ಬೈಲಹೊಂಗಲಕ್ಕೆ ಜ.21ರಂದು ಶ್ರೀಶೈಲ ಜಗದ್ಗುರು...
ಧರ್ಮ ಜಾಗೃತಿಯ ನಿಮಿತ್ತ ಜ.18ರಿಂದ 22ರವರೆಗೆ 5 ದಿನಗಳ ಕಾಲ ನಗರದ ಶಿವಬಸವ ಕಲ್ಯಾಣ ಮಂಟಪದಲ್ಲಿ ಪ್ರವಚನ ಕಾರ್ಯಕ್ರಮ ಜರುಗಲಿದ್ದು, ಜ.21ರಂದು ನಗರಕ್ಕೆ ಶ್ರೀಶೈಲ ಜಗದ್ಗುರುಗಳು ಆಗಮಿಸಲಿದ್ದಾರೆ ಎಂದು ಮೂರುಸಾವಿರ ಮಠದ ಪ್ರಭು ನೀಲಕಂಠ ಸ್ವಾಮೀಜಿ ಹೇಳಿದರು.
ನಗರದ ಶಿವಬಸವ ಕಲ್ಯಾಣ ಮಂಟಪದಲ್ಲಿ ಯಡೂರ ಶ್ರೀ ವೀರಭದ್ರೇಶ್ವರ ದೇವಾಲಯ ದಲ್ಲಿ ಜಗದ್ಗುರು ಪಂಚಾಚಾರ್ಯರ ಸಾನ್ನಿಧ್ಯದಲ್ಲಿ ನಡೆಯಲಿರುವ ರಾಜಗೋಪುರ ಲೋಕಾರ್ಪಣೆ, ಮಹಾ ಕುಂಭಾಭಿಷೇಕ, ಲಕ್ಷ ದೀಪೋತ್ಸವ, ಕೃಷ್ಣಾರತಿ ಕಾರ್ಯಕ್ರಮಗಳ ಪ್ರಯುಕ್ತ ಬೈಲಹೊಂಗಲ ನಗರದಲ್ಲಿ ನಡೆಯಲಿರುವ ಧರ್ಮ ಜಾಗೃತಿ ಯಾತ್ರೆಯ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿ ಜ. 18 ರಿಂದ 22 ರವರೆಗೆ 5 ದಿನಗಳ ಕಾಲ ನಗರದ ಶಿವಬಸವ ಕಲ್ಯಾಣ ಮಂಟಪದಲ್ಲಿ ಗುಣದಾಳದ ಪ.ಪೂ.
ಡಾ. ವಿವೇಕಾನಂದ ದೇವರು ಇವರಿಂದ ಸಂಜೆ 6 ರಿಂದ ರಾತ್ರಿ 8 ಗಂಟೆಯವರೆಗೆ ಪ್ರವಚನ ಕಾರ್ಯಕ್ರಮ ಜರುಗಲಿದ್ದು, ನಂತರ ಅನ್ನಪ್ರಸಾದ ಸೇವೆ ಜರುಗಲಿದೆ. ಜ.21 ರಂದು ಸಂಜೆ 4 ಗಂಟೆಗೆ ನಗರದ ಮೂರುಸಾವಿರ ಮಠದಿಂದ ಶ್ರೀಶೈಲ ಜಗದ್ಗುರುಗಳ ಸಾರೋಟ ಉತ್ಸವವು ಸಕಲ ವಾದ್ಯಮೇಳ, ಪೂರ್ಣಕುಂಭದೊಂದಿಗೆ ಸಾಗಿ ಜವಳಿ ಕೂಟ, ದೊಡ್ಡಾದೇವರದೇವಸ್ಥಾನ, ಹಳೇ ಹನುಮಂತ ದೇವಸ್ಥಾನ ಮಾರ್ಗವಾಗಿ ಶಿವಬಸವ ಕಲ್ಯಾಣ ಮಂಟಪ ತಲುಪುವುದು. ಜಗದ್ಗುರುಗಳು ಸಂಜೆ ನಡೆಯುವ ಪ್ರವಚನ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಜ. 22 ರಂದು ಮುಂಜಾನೆ 8 ಗಂಟೆಗೆ
ಶಿವಬಸವ ಕಲ್ಯಾಣ ಮಂಟಪದಲ್ಲಿ ಜಗದ್ಗುರುಗಳಿಂದ ಇಷ್ಟಲಿಂಗ ಪೂಜೆ ನೆರವೇರುವುದು, ಬೆಳಿಗ್ಗೆ 9 ಗಂಟೆಗೆ ಲಿಂಗದೀಕ್ಷೆ ಹಾಗೂ ಬೆಳಿಗ್ಗೆ 10 ಗಂಟೆಗೆ ಜಗದ್ಗುರುಗಳಿಂದ ಆಶೀರ್ವಚನ ನಡೆಯಲಿದೆ. 5 ದಿನಗಳ ಕಾಲ ಪ್ರವಚನದ ಬಳಿಕ ಅನ್ನ ಪ್ರಸಾದ ಸೇವೆ ನೆರವೇರಲಿದ್ದು,ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಚನ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ತಿಳಿಸಿದರು. ಗೊರ್ಡೂ, ಇಳಕಲನ ಪ.ಪೂ. ಪಂಡಿತ್ ಅನ್ನದಾನ ಶಾಸ್ತ್ರಿಗಳು ಆಶೀರ್ವಚನ ನೀಡಿದರು.
ಧಾರ್ಮಿಕ ದತ್ತಿ ಇಲಾಖೆಯ ನಿರ್ದೇಶಕರಾದ ವೇ.ಮೂ.ಡಾ. ಮಹಾಂತಯ್ಯ ಆರಾದ್ರಿಮಠ
ಶಾಸ್ತ್ರಿಗಳು, ವಿಶ್ವನಾಥಯ್ಯ ಹಿರೇಮಠ ಶಾಸ್ತ್ರಿಗಳು, ಪುರಸಭೆ ಮಾಜಿ ಅಧ್ಯಕ್ಷ ರಾಜು ಜನ್ಮಟ್ಟಿ,ಗುತ್ತಿಗೆದಾರ ಮಂಜುನಾಥ ಹಿರೇಮಠ, ಪತ್ರಕರ್ತರ ಸಂಘದ ಅಧ್ಯಕ್ಷ ಮಹಾಂತೇಶ ತುರಮರಿ ಮಾತನಾಡಿದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ನಾನಾ ಸಾಹೇಬ್ ಪಾಟೀಲ, ವೀರಶೈವ ಲಿಂಗಾಯತ ಮಹಸಭಾ ಉಪಾಧ್ಯಕ್ಷ ಗುರು ಮೆಟಗುಡ್ಡ ಯುವ ಮುಖಂಡರಾದ ವಿನಯ ಬೋಳನ್ನವರ, ಅಮಿತ ಪಾಟೀಲ, ಶ್ರೀ ವೀರಭದ್ರೇಶ್ವರ ದೇವಸ್ಥಾನ ಕಮಿಟಿ ಅಧ್ಯಕ್ಷ ರಾಜಣ್ಣ ಸಂಗೊಳ್ಳಿ ಜಗದೀಶ ಲೋಕಾಪುರ, ವಿರೂಪಾಕ್ಷಯ್ಯ ಕೋರಿಮಠ,ಮಡಿವಾಳಪ್ಪ ಹೋಟಿ, ವಕಿಲರಾದ ಮಹಾಂತೇಶ ಮತ್ತಿಕೊಪ್ಪ, ಗಂಗಪ್ಪ ಗುಗ್ಗರಿ, ರಾಜು ಕಡಕೋಳ, ರಮೇಶ ನಾಶಿಪುಡಿ, ಸೋಮನಾಥ ಸೊಪ್ಪಿಮಠ, ರುದ್ರಪ್ಪ ಮೆಟಗುಡ್ಡ, ಮಹಾಂತೇಶ ಅಕ್ಕಿ, ಮಲ್ಲಿಕಾರ್ಜುನ ಕಮತಗಿ, ಶಿವಾನಂದ ಬಡ್ಡಿಮನಿ, ಉಪಸ್ಥಿತರಿದ್ದರು. ದಯಾನಂದ ಮುಪ್ಪಯ್ಯನವಮಠ ನಿರೂಪಿಸಿದರು, ಸಿದ್ದಣ್ಣ ಮರಕುಂಬಿ ವಂದಿಸಿದರು.