ಸವದತ್ತಿ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇಬೂದನೂರಿನಲ್ಲಿ ಭಾರತದ ಶ್ರೇಷ್ಠ ಗಣಿತಜ್ಞರಾದ ಶ್ರೀನಿವಾಸ ರಾಮಾನುಜನ್ ರವರ ಜನ್ಮ ದಿನದ ಪ್ರಯುಕ್ತ "ರಾಷ್ಟ್ರೀಯ ಗಣಿತ ದಿನಾಚರಣೆಯನ್ನು " ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ A.A. ಖಾಜಿ ಉಪಸ್ಥಿತರಿದ್ದರು, ನಿತ್ಯ ಜೀವನದಲ್ಲಿ ಗಣಿತದ ಮಹತ್ವ ಕುರಿತು ಮಾತನಾಡಿ ಮಕ್ಕಳಿಂದ ರಚಿಸಲ್ಪಟ್ಟ ರಚನಾತ್ಮಕ ಗಣಿತದ ಉಪಕರಣಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು SDMC ಅಧ್ಯಕ್ಷರಾದ ಶ್ರೀ ಉಮೇಶ ಮರಗಾಲ ವಹಿಸಿದ್ದರು. SDMC ಸದಸ್ಯರಾದ ಶ್ರೀಶೈಲ ಅಂಗಡಿ, ಪ್ರೌಢ ಶಾಲೆಯ ಗಣಿತ ಶಿಕ್ಷಕರಾದ ಪಾನಿಶೆಟ್ಟಿ, CRP ಗಳಾದ ಮಲ್ಲಣ್ಣವರ, ಬಾಳೆಕುಂದರಗಿ, ಮಹಾಂತೇಶ ಮುಂಡರಗಿ, ಹಾಗೂ ಪ್ರಧಾನ ಗುರುಗಳಾದ M.K.ಪಾಟೀಲ ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು. ಎಲ್ಲ ವಿದ್ಯಾರ್ಥಿಗಳಿಗೆ ಗಣಿತ ಶಿಕ್ಷಕಿಯರಾದ ಕುಮಾರಿ ಸ್ನೇಹಾ ಜಾಧವ ಮಾರ್ಗದರ್ಶನ ಮಾಡಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ವಿದ್ಯಾರ್ಥಿಗಳಿಂದ ಮಾಡಲಾದ ಗಣಿತ ಉಪಕರಣಗಳನ್ನು ವೀಕ್ಷಿಸಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಶಿಕ್ಷಕರಾದ ಶ್ರೀ ಉಮೇಶ್ವರ ಮರಗಾಲ ಅವರು ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ 2000 ರೂ, ಗಳು. ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ 1000 ರೂ ಗಳು. ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ 500 ರೂಪಾಯಿಗಳನ್ನು ನೀಡಿದರು. ಮತ್ತು ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪಾನಿಶೇಟ್ಟಿ ಶಿಕ್ಷಕರು ಕಂಪಾಸ್ ಸಟ್ಟ ಬಹುಮಾನವಾಗಿ ನೀಡಲಾಯಿತು. ರಾಷ್ಟ್ರೀಯ ಗಣಿತ ದಿನಾಚರಣೆಯನ್ನು ವಿದ್ಯಾರ್ಥಿಗಳ ಜೊತೆಗೆ ಆಚರಣೆ ಮಾಡಲಾಯಿತು.