ಕಾಂಗ್ರೆಸ್ ಪಕ್ಷವು ಡಾ.ಬಾಬಾಸಾಹೇಬ್ ಅಂಬೇಡ್ಕರ್ ರವರಿಗೆ ಮಾಡಿದ ಅವಮಾನದ ಕುರಿತು ಪ್ರತಿ ಮನೆ ಮನೆಗೂ ತಲುಪಿಸಲು ಕಾರ್ಯಕರ್ತರಿಗೆ ಕರೆ*

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಕಾಂಗ್ರೆಸ್ ಪಕ್ಷವು ಡಾ.ಬಾಬಾಸಾಹೇಬ್ ಅಂಬೇಡ್ಕರ್ ರವರಿಗೆ ಮಾಡಿದ ಅವಮಾನದ ಕುರಿತು ಪ್ರತಿ ಮನೆ ಮನೆಗೂ ತಲುಪಿಸಲು ಕಾರ್ಯಕರ್ತರಿಗೆ ಕರೆ*
.ಬಾಬಾಸಾಹೇಬ್ ಅಂಬೇಡ್ಕರ್ ರವರನ್ನು ತುಳಿಯುವ ಕೆಲಸವನ್ನು ಕಾಂಗ್ರೆಸ್ ಪಕ್ಷವು ಮಾಡಿದ್ದು ಜಗಜ್ಜಾಹೀರು ಎಂದು ಶಿರಹಟ್ಟಿ ಕ್ಷೇತ್ರದ ಶಾಸಕರಾದ ಡಾಕ್ಟರ್ ಚಂದ್ರು ಲಮಾಣಿ ಅವರು ಹೇಳಿದರು .
ನಗರದ ಗೊಮ್ಮಟೇಶ್ ವಿದ್ಯಾಪೀಠದ ಸಭಾಭವನದಲ್ಲಿ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ಒಂದು ಸುಡುವ ಮನೆ ಎಂಬ ವಿಷಯದ ಕುರಿತ ವಿಚಾರಗೋಷ್ಠಿಯಲ್ಲಿ ಮಾತನಾಡಿ, ಈ ವಿಚಾರಗೋಷ್ಠಿ ದೇಶ ವ್ಯಾಪಿ ನಡೆಯುತ್ತಿದೆ ಏಪ್ರಿಲ್ ದಿಂದ ಪ್ರಾರಂಭವಾಗಿ ಮೇ ತಿಂಗಳ ವರೆಗೂ ದೇಶಾದ್ಯಂತ ಹಮ್ಮಿಕೊಳ್ಳಲಾಗಿದೆ ಕಾಂಗ್ರೆಸ್ ಒಂದು ಸುಡುವ ಮನೆಯೆಂದು ಇದು ಡಾ. ಬಾಬಾಸಾಹೇಬ್ ಅವರ ಹೇಳಿಕೆಯಾಗಿದೆ ಅದರೊಳಗೆ ಹೋದರೆ ನಾವು ಸುಟ್ಟು ಹೋಗುತ್ತೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಹಕ್ಕನ್ನು ನೀಡುವುದರಲ್ಲಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ಕೊಡುಗೆ ಅಪಾರ ಎಂದರು ಸಂವಿಧಾನ ರಚನಾ ಸಮಿತಿಯ ಸಭೆಗೆ ಬರದಂತೆ ತಡೆಯಲು ಕಾಂಗ್ರೆಸ್ ಹುನ್ನಾರ ನಡೆಸಿತು. ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವಂತೆ ಡಾ.ಬಾಬಾ ಸಾಹೇಬರು ಕಾಯ್ದೆ ಜಾರಿಗೆ ತರುವ ಕಾರ್ಯ ಮಾಡಿದರು. ಮುಸ್ಲಿಮರಿಗೆ ನೀಡುವಷ್ಟು ಪ್ರಾತಿನಿಧ್ಯವನ್ನು ಹಿಂದುಳಿದ ವರ್ಗಗಳಿಗೆ ಕೊಡಲು ಕಾಂಗ್ರೆಸ್ ಮನಸ್ಸು ಮಾಡಲಿಲ್ಲ ಜಮ್ಮು-ಕಾಶ್ಮೀರಕ್ಕೆ ಪ್ರತ್ಯೇಕ ಪ್ರಾಂತ್ಯ ಸ್ಥಾನಮಾನ ಕಾಂಗ್ರೆಸ್ ನೀಡುವುದನ್ನು ಅಂಬೇಡ್ಕರ್ ಅವರು ತಡೆಹಿಡಿಯಲು ಪ್ರಯತ್ನಿಸಿದರು ಎಂದು ನೆನಪಿಸಿಕೊಂಡರು.
ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ ಅವರು ಮಾತನಾಡಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಸಾಕಷ್ಟು ಕೊಡುಗೆ ನೀಡಿದರೂ ಕೂಡ ಅವರನ್ನು ಹೀನಾಯವಾಗಿ ನಡೆಸಿಕೊಂಡಿದೆ ಕಾಂಗ್ರೆಸ್ ಪಕ್ಷವು ಘೋರ ಅನ್ಯಾಯ ಮಾಡಿದೆ ಅಂಬೇಡ್ಕರ್ ಅವರು ನಿಧನ ಹೊಂದಿದಾಗ ದೆಹಲಿಯಲ್ಲಿ ಅವರ ಅಂತ್ಯ ಸಂಸ್ಕಾರ ಮಾಡಲು ಜಾಗವನ್ನು ನೀಡಲಿಲ್ಲ ಕಾಂಗ್ರೆಸ್ ಪಕ್ಷವು ಸಂವಿಧಾನಕ್ಕೆ ಕೊಡುವ ಗೌರವವು ನಾಟಕೀಯವಾಗಿದೆ ಸಂವಿಧಾನಕ್ಕೆ ಅತಿ ಹೆಚ್ಚು ಗೌರವವನ್ನು ಬಿಜೆಪಿ ಕೊಟ್ಟಿದೆ ಭಾರತದ ಸಂವಿಧಾನವು ಸಾವಿರಾರು ವರ್ಷಗಳ ಹಿಂದೆ ಜಾರಿಯಲ್ಲಿತ್ತು ಎಂದು ರಾಹುಲ್ ಗಾಂಧಿಯವರ ಹೇಳಿಕೆ ಹಾಸ್ಯಾಸ್ಪದವಾಗಿದೆ. ಎಸ್.ಸಿ ಹಾಗೂ ಎಸ್. ಟಿ ಪಂಗಡಗಳಿಗೆ ಮೀಸಲಾದ ಹಣವನ್ನು ಕಾಂಗ್ರೆಸ್ ದುರುಪಯೋಗಪಡಿಸಿಕೊಂಡಿರುವುದು ನೋವಿನ ಸಂಗತಿಯಾಗಿದೆ ಎಂದು ಹೇಳಿದರು. ಮಾಜಿ ಶಾಸಕರಾದ ಸಂಜಯ್ ಪಾಟೀಲ್ ಹಾಗೂ ಮುಖಂಡರಾದ ಡಾ. ಕ್ರಾಂತಿ ಕಿರಣ್ ಅವರು ಮಾತನಾಡಿ ಕಾಂಗ್ರೆಸ್ ಪಕ್ಷವು ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಮಾಡಿದ ಅವಮಾನದ ಕುರಿತು ಮನೆ ಮನೆಗೆ ತಿಳಿಸುವ ಕಾರ್ಯವನ್ನು ನಮ್ಮ ಕಾರ್ಯಕರ್ತರು ಮಾಡಬೇಕು ಈ ವಿಷಯವನ್ನು ಪದೇ ಪದೇ ಚರ್ಚೆ ಮಾಡುವ ಮೂಲಕ ಜನರಿಗೆ ತಲುಪಿಸುವ ಮೂಲಕ ಸಮಾಜದಲ್ಲಿ ಪರಿವರ್ತನೆ ತರುವ ಕಾರ್ಯ ಮಾಡಬೇಕು ಕಾಂಗ್ರೆಸ್
 

Post a Comment

0Comments

Post a Comment (0)