ್ಷ ಶ್ರೀಶೈಲ ಬೋಳನ್ನವರ, ಚನ್ನಮ್ಮ ಸ್ಮರಣೋತ್ಸವ ಸಮಿತಿ ಅಧ್ಯಕ್ಷ ಮುರಗೆಪ್ಪ ಗುಂಡೂರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

Post a Comment

0Comments

Post a Comment (0)