ಮೇಕಲಮರಡಿ ಗ್ರಾಮದ ಜಿಲ್ಲಾ ಪಂಚಾಯತ್ ಬೆಳಗಾವಿ ಸನ್ 2019 2020 ನೇ ಸಾಲಿನ ಸಮಾಜ ಕಲ್ಯಾಣ ಇಲಾಖೆ ಯೋಜನೆ ಅಡಿಯಲ್ಲಿ ಸುಮಾರು 20 ಲಕ್ಷ ಅನುದಾನದಲ್ಲಿ ನಿರ್ಮಾಣವಾದ ಡಾ ಬಿ ಆರ್ ಅಂಬೇಡ್ಕರ್ ಭವನದ ಉದ್ಘಾಟನಾ ಸಮಾರಂಭ ಸೋಮವಾರ ನೆರವೇರಿತು.
ಚನ್ನಮ್ಮನ ಕಿತ್ತೂರಿನ ಮಾಜಿ ಶಾಸಕರಾದ ಮಹಾಂತೇಶ್ ದೊಡ್ಡ ಗೌಡರವರ ಅವಧಿಯಲ್ಲಿ ಸುಮಾರು 20 ಲಕ್ಷ ರೂಪಾಯಿಗಳ ಅನುದಾನದಲ್ಲಿ ನಿರ್ಮಾಣಗೊಂಡಿತ್ತು, ಸೋಮವಾರದಂದು ಮುಂಜಾನೆ ಶ್ರೀ ಶಿವಾನಂದ ಹಿರೇಮಠ ಸ್ವಾಮಿಗಳಿಂದ ಪೂಜೆಯೊಂದಿಗೆ ಜಗಜ್ಯೋತಿ ಬಸವೇಶ್ವರ ಹಾಗೂ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು, ಶ್ರೀಮತಿ ಭಾರತಿ ತಿಗಡಿಯವರಿಂದ ಹಾಗೂ ಉಪಾಧ್ಯಕ್ಷರಾದ ಶ್ರೀ ಕಾಶಿಮ್ ಜಮಾದಾರ್ ಉದ್ಘಾಟನೆ ಹಾಗೂ ಗ್ರಾಪಂ ಸದಸ್ಯರುಗಳಿಂದ ಲೋಕಾರ್ಪಣೆಗೊಂಡಿತು.