ಬೆಳಗಾವಿ : ಕಳೆದ ಕೆಲ ದಿನಗಳಿಂದ ತುಂಬಾ ಚಳಿ, ನಿನ್ನೆಯಿಂದ ಸ್ವಲ್ಪ ಚಳಿ ಕಡಿಮೆ, ಇಂದು ಮುಂಜಾನೆಯಿಂದ ಬಿರು ಬಿಸಿಲು, ಸಂಜೆ ವೇಳೆಗೆ ಧಾರಾಕಾರ ಮಳೆ ಹೀಗೆ ಎರಡೇ ದಿನಗಳಲ್ಲಿ ಚಳಿಗಾಲ ಬೇಸಿಗೆಗಾಲ ಹಾಗೂ ಮಳೆಗಾಲದ ಅನುಭವವನ್ನು ಬೆಳಗಾವಿಯ ಜನತೆ ಪಡೆದಂತಾಗಿದೆ ಎನ್ನಬಹುದು.
ಹೌದು ಇಂದು ಸಂಜೆ ಬೆಳಗಾವಿ ನಗರದಲ್ಲಿ ಸುಮಾರು ಒಂದು ಗಂಟೆ ಕಾಲ ಸುರಿದ ರಭಸದ ಮಳೆಗೆ ಇಡೀ ನಗರವೇ ತಂಪಾಗಿ ಹೋಗಿದೆ, ಗಾಳಿ ದೂಳು ಮಾಲಿನ್ಯದಿಂದ ಕೂಡಿದ ನಗರ ಮಳೆಯಿಂದ ಸ್ವಚ್ಛವಾಗಿ ಹಗುರಾಂದಂತೆ ಕಾಣುತ್ತಿದ್ದು, ಗಿಡ ಮರ ರಸ್ತೆಗಳಿಗೆ ಅಂಟಿದ ಕೊಳೆ ಹಸನಾಂದಂತೆ ಕಾಣುತ್ತಿದ್ದುದ್ದು ಖುಷಿ ಎನಿಸಿದರೆ,ಮಾತ್ತೊಂದೆಡೆ ಈ ಅಬ್ಬರದ ಮಳೆಗೆ ನಗರದ ಒಳಚರಂಡಿಗಳು ತುಂಬಿ ಕಲ್ಮಶ ನೀರು ರಸ್ತೆಯ ಮೇಲೆ ಬಂದು ನಿಂತು, ಕೆಲವೆಡೆ ರಸ್ತೆಗಳೇ ಬಂದಾಗಿರುವ ಪರಿಸ್ಥಿತಿಯಿಂದ ಸಾರ್ವಜನಿಕರು ಪರದಾಡುವಂತೆ ಆಗಿದ್ದು, ಬೀದಿ ಬದಿ ತಮ್ಮ ತರಕಾರಿ ಹಣ್ಣು ಹಂಪಲ ವಿವಿಧ ಸಾಮಗ್ರಿ ಇಟ್ಟುಕೊಂಡು ಮಾರಾಟ ಮಾಡುವ ವ್ಯಾಪಾರಿಗಳು ಮಳೆಯಲ್ಲೇ ತಮ್ಮ ವಸ್ತುಗಳನ್ನು ಎತ್ತಿಕೊಂಡು ಹೋಗುವ ಸಂಕಷ್ಟದ ಸ್ಥಿತಿ ಕಾಣುತ್ತಿತ್ತು.
ಹೀಗೆ ಜನೆವರಿಯಲ್ಲಿ ಸಂಕ್ರಾಂತಿಯ ಹಿಂದಿನ ದಿನ ಅಪರೂಪದ ಅತಿಥಿಯಾಗಿ ಆಗಮಿಸಿದ ಈ ವರುಣರಾಯ ಬೆಳಗಾವಿ ನಗರದಲ್ಲಿ ವಿವಿಧ ರೀತಿಯ ಸಂಚಲನ ಸೃಷ್ಟಿಸಿ ಶಾಂತವಾಗಿದ್ದಾನೆ..