ಇನಾಮದಾರ ಶುಗರ್ಸ ಲಿ., ಹಿರೇಕೊಪ್ಪ ಮರಕುಂಬಿ ಪ್ರಪ್ರಥಮ ಮಿಲ್ ರೂಲರ್ ಪೂಜಾ ಕಾರ್ಯಕ್ರಮ
ಮರಕುಂಬಿ: ದಿನಾಂಕ 20.06.2025 ರಂದು ಸಮೀಪದ ಇನಾಮದಾರ ಶುಗರ್ಸ ಲಿ., ಕಾರ್ಖಾನೆಯಲ್ಲಿ ಪ್ರಪ್ರಥಮ ಮಿಲ್ ರೂಲರ್ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸದರಿ ಪೂಜಾ ಕಾರ್ಯಕ್ರಮದ ನೇತೃವ್ವವನ್ನು ಬೈಲಹೊಂಗಲದ ವೇ ಮೂ ದಯಾನಂದ ಮುಪ್ಪಯ್ಯನವರಮಠ ಹಾಗೂ ಶಿಷ್ಯಂದಿರು ಶಾಸ್ತ್ರೋಕ್ತವಾಗಿ ನೇರವೇರಿಸಿದರು ಪ್ರಪ್ರಥವಾಗಿ ಗುರುಗ್ರಹ, ಬೃಹಸ್ಪತಿ, ಗಣಪತಿ, ಲಕ್ಷ್ಮೀ, ಸರಸ್ವತಿ, ಶಿವ ಪಾರ್ವತಿ ಮೂರ್ತಿಗಳಿಗೆ ಪೂಜೆ ಸಲ್ಲಿಸಿ, ವಿಶೇಷ ಅಲಂಕಾರದೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೇರವೇರಿಸಿದರು. ಸದರಿ ಕಾರ್ಯಕ್ರಮದಲ್ಲಿ ಘಟಕದ ಮುಖ್ಯಸ್ಥರಾದ ಶ್ರೀನಿವಾಸ ಸುಣಕರ, ಕಾರ್ಖಾನೆಯ ಮುಖ್ಯ ಆಡಳಿತ ಅಧಿಕಾರಿಗಳಾದ ರವೀಂದ್ರ ಚ ಪಟ್ಟಣಶೆಟ್ಟಿ ಪ್ರಥಮವಾಗಿ ಮಿಲ್ ರೂಲರ್ ಪೂಜೆಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ವಿಭಾಗದ ಮುಖ್ಯಸ್ಥರುಗಳಾದ ಪ್ರವೀನ ಥಾರೆ, ಎ,ಕೆ ಪಾಟೀಲ, ವೀರಯ್ಯಾ ವೀರಕ್ತಮಠ, ಶ್ರೀನಿವಾಸ ಖೋತ, ಶಾರದಾ ಬೋಗುರ, ರಮೇಶ ಜಾಧವ, ಸಂತೋಷ ಶೀಂಧೆ, ಬಿನೋದಕುಮಾರ, ಶ್ರೀಕಾಂತ ನಾಯ್ಕ, ಕಲ್ಮೇಶ ಶಿಂಧೆ, ಮಂಜೇಶ ಎನ್.ಬಿ, ನಾರಾಯಣ ಮೇದಾರ, ಕಾರ್ಖಾನೆಯ ಕಾರ್ಮಿಕ ಸಿಬ್ಬಂದಿ ವರ್ಗದವರು ಹಾಗೂ ರೈತ ಭಾಂದವರು ಕಾರ್ಯಕ್ರಮದಲ್ಲಿ ಹಾಜರಿದ್ದು ಕಾಯ್ರಕ್ರಮಕ್ಕೆ ಶೋಭೆ ತಂದರು.