ದೇಶಿಯ ಉತ್ಪಾದನೆಗೆ ಹೆಚ್ಚಿನ ಪ್ರೇರಣೆ ಅಗತ್ಯ: ವಿಜಯ ಮೆಟಗುಡ್ಡ
ಬೈಲಹೊಂಗಲ:ಸಮಿಪದ ತಿರುಳ್ಗನ್ನಡ ನಾಡು ಒಕ್ಕುಂದ ಗ್ರಾಮದಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯ ಪ್ರಯುಕ್ತ ಕೈಮಗ್ಗ ಉತ್ಪಾದನೆ ಮಾಡುವ ಕುಟುಂಬದ ಮಹಿಳೆಯರ ಗೌರವ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಖ್ಯಾತ ಉದ್ಯಮಿಗಳು ಬಿಜೆಪಿ ಮುಖಂಡರಾದ ಶ್ರೀ ವಿಜಯ ಮೆಟಗುಡ್ಡ ಅವರು, ದೇಶಿಯ ವಸ್ತುಗಳ ಉತ್ಪಾದನೆಗೆ ಹೆಚ್ಚಿನ ಪ್ರೇರಣೆ, ಸಹಕಾರ ಅಗತ್ಯವಾಗಿದೆ, ದೇಶದ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವರು ಕೈಮಗ್ಗ ದಿನಾಚರಣೆಯನ್ನು ಪ್ರತಿವರ್ಷ ಆಗಸ್ಟ್ 7ರಂದು ದೇಶದಾದ್ಯಾಂತವಾಗಿ ಆಚರಿಸುವಂತೆ ಮಾಡಿದ್ದಾರೆ. ಈ ಆಚರಣೆಯ ಉದ್ದೇಶ, ಭಾರತದಲ್ಲಿ ಕೈಯಿಂದ ಉತ್ಪಾದನೆ ಮತ್ತು ಕೈಮಗ್ಗ ಉದ್ಯಮದ ಮಹತ್ವವನ್ನು ಗುರುತಿಸುವುದು ಮತ್ತು ಹಸ್ತಚರಕ ಆಧಾರಿತ ಉತ್ಪನ್ನಗಳ ಬಳಕೆಗೆ ಉತ್ತೇಜನ ನೀಡುವುದು, ಗ್ರಾಮೀಣ ಭಾರತದಲ್ಲಿ ಅತ್ಯಂತ ಹೆಚ್ಚು ಉದ್ಯೋಗ ನೀಡುವ ಕ್ಷೇತ್ರಗಳಲ್ಲಿ ಇದು ಕೂಡಾ ಒಂದಾಗಿದೆ ನಿಮ್ಮ ಉನ್ನತ ಏಳ್ಗೆಗೆ ನಾನು ಸಂಪೂರ್ಣ ಸಹಕಾರ ನೀಡಲು ಸಿದ್ದ
ಎಂದರು, ನಂತರ ಮಾತನಾಡಿದ ಬಿಜೆಪಿ ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ಜಗದೀಶ ಬೂದಿಹಾಳ ಅವರು 1905ರಲ್ಲಿ ಆಗಸ್ಟ್ 7ರಂದು ಸ್ವದೇಶಿ ಚಳವಳಿ ಆರಂಭವಾಯಿತು, ಅದು ಬ್ರಿಟಿಷ್ ಉತ್ಪನ್ನಗಳನ್ನು ತ್ಯಜಿಸಿ ದೇಶೀಯ ಕೈಮಗ್ಗ ಉತ್ಪನ್ನಗಳನ್ನು ಬಳಕೆ ಮಾಡಬೇಕೆಂದು ಜನರಿಗೆ ಪ್ರೇರಣೆ ನೀಡಲಾಯಿತು, ದೇಶೀಯ ಕೈಮಗ್ಗ ಉದ್ಯಮವನ್ನು ಪ್ರೋತ್ಸಾಹಿಸುವುದು
ಹಸ್ತಚರಕ ಕಾರ್ಮಿಕರಿಗೆ ಬೆಂಬಲ ನೀಡುವುದು, ಯುವ ಜನತೆಯಲ್ಲಿ ಕೈಮಗ್ಗದ ಬಗ್ಗೆ ಆಸಕ್ತಿ ಮೂಡಿಸುವುದು, ಸ್ವದೇಶಿ ಉತ್ಪನ್ನಗಳ ಬಳಕೆಯನ್ನು ಉತ್ತೇಜಿಸುವುದು, ಪರಿಸರ ಸ್ನೇಹಿ ಮತ್ತು ಸಾಂಸ್ಕೃತಿಕ ವೈಭವದ ಪ್ರತಿರೂಪ ಈ ಕೈಮಗ್ಗ ಉತ್ಪನ್ನಗಳ ಉತ್ಪಾದನೆ ಎಂದರು, ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ, ಪುರಸಭೆ ಸದಸ್ಯ ಗುರು ಮೆಟಗುಡ್ಡ, ಹಿರಿಯರಾದ ಗುರುಪಾದ ಕಳ್ಳಿ, ಓಬಿಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ ಹಡಪದ,ಜಿಲ್ಲಾ ಮಾಧ್ಯಮ ಪ್ರಮುಖ ಸಚೀನ ಕಡಿ, ಮಂಡಲ ಪ್ರಧಾನ ಕಾರ್ಯದರ್ಶಿ ಲಕ್ಕಪ್ಪ ಕಾರಗಿ, ಗ್ರಾಮ ಪಂಚಾಯಿತಿ ಸದಸ್ಯರಾದ ಮಹಾಂತೇಶ ಉಳ್ಳಿಗೇರಿ, ಮಡಿವಾಳಪ್ಪ ಬಡ್ಲಿ, ಭಿಮಪ್ಪ ಹಲ್ಕಿ, ಬಸವರಾಜ ಬಾಳಿಕಾಯಿ, ಮುಖಂಡರಾದ ಪುಂಡಲೀಕ ಗಡ್ಡಿ,ಶಂಕರ ಢವಳೆ, ಮಂಜುನಾಥ ಬುಚಡಿ, ಈರಣ್ಣ ಅಂಗಡಿ, ಬಸವರಾಜ ಹಡಪದ, ಎಸ್ ಡಿ ಎಂ ಸಿ ಅಧ್ಯಕ್ಷ ವಿಠ್ಠಲ ಸಂಭೋಜಿ, ಮಂಜುನಾಥ ಸೊಂಟಕ್ಕಿ, ನಾಗಪ್ಪ ಸಂಗೊಳ್ಳಿ, ಯಮನಪ್ಪ ಚಿಕ್ಕನ್ನವರ, ಹಾಗೂ ಪಕ್ಷದ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.