ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಸಾವಿರ ಮೇಟಿ ಒಕ್ಕಲ ನಾಡು ದೊಡವಾಡ ಗ್ರಾಮದ ಶ್ರೀ ಜಡೆ ಸಿದ್ದೇಶ್ವರ ಹಿರೇಮಠದ ಬೇಸಿಗೆಯ ರಜೆಯಲ್ಲಿ ದಿನಾಂಕ 10.04.2025 ರಿಂದ 14.05.2025 ರ ವರೆಗೆ ತಿಂಗಳ ಪರ್ಯಂತ ಜಂಗಮ ವಟುಗಳಿಗೆ ನಡೆದು ಬಂದ ವೈದಿಕ ಸಂಸ್ಕಾರ ಶಿಬಿರದ ಮಂಗಲೋತ್ಸವ ಕಾರ್ಯಕ್ರಮ ದಿನಾಂಕ 14.05.2025 ರಂದು ಬುಧವಾರ ಜರುಗಲಿದೆ.
ಬ್ರಾಹ್ಮಿನಿ ಮುಹೂರ್ತದಲ್ಲಿ ರುದ್ರಾಭಿಷೇಕ, ಅಯ್ಯಾಚಾರ, ಲಿಂಗ ದೀಕ್ಷೆ ಕಾರ್ಯಕ್ರಮ ಹಾಗೂ ಜಂಗಮ ವಟುಗಳಿಗೆ ಧರ್ಮೋಪದೇಶ ಕಾರ್ಯಕ್ರಮ ನಡೆಯುತ್ತವೆ. ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ನೀಲಕಂಠ ಮಹಾಸ್ವಾಮಿಗಳು ಶ್ರೀ ಮಹಾಂತದುರದುಂಡೀಶ್ವರ ಮಠ ಮುರುಗೋಡ, ಅಧ್ಯಕ್ಷತೆ ಶ್ರೀ ಪರಮಪೂಜ್ಯ ಬಸವಲಿಂಗ ಮಹಾಸ್ವಾಮಿಗಳು ರುದ್ರಾಕ್ಷಿ ಮಠ ಬೈಲಹೊಂಗಲ, ನೇತೃತ್ವ ಶ್ರೀ ಷ ಬ್ರ ಮುಮ್ಮಡಿ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಅರಮನೆ ಜಪದಕಟ್ಟೆ ಮಠ ಮೈಸೂರು, ಷ ಬ್ರ ಗುರುಲಿಂಗ ಶಿವಾಚಾರ್ಯರು ಹಿರೇಮಠ ಸಂಗೊಳ್ಳಿ,ಷ ಬ್ರ ಮರುಳಸಿದ್ದ ಶಿವಾಚಾರ್ಯರು ಹಿರೇಮಠ ಬ್ಯಾಹಟ್ಟಿ, ಪೂಜ್ಯ ಶ್ರೀ ವಿರುಪಾಕ್ಷ ಅಜ್ಜನವರು ಬಂಗಾರ ಅಜ್ಜನಮಠ ಏಣಿಗಿ,ಷಾ ಬ್ರ ಜಡಿಸಿದ್ದೇಶ್ವರ ಶಿವಾಚಾರ್ಯರು ಹಿರೇಮಠ ದೊಡವಾಡ, ಶ್ರೀ ಡಾ, ವಿದ್ವಾನ್ ಗಂಗಾಧರಯ್ಯ ಶಾಸ್ತ್ರಿಗಳು ಶ್ರೀ ಅಮರೇಶ್ವರ ಪ್ರಧಾನ ಅರ್ಚಕರು ಗುರುಗುಂಟಾ, ಜ್ಯೋತಿಷ್ಯರು ಹಾಗೂ ಶ್ರೀ ವೇ ಮೂ ಮಹಾಂತಯ್ಯ ಶಾಸ್ತ್ರಿಗಳು ದೊಡವಾಡ, ಶ್ರೀ ಜಡಿಸಿದ್ದೇಶ್ವರ ಹಿರೇಮಠದ ಸಮಸ್ತ ಅರ್ಚಕ ಬಳಗ ಭಾಗವಹಿಸುವರು ಸಮಸ್ತ ಎಲ್ಲ ಸದ್ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.