ಬೆಳೆ ಹಾನಿ ಪರಿಹಾರಕ್ಕೆ ಆಗ್ರಹ...
ಬೈಲಹೊಂಗಲದಲ್ಲಿ ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಮಹಾ ಒಕ್ಕೂಟದಿಂದ ಪ್ರತಿಭಟನೆ...
ಕಳಪೆ ಬೀಜ ಗೊಬ್ಬರ ಪೂರೈಸಿದ್ದಕ್ಕೆ ಸೋಯಾಬಿನ್ ಹೆಸರು ಹತ್ತಿ ಮೆಕ್ಕೆಜೋಳ ಬೆಳೆ ನಾಶ
ಅನಿಯದೃಷ್ಟಾವಧಿ ಧರಣಿ ನಡೆಸಲು ಮುಂದಾದ ರೈತರು
ಸ್ಥಳೀಯ ಶಾಸಕ ಮಹಾಂತೇಶ್ ಕೌಜಲಗಿ ಭರವಸೆ ಧರಣಿ ಕೈ ಬಿಟ್ಟ ರೈತರು
ಬೈಲಹೊಂಗಲ:- ಹಾಗೂ ಸವದತ್ತಿ ತಾಲೂಕಿನ ರೈತರ ಮುಂಗಾರು ಬೆಳೆಗಳಾದ ಸೋಯಾಬಿನ್ ಹತ್ತಿ ಹೆಸರು ಮೆಕ್ಕೆಜೋಳ ಬೆಳೆಗಳು ಕೀಟಬಾಧೆಯಿಂದ ಸಂಪೂರ್ಣವಾಗಿ ಹಾಳಾಗಿದ್ದು ಸರಕಾರ ಸೂಕ್ತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿ ರೈತರು ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಮಹಾ ಒಕ್ಕೂಟದ ನೇತೃತ್ವದಲ್ಲಿ ಶನಿವಾರ ಬೃಹತ್ ಪ್ರತಿಭಟನೆ ನಡೆಸಿದರು.
ಪಟ್ಟಣದ ಚೆನ್ನಮ್ಮ ವೃತ್ತದಲ್ಲಿ ಸಭೆಯ ಸೇರಿ ಬೆಳಿಗ್ಗೆ 12 ಗಂಟೆಗೆ ಚೆನ್ನಮ್ಮ ವೃತ್ತದಿಂದ ಉಪವಿಭಾಗಾಧಿಕಾರಿ ಕಚೇರಿ ಅವರಿಗೆ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿ ಎಸಿ ಪ್ರವೀಣ್ ಜೈನ್ ಅವರಿಗೆ ಮನವಿ ಸಲ್ಲಿಸಿದರು ನಂತರ ಕಚೇರಿ ಆವರಣದಲ್ಲಿ ಹಾಕಿದ ಪೆಂಡಾಲ್ ನಲ್ಲಿ ಧರಣಿ ಆರಂಭಿಸಿದರು ಈ ವೇಳೆ ಸ್ಥಳಕ್ಕೆ ಆಗಮಿಸಿದ ಮಹಾಂತೇಶ್ ಕೌಜಲಗಿ ಬೆಳೆ ಹಾನಿ ವಿಷಯವನ್ನು ಸರ್ಕಾರದೊಂದಿಗೆ ಚರ್ಚಿಸಿ ಕೃಷಿ ಸಚಿವರೊಂದಿಗೆ ಮಾನ್ಯ ಮುಖ್ಯಮಂತ್ರಿಗಳ ಭೇಟಿ ಮಾಡಿ ಸೂಕ್ತವಾದ ಪರಿಹಾರವನ್ನು ಒದಗಿಸುವಲ್ಲಿ ನಾನು ಪ್ರಯತ್ನಿಸುತ್ತೇನೆ ಎಂದು ಪ್ರತಿಭಟನಾ ನಿರತ ರೈತರನ್ನು ವಿನಂತಿ ಮಾಡಿಕೊಂಡರು ಈ ವಿನಂತಿ ಯಿಂದ ರೈತರು ಶಾಸಕರ ಭರವಸೆ ಮೂಲಕ ಧರಣಿಯನ್ನು ಕೈಬಿಟ್ಟರು.
ಸರಕಾರವನ್ನು ನಂಬಿ ರೈತರು ಬೀಜ ಸೇರಿದಂತೆ ಎಲ್ಲವನ್ನು ಕಣ್ಮುಚ್ಚಿ ಖರೀದಿಸುತ್ತಿದ್ದಾರೆ ಎಕರೆಗೆ ಬೆಳೆಯಿಗೆ 30 ರಿಂದ 40,000 ಖರ್ಚಾಗು ಇದೆ ರೈತರು ಸಾಲ ಮಾಡಿ ಬಂಡವಾಳ ಹಾಕಿದ್ದು ನೀರಿನಲ್ಲಿ ಹೋಮ ಹಾಕಿದಂತಾಗಿದೆ ಹಾಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರ ನೆರವಿಗೆ ಧಾವಿಸಬೇಕು ಇಲ್ಲವಾದಲ್ಲಿ ಅನರ್ದಿಷ್ಟಾವಧಿ ಧರಣಿ ನಡೆಸುವುದಾಗಿ ರೈತರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಡಾ ವಿಶ್ವನಾಥ್ ಪಾಟೀಲ್ ಉದ್ಯಮಿ ವಿಜಯ್ ಮೆಟ್ಟಗುಡ್ ಆಗಮಿಸಿ ರೈತರಿಗೆ ಬೆಂಬಲ ಸೂಚಿಸಿದರು. ರಾಜ್ಯಾಧ್ಯಕ್ಷ ಬೀರಪ್ಪ ದೇಶನೂರ ಸುರೇಶ ವಾಲಿ ದಯಾನಂದ ಚಿಕ್ಕಮಠ ಬಸವರಾಜ್ ಮುಕಾಶಿ ಸಮರ್ಥ ಪಾಟೀಲ್ ಬಸನಗೌಡ ಪಾಟೀಲ್ ಚನ್ನಪ್ಪ ಗಣಾಚಾರಿ ಹೇಮಾ ಕಾಜಗಾರ್ ಭಾಗ್ಯಶ್ರೀ ಸಂಜು ತಲಕರ ಕೃಷ್ಣೇಗೌಡ ಮಹಾಂತೇಶ್ ಗೌರಿ ಹಾಗೂ ಸುತ್ತಮುತ್ತಲಿನ ರೈತರು ಉಪಸ್ಥಿತರಿದ್ದರು.