ಬೈಲಹೊಂಗಲ ಪಟ್ಟಣಕ್ಕೆ ಸಂಪರದಕಿಸುವ ಹಳೆಯ ಸಂತಿ ರಸ್ತೆಯ ಅತಿಕ್ರಮಣ ತೆರವುಗೊಳಿಸಿ ರಸ್ತೆಯ ಹದ್ದುಬಸ್ತಿ ಗುರೂತಿಸುವಂತೆ ಆಗ್ರಹಿಸಿ ಗ್ರಾಮದ ರೈತರಿಂದ ಮನವಿ...

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಬೈಲಹೊಂಗಲ‌ : ಸಮೀಪದ ಹೊಸೂರ ಗ್ರಾಮದಿಂದ‌ ಬೈಲಹೊಂಗಲ ಪಟ್ಟಣಕ್ಕೆ ಸಂಪರದಕಿಸುವ ಹಳೆಯ ಸಂತಿ ರಸ್ತೆಯ ಅತಿಕ್ರಮಣ ತೆರವುಗೊಳಿಸಿ ರಸ್ತೆಯ ಹದ್ದುಬಸ್ತಿ ಗುರೂತಿಸುವಂತೆ ಆಗ್ರಹಿಸಿ ಗ್ರಾಮದ ರೈತರು ಉಪವಿಭಾಗಧಿಕಾರಿಗಳಿಗೆ ಸೋಮವಾರ ಮನವಿ ಅರ್ಪಿಸಿದರು.
  ಮನವಿ ನೀಡುವ ಸಂದರ್ಭದಲ್ಲಿ ಗ್ರಾಮದ ರೈತ ಮುಖಂಡರಾದ ಮಡಿವಾಳಪ್ಪ ಬೂದಿಹಾಳ ಬಸವರಾಜ ದುಗ್ಗಾಣಿ, ಮಹಾದೇವಪ್ಪ ಕಮತಗಿ ಮಾತನಾಡಿ,
 ಹೊಸೂರ ಗ್ರಾಮದಿಂದ‌ ಬೈಲಹೊಂಗಲ, ಆನಿಗೋಳ, ವಕ್ಕುಂದ ಗ್ರಾಮಕ್ಕೆ ಹಾಗೂ ನೂರಾರೂ ರೈತರ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ಹಳೆ ಬೈಲಹೊಂಗಲ ರಸ್ತೆ (ಸಂತಿರಸ್ತೆ) ಸರಿ ಸುಮಾರು 33ಅಡಿ ಅಗಲ ಹೊಂದಿದ್ದ ರಸ್ತೆ ಇಂದು ಅತಿಕ್ರಮಣವಾಗಿ ವಾಹನ, ಚಕ್ಕಡಿ, ದನಕರುಗಳು ಚಲನವಲನಕ್ಕೆ ಹಾಗೂ ರೈತರ ಕೃಷಿ ಚಟುವಟಿಕೆಗೆ ಅತ್ಯಂತ ತೊಂದರೆಯಾಗಿದೆ. ಈ ರಸ್ತೆ ಬ್ರಿಟಿಷ್ ಸರ್ಕಾರಕ್ಕೆ ಮುಂಚೆ ಇದ್ದು ನಂತರ ಇದಕ್ಕೆ ಪರ್ಯಾಯವಾಗಿ ಬೈಲಹೊಂಗಲ- ಮುನವಳ್ಳಿ ಬೇರೆ ರಸ್ತೆ ನಿರ್ಮಾಣವಾಗಿದ್ದರಿಂದ ಇದು ಆನಿಗೊಳ, ವಕ್ಕುಂದ, ಚಿಕ್ಕೊಪ್ಪ ಹಾಗೂ ಬೈಲಹೊಂಗಲ ಹದ್ದಿಯ ಜಮೀನುಗಳಿಗೆ ಪ್ರಮುಖ ಸಂಪರ್ಕ ರಸ್ತೆಯಾಗಿದೆ.‌ ಈ ರಸ್ತೆಯನ್ನು ಬೈಲಹೊಂಗಲ ಹಳೆ ಸಂತಿ ರಸ್ತೆ ಎಂದು ಕರೆಯಲಾಗುತಿದ್ದು, ಈ ರಸ್ತೆಯ ಬದಿಯಲ್ಲಿರುವ ಕೆಲ ರೈತರು ಈ ರಸ್ತೆಯನ್ನು ಅತಿಕ್ರಮಣ‌ ಮಾಡಿದ್ದರಿಂದ ರಸ್ತೆಯಲ್ಲಿ ಸಂಚಾರಮಾಡಲು ಆಗುತ್ತಿಲ್ಲ. ರಸ್ತೆ ಬದಿಯ ಗಟಾರು ಮುಚ್ಚಿದ್ದರಿಂದ ಮಳೆ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು ರಸ್ತೆಯ ಮಣ್ಣು ಕೊಚ್ಚಿಕೊಂಡು ಹೋಗಿದ್ದು ಸಂಚಾರಾಕ್ಕೆ ಅಡಚಣೆಯಾಗಿದೆ.
 ಆದ್ದರಿಂದ ರಾಜ್ಯ ಸರ್ಕಾರ ಈಗಾಗಲೆ ಜಮೀನುಗಳಿಗೆ ಹೋಗುವ ರಸ್ತೆಗಳ ಅತಿಕ್ರಮಣ ತೆರುವಿಗೆ ಬಿಗಿಯಾದ ಕಾನೂನು ತಂದಿದ್ದು ಅದರಂತೆ ತಾಲೂಕಾ ಸರ್ವೆಕಛೇರಿಯ ದಾಖಲೆಗಳಲ್ಲಿರುವ ಅಳತೆಯ ಪ್ರಕಾರ ತಕ್ಷಣವಾಗಿ ಈ ರಸ್ತೆಯ ಅಗಲ ಮತ್ತು ನಕ್ಷೆಯ ಪ್ರಕಾರ ಇದು ಇರುವ ಅಸ್ತಿತ್ವವನ್ನು ಗುರುತಿಸಿ ಹದ್ದುಬಸ್ತು ಮಾಡಿ ರಸ್ತೆ ಅಭಿವೃದ್ಧಿಗೊಳಿಸಿ ರೈತರ ಕೃಷಿ ಚಟುವಟಿಕೆಗಳಿಗೆ ಸುಗಮ ದಾರಿ ಮಾಡಿಕೊಡಬೇಕೆಂದರು.
      ಮಲ್ಲಿಕಾರ್ಜುನ ಕರಡಿಗುದ್ದಿ, ಶ್ರೀಶೈಲ ಪಣದಿ, ಮಹಾಂತೇಶ ಹುರಕಡ್ಲಿ, ಬಸವರಾಜ ಮೂಗಬಸವ, ನಾಗಪ್ಪ ಹೊಸಮನಿ ಮಾತನಾಡಿ ಈ ರಸ್ತೆಯು ಅಗಲಿಕರಣಕ್ಕೆ ವಿಳಂಬವಾದಲ್ಲಿ ರೈತರ ಕೃಷಿ ಚಟುವಟಿಕೆಗೆ ಅಪಾರ ತೊಂದರೆಯಾಗಿ‌ ರೈತರು ನಷ್ಟ ಅನುಭವಿಸಬೇಕಾಗುತ್ತದೆ. ಅಲ್ಲದೆ ರೈತರು ಅನಿವಾರ್ಯವಾಗಿ ಬಿದಿಗಿಳಿದು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ರೈತರು ತಮಗಾಗೂವ ರಸ್ತೆಯ ತೊಂದರೆಯನ್ನು ಉಪವಿಭಾಗಧಿಕಾರಿಗಳ ಮುಂದೆ ಅಕ್ರೋಶವ್ಯಕ್ತಪಡಿಸಿದರು.
ಮನವಿ ಸ್ವೀಕರಿಸಿದ ಉಪವಿಭಾಗಧಿಕಾರಿಗಳು ಈ ರಸ್ತೆಯ ಸರ್ವೆ ಕಾರ್ಯವನ್ನು ಆದಷ್ಟು ‌ಬೇಗನೆ ಮಾಡಿ ರಸ್ತೆಯ ಅಭಿವೃದ್ಧಿಗೆ ಸಂಬದಿಸಿದ ಇಲಾಖೆಯ ಗಮನಕ್ಕೆ ತಂದು ರೈತರಿಗೆ ಅನಕೂಲ ಮಾಡಿಕೊಡುವದಾಗಿ ಭರವಸೆ ನೀಡಿದರು.
ರೈತ ಮುಖಂಡರಾದ, ಯಲ್ಲಪ್ಪ ಮೂಗಬಸವ, ಈರಪ್ಪ ಚಿಕ್ಕೊಪ್ಪ, ಮಹಾದೇವಪ್ಪ ಗೌಡರ, ಶಿವಬಸ್ಸಪ್ಪ ಬುಡಶೆಟ್ಟಿ, ಮಹಾದೇವ ಅಪೋಜಿ, ಮೂರಾದಲಿ ಜಮಾದಾರ, ಮಡಿವಾಳಪ್ಪ ಚಿಕ್ಕೊಪ್ಪ, ಮಡಿವಾಳಪ್ಪ ಕಮತಗಿ, ಮಡಿವಾಳಪ್ಪ ಜೋಬಾಳಿ‌ ಸೇರಿದಂತೆ‌ ಮುಂತಾದವರು ಇದ್ದರು.

Post a Comment

0Comments

Post a Comment (0)