ರೈತರು ಬೀಜದ ಸದುಪಯೋಗ ಪಡೆದುಕೊಳ್ಳಲಿ - ಶಾಸಕ ಮಹಾಂತೇಶ ಕೌಜಲಗಿ
ಬೈಲಹೊಂಗಲ : 2025-26ನೇ ಸಾಲಿನ ಮುಂಗಾರು ಹಂಗಾಮಿನ ಬೈಲಹೊಂಗಲ ತಾಲೂಕಿನಲ್ಲಿ ಕೃಷಿ ಇಲಾಖೆಯಿಂದ ಸರಕಾರಿ ಸಹಾಯಧನದಲ್ಲಿ ನೀಡುವ ಬೀಜ ವಿತರಣೆ ಕಾರ್ಯಕ್ರಮಕ್ಕೆ ಶನಿವಾರ ಪಟ್ಟಣದ ಟಿ.ಎ.ಪಿ.ಸಿ.ಎಂ.ಎಸ್ ಕೇಂದ್ರದಲ್ಲಿ ಶಾಸಕ ಮಹಾಂತೇಶ ಕೌಜಲಗಿ ಚಾಲನೆ ನೀಡಿದರು.
ತಾಲೂಕಿನಲ್ಲಿ ಮಳೆ ಪ್ರಾರಂಭವಾಗಿದ್ದು ಮುಂಗಾರು ಬಿತ್ತನೆಗೆ ಹದ ನೋಡಿಕೊಂಡು ಕೃಷಿ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನದಡಿ ಬಿತ್ತನೆ ಪ್ರಾರಂಭಿಸಬೇಕೆಂದು ರೈತರಿಗೆ ಕರೆ ನೀಡಿದರು. ಕೃಷಿ ಇಲಾಖೆಯಿಂದ ಬೈಲಹೊಂಗಲ ಹೋಬಳಿಯಲ್ಲಿ ವಿವಿಧ ಪಿ.ಕೆ.ಪಿ.ಎಸ್.ಸಂಸ್ಥೆಗಳನ್ನೊಳಗೊಂಡ ಒಟ್ಟು 13 ಬೀಜ ವಿತರಣಾ ಕೇಂದ್ರಗಳನ್ನು ತೆರೆಯಲಾಗಿದ್ದು, ಪ್ರಸ್ತುತ ಅವಶ್ಯಕತೆಗೆ ಅನುಗುಣವಾಗಿ ಬೀಜ ದಾಸ್ತಾನು ಇದ್ದು, ಬೀಜಗಳ ಕೊರತೆ ಇರುವದಿಲ್ಲ.
ಆದ್ದರಿಂದ ರೈತ ಬಾಂಧವರು ಇಲಾಖೆಯು ಕೋರಿದ ದಾಖಲಾತಿಗಳನ್ನು ಸಲ್ಲಿಸಿ ಇಲಾಖೆಯೊಂದಿಗೆ ಹಾಗೂ ವಿತರಣಾ ಸಿಬ್ಬಂದಿಗಳೊಂದಿಗೆ ಸಹಕರಿಸಿ ಶಾಂತಿಯುತವಾಗಿ ಬಂದು ತಮ್ಮ ಕ್ಷೇತ್ರಕ್ಕೆ ಅನುಗುಣವಾಗಿ ಬೀಜಗಳನ್ನು ಪಡೆದು ಕಾರ್ಯಕ್ರಮದ ಸದುಪಯೋಗ ಪಡೆಯುವಂತೆ ತಿಳಿಸಿದರು.
ಬೆಳಗಾವಿ ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ ಮಾತನಾಡಿ, ರೈತರು ಬಿತ್ತನೆ ಸಮಯದಲ್ಲಿ ಕೇವಲ ಡಿ.ಎ.ಪಿ. ಗೊಬ್ಬರ ಒಂದೇ ಬಳಸುವದರಿಂದ ಬೆಳೆಗಳಿಗೆ ಬರ ಹಾಗೂ ರೋಗ ನಿರೋಧಕ ಶಕ್ತಿ ನೀಡಿ ಕಾಳಿನ ತೂಕ ಹೆಚ್ಚಿಸುವ ಪೋಷಕಾಂಶವಾದ ಪೊಟ್ಯಾಸಿಯಂ ಲಭ್ಯವಾಗುವದಿಲ್ಲ. ಆದ್ದರಿಂದ ಮಾರುಕಟ್ಟೆಯಲ್ಲಿ ಸಾರಜನಕ, ರಂಜಕ ಹಾಗೂ ಪೊಟ್ಯಾಸಿಯಂ ಒದಗಿಸುವ ಸಂಯುಕ್ತ ថថថថ 15:15:15, 17:17:17, 19:19:19, 10:26:26 12:32:16 ಇತ್ಯಾದಿಗಳು ಲಭ್ಯವಿದ್ದು, ರೈತರು ಇವುಗಳನ್ನು ಉಪಯೋಗುಸುವಂತೆ ಹಾಗೂ ಬೈಲಹೊಂಗಲ ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರೈತರು ಎಣ್ಣೆಕಾಳು ಬೆಳೆಯಾದ ಸೋಯಾಬಿನ್ ಬೆಳೆಯುದರಿಂದ ರೈತರು ಡಿ.ಎ.ಪಿ. ಗೊಬ್ಬರ ಪರ್ಯಾಯವಾಗಿ ಸಾರಜನಕ, ರಂಜಕ ಜತೆಗೆ ಗಂಧಕ ಒದಗಿಸುವ 20:20:0:13 ಬಳಸುವುದರಿಂದ ಎಣ್ಣೆಯ ಅಂಶ ಹಾಗೂ ಕಾಳಿನ ಗಾತ್ರ ಹೆಚ್ಚಾಗಿ ಉತ್ತಮ ಇಳುವರಿ ಪಡೆಯಬಹುದೆಂದು ತಿಳಿಸಿದರು.
ಸಹಾಯಕ ಕೃಷಿ ನಿರ್ದೇಶಕ ಬಸವರಾಜ ದಳವಾಯಿ ಮಾತನಾಡಿ, ರೈತರು ಭೂಮಿಯ ಹದ ನೋಡಿಕೊಂಡು ಅನುಭವದ ಆಧಾರದ ಮೇಲೆ ಬಿತ್ತಬಹುದಾಗಿದೆ. ಸೋಯಾಬೀನ್ ಬೀಜ 2 ಇಂಚಿಗಿಂತ ಕೆಳಗೆ ಬಿತ್ತನೆ ಮಾಡಿದರೆ ಬೀಜ ಮೊಳಕೆ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದೆ ಎಂದರು.
ಪುರಸಭೆ ಅಧ್ಯಕ್ಷ ವಿಜಯ ಬೋಳನ್ನವರ, ಪುರಸಭೆ ಸದಸ್ಯ ಬಸವರಾಜ ಜನ್ಮಟ್ಟಿ, ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ಶಿವಬಸಪ್ಪ ತುರಮರಿ, ಖಜಾಂಚಿ ಶಿವಪುತ್ರಪ್ಪ. ತಟವಟಿ, ಸದಸ್ಯರಾದ ಶರಣಬಸಪ್ಪ ಮೆಟಗುಡ್ಡ, ಬಸವರಾಜ ಶಿಂತ್ರಿ ಟಿ.ಎ.ಪಿ.ಸಿ.ಎಂ.ಎಸ್. ನಿರ್ದೇಶÀಕರಾದ ಕುಮಾರಗೌಡ ಪಾಟೀಲ, ಮಹಾಂತೇಶ ಏಣಗಿ, ಎಸ್.ಸಿ.ಪಾಟೀಲ, ಶಂಭು ರುದ್ರಾಪೂರ, ಕೃಷಿ ಅಧಿಕಾರಿಗಳಾದ ಎಂ.ಎಸ್.ಬಿಸಗುಪ್ಪಿ, ಶ್ರೀಯಮನಪ್ಪ ಮಾದಿಗರ, ಎಸ್.ಎಫ್.ಪೂಜೇರ, ಬಿ.ಕೆ.ಜಮಾದಾರ, ಎಸ.ಎಸ.ಮಾಳಗಿ, ಆತ್ಮಾ ಸಿಬ್ಬಂದಿಗಳಾದ ಕುಮಾರಗೌಡ ಪಾಟೀಲ, ಮಹಾಂತೇಶ ಏಣಗಿ, ಎಸ್.ಸಿ.ಪಾಟೀಲ, ಶಂಭು ರುದ್ರಾಪೂರ, ಕೃಷಿ ಅಧಿಕಾರಿಗಳಾದ ಎಂ.ಎಸ್.ಬಿಸಗುಪ್ಪಿ, ಶ್ರೀಯಮನಪ್ಪ ಮಾದಿಗರ, ಎಸ್.ಎಫ್.ಪೂಜೇರ, ಬಿ.ಕೆ.ಜಮಾದಾರ, ಎಸ.ಎಸ.ಮಾಳಗಿ, ಆತ್ಮಾ ಸಿಬ್ಬಂದಿಗಳಾದ ಚಂದ್ರಕಾಂತ ಮರಡಿ, ಪ್ರದೀಪ ಮೂಗಬಸವ, ಟಿ.ಎ.ಪಿ.ಸಿ.ಎಂ.ಎಸ್. ವ್ಯವಸ್ಥಾಪಕ ಸಂಜಯ. ಮಾಳನ್ನವರ ಮತ್ತು ಕೃಷಿ ಇಲಾಖೆ ಸಿಬ್ಬಂದಿ ಹಾಗೂ ಟಿ.ಎ.ಪಿ.ಸಿ.ಎಂ.ಎಸ್. ಸಂಸ್ಥೆಯ ಸಿಬ್ಬಂದಿ ಹಾಗೂ ರೈತ ಬಾಂಧವರು ಉಪಸ್ಥಿತರಿದ್ದರು.