ಕರ್ನಾಟಕದಲ್ಲಿ ಬರೋಬ್ಬರಿ 35.84 ಲಕ್ಷ ಪ್ರಕರಣಗಳು ಲೋಕ ಅದಾಲತ್ ನಲ್ಲಿ ಇತ್ಯರ್ಥ

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಬೆಂಗಳೂರು: ರಾಜ್ಯಾದ್ಯಂತ ಶನಿವಾರ (ಜು.12) ದಂದು ನಡೆದ ರಾಷ್ಟ್ರೀಯ ಲೋಕ ಅದಾಲತ್ ಮೂಲಕ 35.84 ಲಕ್ಷ ಪ್ರಕರಣಗಳು ಇತ್ಯರ್ಥಪಡಿಸಲಾಗಿದೆ ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ. ಕಾಮೇಶ್ವರ ರಾವ್ ತಿಳಿಸಿದರು. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನ್ಯಾಯಾಲಯದಲ್ಲಿ ಬಾಕಿ ಇದ್ದ 3,11,177 ಲಕ್ಷ ಪ್ರಕರಣಗಳು ಇತ್ಯರ್ಥಗೊಂಡಿವೆ. 55.56 ಲಕ್ಷ ವ್ಯಾಜ್ಯ ಪೂರ್ವ ಪ್ರಕರಣಗಳು ಇತ್ಯರ್ಥಗೊಂಡಿವೆ ಎಂದರು.


ಒಟ್ಟು 2,878 ಕೋಟಿ ರೂ. ಪರಿಹಾರ ಮೊತ್ತದೊಂದಿಗೆ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. 1,756 ವೈವಾಹಿಕ ಪ್ರಕರಣಗಳು ಇತ್ಯರ್ಥಗೊಂಡಿವೆ. ಸಂಧಾನದ ಮೂಲಕ 331 ದಂಪತಿಗಳನ್ನ ಒಟ್ಟುಗೂಡಿಸಲಾಗಿದೆ. 4015 ವಿಭಾಗ ದಾವೆ ರಾಜಿಸಂಧಾನದ ಮೂಲಕ ಇತ್ಯರ್ಥವಾದವು. 4961 ಅಪಘಾತ ಪ್ರಕರಣಗಳಲ್ಲಿ 290 ಕೋಟಿ ಪರಿಹಾರ ನೀಡಲಾಗಿದೆ ಎಂದು ಹೇಳಿದರು.


13542 ಚೆಕ್ ಬೌನ್ಸ್ ಪ್ರಕರಣಗಳನ್ನು ಮುಕ್ತಾಯಗೊಳಿಸಲಾಗಿದೆ. 4430 ಅಮಲ್ಜಾರಿ ಕೇಸ್, 375 ಗ್ರಾಹಕರ ವ್ಯಾಜ್ಯಗಳು ಇತ್ಯರ್ಥಗೊಂಡವು. 5 ವರ್ಷಕ್ಕೂ ಹಳೆಯ 2377 ಕೇಸ್, 10 ವರ್ಷ ಹಳೆಯ 275, 15 ವರ್ಷ ಹಳೆಯ 37 ಪ್ರಕರಣಗಳು ಇತ್ಯರ್ಥಪಡಿಸಲಾಗಿದೆ. ನ್ಯಾಯಾಲಯದಲ್ಲಿ 68 ದಿನಗಳಲ್ಲಿ ನಡೆಯುವ ಪ್ರಕರಣಗಳನ್ನು ಒಂದೇ ದಿನದಲ್ಲಿ ಇತ್ಯರ್ಥಪಡಿಸಲಾಗಿದೆ ಎಂದು ತಿಳಿಸಿದರು.


ರಾಷ್ಟ್ರೀಯ ಲೋಕ ಅದಾಲತ್ ಎಂದರೆ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಲು ಆಯೋಜಿಸುವ ಒಂದು ವಿಧದ ನ್ಯಾಯಾಲಯ. ಇದು ಒಂದು ನಿರ್ದಿಷ್ಟ ದಿನಾಂಕದಂದು ರಾಷ್ಟ್ರವ್ಯಾಪಿ ಎಲ್ಲಾ ನ್ಯಾಯಾಲಯಗಳಲ್ಲಿ ಏಕಕಾಲದಲ್ಲಿ ನಡೆಯುತ್ತದೆ.


ರಾಷ್ಟ್ರೀಯ ಲೋಕ ಅದಾಲತ್ಗಳ ಮುಖ್ಯ ಉದ್ದೇಶವೆಂದರೆ, ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ತ್ವರಿತವಾಗಿ ಮತ್ತು ಸುಲಭವಾಗಿ ಇತ್ಯರ್ಥಪಡಿಸುವುದು. ಇದರಿಂದ ಜನರು ಸಮಯ ಮತ್ತು ಹಣವನ್ನು ಉಳಿಸಬಹುದು.

Post a Comment

0Comments

Post a Comment (0)