ಬೈಲಹೊಂಗಲ- ಅಖಂಡ ಕರ್ನಾಟಕ ರಾಜ್ಯ ರೈತ ಸಂಘ ಬೆಳಗಾವಿ ಜಿಲ್ಲಾ ಅಧ್ಯಕ್ಷರನ್ನಾಗಿ ಹೊಸೂರ ಗ್ರಾಮದ ರೈತ ಮುಖಂಡ ಮಲ್ಲಿಕಾರ್ಜುನ ಹುಂಬಿ ಅವರನ್ನು ನೇಮಕ ಮಾಡಲಾಯಿತು.
ರಾಜ್ಯ ಸಮಿತಿಯ ಆದೇಶದ ಮೇರೆಗೆ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ವಾಲಿಯವರು ಜಿಲ್ಲಾ ಘಟಕದ ಪದಾಧಿಕಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಜಿಲ್ಲಾ ಉಪಾಧ್ಯಕ್ಷರನ್ನಾಗಿ ಬಸವರಾಜ ಡೋಂಗರಗಾವಿ , ಪ್ರಧಾನ ಕಾರ್ಯದರ್ಶಿಯಾಗಿ ಬಸವರಾಜ ಹಣ್ಣಿಕೇರಿ, ಜಿಲ್ಲಾ ಕಾರ್ಯದರ್ಶಿಯಾಗಿ ಮಹೇಶ ಕಾದ್ರೊಳ್ಳಿ ಅವರನ್ನು ನೇಮಕ ಮಾಡಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ವರಿಷ್ಠರಾದ ರಮೇಶ ಸು ಪಾಟೀಲ,
ಕಿತ್ತೂರು ತಾಲೂಕ ಅಧ್ಯಕ್ಷ ಬಸವರಾಜ ಹಿತ್ತಲಮನಿ , ಕಿತ್ತೂರು ತಾಲೂಕು ಉಪಾಧ್ಯಕ್ಷ
ಬಸಯ್ಯ ಹಿರೇಮಠ , ಖಾನಾಪುರ ತಾಲೂಕ ಅಧ್ಯಕ್ಷ ಅಖಿಲಸಾಬ್ ಮುನವಳ್ಳಿ , ಹಿರಿಯರಾದ ರಾಮಣ್ಣ ಲಂಗೋಟಿ, ಅರ್ಜುನ ಪಡೆನವರ, ಶಿವಬಸಪ್ಪ ಮದ್ನಳ್ಳಿ, ಶಿವಪ್ಪ ಹಣ್ಣಿಕೇರಿ, ಬಸಪ್ಪ ಹೋಳಿ, ಹಲವಾರು ರೈತ ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.