ಮೈದುಂಬಿ ಹರಿಯುತ್ತಿರುವ ಜೀವನಾಡಿ ಮಲಪ್ರಭಾ ನದಿಗೆ ಬಾಗಿನ ಅರ್ಪಣೆ

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಮೈದುಂಬಿ ಹರಿಯುತ್ತಿರುವ ಜೀವನಾಡಿ ಮಲಪ್ರಭಾ ನದಿಗೆ ಬಾಗಿನ ಅರ್ಪಣೆ 

ಬೈಲಹೊಂಗಲ: ಭಾರತೀಯ ಜನತಾ ಪಾರ್ಟಿ ಬೈಲಹೊಂಗಲ ಮಂಡಲ ವತಿಯಿಂದ ಶ್ರಾವಣ ನಡಿಗೆ ಸುಕ್ಷೇತ್ರದ ಕಡೆಗೆ ಕಾರ್ಯಕ್ರಮದ ಜೋತೆಗೆ ವರ್ಷ ಪದ್ಧತಿಯಂತೆ ನಾಡಿನ ಜೀವನಾಡಿಯಾದ ಮಲಪ್ರಭಾ ನದಿಗೆ ಪರಮ ಪೂಜ್ಯ ಶ್ರೀ ಅಭಿನವ ಸಿದ್ದಲಿಂಗ ಸುಖದೇವಾನಂದ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಭಾಗಿನ ಅರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮುಖಂಡರು ಉದ್ಯಮಿಗಳಾದ ವಿಜಯ ಮೆಟಗುಡ್ಡ ಅವರು ಬೈಲಹೊಂಗಲದಿಂದ ನಯಾನಗರ ಗ್ರಾಮದ ಪಾದಯಾತ್ರೆ ಮುಖಾಂತರ ತೇರಳಿ, ಪ್ರತಿ ವರ್ಷವೂ ಈ ಕಾರ್ಯಕ್ರಮವನ್ನು ಮಾಡುತ್ತಾ ಬಂದಿದ್ದೇವೆ ನಮ್ಮ ಭಾಗದ ರೈತರ ಜೀವನಾಡಿ ತಾಯಿ ಮಲಪ್ರಭೆಗೆ ಬಾಗಿನ ಅರ್ಪಿಸುವುದರ ಜೊತೆಗೆ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ 11 ವರ್ಷಗಳ ಆಡಳಿತದಲ್ಲಿ ಭಾರತ ದೇಶವು ಜಗತ್ತಿನಾದ್ಯಂತ ಉಜ್ವಲವಾಗಿ ಪ್ರಜ್ವಲಿಸುತ್ತಿದೆ, ಅವರ ಆಡಳಿತದಲ್ಲಿ ರೈತರಿಗೆ ಸಾಕಷ್ಟು ಯೋಜನೆಗಳನ್ನು ತಂದು ರೈತರ ಜೊತೆಯಾಗಿ ನಿಂತಿರುವುದು ಗಮನಾರ್ಹವಾಗಿದೆ ತಾಯಿ ಮಲಪ್ರಭೆ ಎಲ್ಲರಿಗೂ ಸುಖ, ಸಮೃದ್ಧಿ ಕರುಣಿಸಲಿ ಎಂದರು, ಈ ಸಂದರ್ಭದಲ್ಲಿ ,ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ,ಪುರಸಭೆ ಸದಸ್ಯ ಗುರು ಮೆಟಗುಡ್ಡ, ಬಿಜೆಪಿ ಸಹಕಾರ ಪ್ರಕೋಷ್ಟ ಜಿಲ್ಲಾ ಸಂಚಾಲಕ ಸುನಿಲ್ ಮರಕುಂಬಿ, ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ಜಗದೀಶ ಬೂದಿಹಾಳ, ಮಂಡಲ ಅಧ್ಯಕ್ಷ ಸುಭಾಷ್ ತುರಮರಿ, ಓಬಿಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ ಹಡಪದ, ಮಾಜಿ ತಾಪಂ ಸದಸ್ಯ ಮಂಜುನಾಥ ಜೋರಾಪುರ, ಮುಖಂಡರಾದ ಮಹಾಂತೇಶ ಮರೆಕ್ಕನವರ, ಮಹೇಶ ಚಂದರಗಿ, ಶಿವಾನಂದ ಬಡ್ಡಿಮನಿ, ಮೌಲಿ ನಲವಡೆ, ಮುದಕಪ್ಪ ತೋಟಗಿ, ಮಹಾಂತೇಶ ಜಿಗಜಿನ್ನಿ, ಸಿ ಜಿ ವಿಭೂತಿಮಠ, ರವಿ ತುರಮರಿ, ಆನಂದ ತುರಮರಿ, ಮಲ್ಲಪ್ಪ ಬೆಳಗಾವಿ, ಗೌಡಪ್ಪ ಹೊಸಮನಿ, ಸದಾಶಿವ ಪಾಟೀಲ,ಹಾಗೂ ನಯಾನಗರ, ಆನಿಗೋಳ, ಒಕ್ಕುಂದ, ಬೆಳವಡಿ, ಜೋತೆಗೆ ವಿವಿಧ ಗ್ರಾಮಗಳ ಬಿಜೆಪಿ ಕಾರ್ಯಕರ್ತರು, ಪದಾಧಿಕಾರಿಗಳು ಗ್ರಾಪಂ ಸದಸ್ಯರು, ಚುನಾಯಿತ ಪ್ರತಿನಿಧಿಗಳು, ಮಹಿಳಾ ಕಾರ್ಯಕರ್ತರು ದೇಶಾಭಿಮಾನಿಗಳು ಉಪಸ್ಥಿತರಿದ್ದರು.

Post a Comment

0Comments

Post a Comment (0)