ರಸ್ತೆ ಡಾಂಬರೀಕರಣ ಕಾಮಗಾರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪೂಜೆ

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ರಸ್ತೆ ಡಾಂಬರೀಕರಣ ಕಾಮಗಾರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪೂಜೆ

ಬೆಳಗಾವಿ : ಬೆಳಗಾವಿ ಗ್ರಾಮೀಣ ಕ್ಷೇತ್ರದ ಅತವಾಡ ಗ್ರಾಮದಿಂದ ಅಗಸಗಾ ಗ್ರಾಮದವರೆಗಿನ ರಸ್ತೆಯ ಡಾಂಬರೀಕರಣ ಕಾಮಗಾರಿಗೆ ಮಹಿಳಾ ಮತ್ತು ಮಕ್ಕಳಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಗುರುವಾರ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.

ಸುಮಾರು 3 ಕೋಟಿ ರೂ,ಗಳ ವೆಚ್ಚದಲ್ಲಿ ರಸ್ತೆ ನಿರ್ಮಾಣಗೊಳ್ಳಲಿದ್ದು, ಗುಣಮಟ್ಟ ಕಾಯ್ದುಕೊಂಡು, ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸಚಿವರು ಸೂಚನೆ ನೀಡಿದರು.
 
ಈ ವೇಳೆ ಕಲ್ಲಪ್ಪ ಕಡೋಲ್ಕರ್, ಮಾರುತಿ ಬೆಳಗಾಂವ್ಕರ್, ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ್, ನಾರಾಯಣ ಮಾಸ್ತೊಳೆ, ಸಾತೇರಿ, ಪಾಟೀಲ, ಬಾಬು ಕಾಂಬಳೆ, ಕಲ್ಪನಾ ಕಾಂಬಳೆ, ವಸಂತ ಪಾಟೀಲ, ಮಾರುತಿ ಹೆಬ್ಬಾಳಕರ್, ಸಾತೇರಿ ಕಡೋಲ್ಕರ್, ರೇಣುಕಾ ಮಾಸೋಳೆ, ತುಕಾರಾಂ ಪಾಟೀಲ, ಅಶೋಕ ಹೆಬ್ಬಾಳಕರ್ ಉಪಸ್ಥಿತರಿದ್ದರು.

Post a Comment

0Comments

Post a Comment (0)