ಸಾರಿಗೆ ಬಸ್ ಪಲ್ಟಿ ಹಲವರಿಗೆ ಗಾಯ
ಬೈಲಹೊಂಗಲ : ಸಾರಿಗೆ ಬಸ್ ಎಕ್ಸಲ್ ಕಟ್ ಆಗಿ ಪಲ್ಟಿಯಾಗಿರುವ ಘಟನೆ ತಾಲೂಕಿನ ಯರಡಾಲ ಗ್ರಾಮದ ಕೆರೆಯ ಹತ್ತಿರ ಮಂಗಳವಾರ ನಡೆದಿದೆ.
ಬೈಲಹೊಂಗಲದಿಂದ ಎಂ.ಕೆ.ಹುಬ್ಬಳ್ಳಿ ಮಾರ್ಗವಾಗಿ ಇಟಗಿ ಕ್ರಾಸಗೆ ತೆರಳುವ ಬಸ್ ಏಕಾಏಕಿ ಎಕ್ಸಲ್ ಕಟ್ ಆಗಿದೆ. ತಕ್ಷಣ ಎಚ್ಚೆತ್ತ ಚಾಲಕನು ಬಸನ್ನು ಹೊಲದ ಮಡ್ಡಿ ಕಡೆಗೆ ತಿರುವು ಮಾಡಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ ಎಂದು ಸ್ಥಳೀಯರು ತಿಳಿಸಿದರು.
ಗಾಯಾಳುಗಳನ್ನು ಬೈಲಹೊಂಗಲದ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಅದೃಷ್ಟಾವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.