ರೈತರ, ಗ್ರಾಹಕರ ವಿಶ್ವಾಸಕ್ಕೆ ದಕ್ಕೆ ತರದೇ ಎಲ್ಲರನ್ನು ವಿಶ್ವಾಸಕ್ಕೆ ತಗೆದುಕೊಂಡು ಬ್ಯಾಂಕ ಮುಂದೆ ನಡೆಯಸಬೆಕು. ಮಾಜಿ ಉಪಮುಖ್ಯಮಂತ್ರಿ ಶಾಸಕ ಲಕ್ಷ್ಮಣ್ ಸವದಿ...

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಬೆಳಗಾವಿ. ಬ್ಯಾಂಕ ಚುನಾವಣೆ ವಿಷಯದಲ್ಲಿ ಪ್ರೆಸ್ಟೀಜ್, ಪ್ರತಿಷ್ಠೆ ಬಿಟ್ಟು ದಿ. ಮುರಗೋಡ ಶ್ರೀ ಮಹಾಂತೇಶ ಅಜ್ಜನವರು ಕಟ್ಟಿದ ಪ್ರತಿಷ್ಠಿತ ಬ್ಯಾಂಕ ಇಂದು ರಾಜ್ಯದಲ್ಲಿ ನಂ. 1 ಬ್ಯಾಂಕಾಗಿದ್ದು, ಪ್ರತಿಷ್ಠೆ, ರಾಜಕೀಯ ಹೆಸರಿನಲ್ಲಿ ಬ್ಯಾಂಕ ಹೆಸರನ್ನು ಕೆಡಿಸದೆ,ಶ್ರೀಗಳ ಆತ್ಮಕ್ಕೆ ಶಾಂತಿ ತರುವ ರೀತಿಯಲ್ಲಿ ರೈತರ, ಗ್ರಾಹಕರ ವಿಶ್ವಾಸಕ್ಕೆ ದಕ್ಕೆ ತರದೇ ಎಲ್ಲರನ್ನು ವಿಶ್ವಾಸಕ್ಕೆ ತಗೆದುಕೊಂಡು ಬ್ಯಾಂಕ ಮುಂದೆ ನಡೆಯಬೇಕೆಂದು ಮಾಜಿ ಉಪ ಮುಖ್ಯಮಂತ್ರಿ, ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅವರು ಇಂದು ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕನ ಅಥಣಿ, ಕಾಗವಾಡ ತಾಲೂಕಾ ವತಿಯಿಂದ ನಿರ್ದೇಶಕ ಸ್ಥಾನಕ್ಕೆ ಲಕ್ಷ್ಮಣ ಸವದಿ ಹಾಗೂ ರಾಜು ಕಾಗೆ ನಾಮಪತ್ರ ಸಲ್ಲಿಸಿ ಮಾತನಾಡಿ ದಿನಾಲೂ ಚಂದ್ರ ಗ್ರಹಣ, ಸೂರ್ಯ ಗ್ರಹಣ ಆಗಲ್ಲ, ಹಾಗೆ ಈ ಬ್ಯಾಂಕಿನ ಚುನಾವಣೆ ನಡೆಯುತ್ತಿದ್ದು 1991 ರಿಂದ ಡಿಸಿಸಿ ಬ್ಯಾಂಕ ನಿರ್ದೇಶಕನಾಗಿ, ಅಧ್ಯಕ್ಷ, ಉಪಾಧ್ಯಕ್ಷನಾಗಿ ಎಲ್ಲ ಆಡಳಿತ ಮಂಡಳಿ ಅವರೊಂದಿಗೆ ಉತ್ತಮ ಸಂಬಂಧ ಹೊಂದಿ ಬ್ಯಾಂಕ ಅಭಿವೃದ್ಧಿಗೆ ಹಾಗೂ ರೈತರ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಡಿಸಿಸಿ ನಿರ್ದೇಶಕರ ಸಂಖ್ಯೆ ತಾಲೂಕು ಹೆಚ್ಚಾಗಿರುವ ಪ್ರಯುಕ್ತ ಹೆಚ್ಚಾಗಿತ್ತು. ಕಳೆದ 33 ವರ್ಷಗಳಿಂದ ಶಾಸಕ ರಾಜು ಕಾಗೆ ಅವರು ನನಗೆ ಬೆಂಬಲಿಸಿ ಸತವಾಗಿ ಡಿಸಿಸಿ ಬ್ಯಾಂಕ ನಿರ್ದೇಶಕರಾಗಿ ಮಾಡಲು ಪ್ರಮುಖ ಕಾರಣಿಭೂತರು. ಈಗ ಕಾಗವಾಡ ತಾಲೂಕ ರಚನೆ ಆದ ಹಿನ್ನಲೆಯಲ್ಲಿ 32 ಪಿಕೆಪಿಎಸ್ ಸಂಘಗಳಿಂದ ರಾಜು ಕಾಗೆ ಸ್ಪರ್ದಿಸಿದ್ದಾರೆ. ನಾನು ಅಥಣಿ ತಾಲೂಕಿನ 125 ಪಿಕೆಪಿಎಸ್ ಸಂಘಗಳ ವತಿಯಿಂದ ನಾನು ಸ್ಪರ್ದಿಸಿ ನಾಮಪತ್ರ ಸಲ್ಲಿಸಿದ್ದೇನೆ. ನಾಮಪತ್ರ ಹಿಂಪಡೆಯುವ ವರೆಗೆ ಏನು ಹೇಳಲಾರೆ. ನಮ್ಮದು ಸವದಿ – ಕಾಗೆ ಪೆನಲ್ ನಾವು ಯಾವಾಗಲು ಜೋಡೆತ್ತುಗಳು, ನಾವು ಎಲ್ಲರೊಂದಿಗೆ ಸಂಪರ್ಕ ಇದ್ದೇವೆ. ಅಥಣಿ ಯಿಂದ ಇನ್ನೂ ಇಬ್ಬರು ನಾಮಪತ್ರ ಸಲ್ಲಿಸಿದ್ದಾರೆ. ಬ್ಯಾಂಕ ಹಿತದೃಷ್ಟಿಯಿಂದ ಹಿರಿಯರಾದ ಪ್ರಭಾಕರ ಕೋರೆ ಸೇರಿದಂತೆ ಎಲ್ಲರೊಂದಿಗೆ ಚರ್ಚಿಸುತ್ತೇನೆ, 7000 ಕೋಟಿ ರೂಪಾಯಿಗಳ ಠೇವಣಿ ಹೊಂದಿದೆ ಬ್ಯಾಂಕು. ರಾಜ್ಯದಲ್ಲಿ ಅತೀ ಹೆಚ್ಚು ಅಂದರೆ 4000 ಕೋಟಿ ರೂಪಾಯಿಗಳ ಬಡ್ಡಿ ರಹಿತ ಸಾಲವನ್ನು ರೈತರಿಗೆ ನೀಡಿದ್ದು , ಮುಂದೆ ಏನು ಯಾರೊಂದಿಗೆ ಹೋಗಬೇಕು ಏನು ಮಾಡಬೇಕು ಎಂಬುದು ದೇವರಿಗೆ ಬಿಟ್ಟಿದ್ದು, ಅವನು ಹೇಗೆ ಆಡಿಸುತ್ತಾನೆ ಹಾಗೆ ಆಗುತ್ತದೆ. ಆದರೂ ರೈತರ ಹಿತದೃಷ್ಟಿಯಿಂದ ಪ್ರತಿಷ್ಠೆ, ಪ್ರೆಸ್ಟೀಜ್ ಬಿಟ್ಟು ಜನರ ಪ್ರೀತಿ ಗಳಿಸಲು ಎಲ್ಲರಿಗೂ ತಮ್ಮ ಮೂಲಕ ವಿನಂತಿ ಮಾಡುತ್ತೇನೆ ಎಂದರು.

Post a Comment

0Comments

Post a Comment (0)