ಬಾಗಲಕೋಟೆ ಕಿತ್ತೂರು ಕ್ರಾಂತಿ ನ್ಯೂಸ್
ಬಾಗಲಕೋಟೆ ಕೂಡಲಸಂಗಮದ ಲಿಂಗಾಯಿತ ಪಂಚಮಸಾಲಿ ಪೀಠಕ್ಕೆ ಪರ್ಯಾಯ ಪೀಠಾಧಿಪತಿ ನೇಮಕಕ್ಕೆ ಪಂಚಮಶಾಲಿ ಟ್ರಸ್ಟ್, ಮುಂದಾಗಿರುವ ಬೆನ್ನಳ್ಳಿ ಪೀಠಾಧ್ಯಕ್ಷ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅನಾರೋಗ್ಯಕ್ಕೆ ಒಳಗಾಗಿ ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸ್ವಾಮೀಜಿ ಅವರೇ ಶುಕ್ರವಾರ ಆಹಾರದಲ್ಲಿ ವ್ಯತ್ಯಾಸವಾದ ಕಾರಣ ಅಸ್ವಸ್ಥಗೊಂಡಿದ್ದರು ಕೂಡಲಸಂಗಮದಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದಿದ್ದರು ಶನಿವಾರ ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಾದ ಸ್ವಾಮೀಜಿ ಅವರಿಗೆ ವೈದ್ಯರು ಐಸಿಯು ಚಿಕಿತ್ಸೆ ನೀಡಲಾಗಿದ್ದು ಸದ್ಯ ಸ್ವಾಮೀಜಿ ಆರೋಗ್ಯ ಸುಧಾರಣೆಯಾಗಿದೆ ಎಂದು ಭಕ್ತರು ತಿಳಿಸಿದ್ದಾರೆ.