ಮುಖ್ಯಮಂತ್ರಿಗಳಿಗೆ ತಮ್ಮ ಕುರ್ಚೆ ಅಧ್ಯಾಯ ಚಿಂತೆಯಾಗಿದೆ, ರೈತರ ಸಂಕಷ್ಟಗಳನ್ನು ಕೇಳಲು ಸಮಯವಿಲ್ಲ. ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅಸಮಾಧಾನ...!!!

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಬೆಳಗಾವಿ : ಜಿಲ್ಲೆಯಲ್ಲಿ ತೀವ್ರ ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು, ರಾಜ್ಯದ ಮುಖ್ಯಮಂತ್ರಿ ಆದವರು ರೈತರ ಹಾಗೂ ಸಾಮಾನ್ಯ ಜನರ ಸಂಕಷ್ಟಗಳನ್ನು ಕೇಳುವ ಬದಲು, ವಿವಿಧ ಕಟ್ಟಡಗಳ ಉದ್ಘಾಟನೆ ಮಾಡಿ, ಬಿರಿಯಾನಿ ತಿನ್ನುವದಕ್ಕಾಗಿ ನಾಳೆ ಬೆಳಗಾವಿಗೆ ಆಗಮಿಸುತ್ತಿದ್ದಾರೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ್ ಆರೋಪ ಮಾಡಿದ್ದಾರೆ.

ಶುಕ್ರವಾರ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನಾಗನೂರ ಗ್ರಾಮದಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ಕೃಷಿ ಬೆಳೆಗಳನ್ನು ಪರಿಶೀಲನೆ ನಡೆಸಿದ ಬಿಜೆಪಿ ತಂಡ ನಂತರ ಸ್ಥಳೀಯ ರೈತರೊಂದಿಗೆ ಸಂವಾದ ಮಾಡುತ್ತಾ, ಜಿಲ್ಲೆಯಲ್ಲಿ ರೈತರಿಗೆ ಇಷ್ಟೊಂದು ನಷ್ಟವಾಗಿರುವಾಗ, ಸಿಎಂ ಸಿದ್ದರಾಮಯ್ಯ ಅವರಿಗೆ ಇದರ ಅರಿವೆ ಇಲ್ಲದಂತೆ ವರ್ತನೆ ಮಾಡುತ್ತಿದ್ದಾರೆ, ನಾಳೆ ಜಿಲ್ಲೆಗೆ ಆಗಮಿಸುವ ಅವರಿಗೆ ರೈತರ ಬೆಳೆ ಹಾನಿಯ ಬಗ್ಗೆ ತಿಳಿಹೇಳಲೆಂದೇ ನಾವು ಜಿಲ್ಲಾ ಸಂಚಾರ ಮಾಡುತ್ತಿದ್ದೇವೆ ಎಂದರು.

ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಪ್ರವಾಹ ಸ್ಥಿತಿ ಉಂಟಾಗಿದೆ, ಇದರ ಬಗ್ಗೆ ಯೋಚಿಸಿ ಪರಿಹಾರ ಸೂಚಿಸಬೇಕಾದ ಸಿಎಂ ಅವರು ತನ್ನ ಕುರ್ಚಿ ಬಗ್ಗೆ ತುಂಬಾ ಕಾಳಜಿ ವಹಿಸಿದ್ದಾರೆ, ಇನ್ನು ಐದು ವರ್ಷ ನಾನೇ ಸಿಎಂ ಎಂದು ಪ್ರತಿದಿನ ಹೇಳುತ್ತಾ ಅದೇ ಚರ್ಚೆಯಲ್ಲೇ ಇರುತ್ತಾರೆ, ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಲ್ಲಿ 52 ಸಾವಿರ ಹೆಕ್ಟೇರ್ ಪ್ರದೇಶದ ಬೆಳೆ ಹಾನಿ ಆಗಿದೆ ಎಂಬ ಮಾಹಿತಿ ಜಿಲ್ಲಾಧಿಕಾರಿಗಳು ನೀಡಿದ್ದಾರೆ.

ಎರಡು ತಿಂಗಳಾದರೂ ಸರ್ಕಾರದ ಯಾವ ಜನಪ್ರತಿನಿಧಿಯೂ ಬೆಳೆ ಹಾನಿಯ ಬಗ್ಗೆ ಪರಿಶೀಲನೆ ನಡೆಸಿಲ್ಲ, ಸಚಿವರು ಬಂದಿಲ್ಲ ಎಂದು ಶಾಸಕರು ಬರುವದಿಲ್ಲ, ಶಾಸಕರು ಬಂದಿಲ್ಲ ಎಂದು ಅಧಿಕಾರಿಗಳು ಬರುವದಿಲ್ಲ, ಈಗ ನಾವು ಬಂದಿದ್ದೇವೆ ಎಂದು ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರ ಅವರು ಬಂದಿದ್ದಾರೆ, ಕೇಂದ್ರದಿಂದ ಬೆಳೆ ಪರಿಹಾರ ನಿಧಿ ಬಂದಿದ್ದರು ಇವರು ನೀಡುತ್ತಿಲ್ಲ ಯಾಕೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಇದೇ ವೇಳೆ ಬಿಜೆಪಿಯ ತಂಡದ ಎದುರು ತಮ್ಮ ಸಮಸ್ಯೆ ಹೇಳಿಕೊಂಡ ರೈತರು, ಸೋಯಾ ಅವರೆಯ ಬೆಳೆ ಸಂಪೂರ್ಣ ಹಾನಿಯಾಗಿದ್ದು, ಎಕರೆಗೆ 12 ರಿಂದ 15 ಕ್ವಿಂಟಾಲ್ ಇಳುವರಿ ಬರುವ ಬೆಳೆ ಇಂದು 2 ರಿಂದ 3 ಕ್ವಿಂಟಾಲ್ ಇಳುವರಿ ಬರುತ್ತಿದೆ, ಇದಕ್ಕೆ ಬಹಳಷ್ಟು ಖರ್ಚು ಕೂಡಾ ಮಾಡಿದ್ದೇವೆ, ಬೆಳೆ ಹಾನಿ ಪರಿಹಾರ ನೀಡಲು ಯಾವ ಅಧಿಕಾರಿಯೂ, ರಾಜಕಾರಣಿಗಳೂ ಬಂದಿಲ್ಲ ಎಂದು ತಮ್ಮ ಸಂಕಟ ಹೇಳಿಕೊಂಡಿದ್ದಾರೆ.

Post a Comment

0Comments

Post a Comment (0)