ಬೈಲಹೊಂಗಲ: ವಕೀಲರ ಮೇಲಿನ ಹಲ್ಲೆಗೆ ಖಂಡನೆ

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಬೈಲಹೊಂಗಲ: ವಕೀಲರ ಮೇಲಿನ ಹಲ್ಲೆಗೆ ಖಂಡನೆ

ಬೈಲಹೊಂಗಲ: ಭಾರತೀಯ ವಕೀಲ ಪರಿಷತ್ತಿನ ಸದಸ್ಯರಾಗಿರುವ ವಕೀಲ ವೈ.ಆರ್.ಸದಾಶಿವರೆಡ್ಡಿ ಮೇಲಿನ ಮಾರಣಾಂತಿಕ ಹಲ್ಲೆ ನಡೆಸಿರುವ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕು ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ನ್ಯಾಯವಾದಿಗಳ ಸಂಘದಿಂದ ಸೋಮವಾರ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ನ್ಯಾಯವಾದಿಗಳ ಸಂಘದ ಪ್ರಧಾನ ಕಾರ್ಯದರ್ಶಿ ವಿ ಜಿ ಕಟದಾಳ ಮಾತನಾಡಿ, ಏ.15ರಂದು ವೈ.ಆ‌ರ್.ಸದಾಶಿವರೆಡ್ಡಿ ಅವರ ಕಚೇರಿಗೆ ನುಗ್ಗಿದ ದುಷ್ಕರ್ಮಿಗಳು ಏಕಾಏಕಿ ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಈಗಾಗಲೇ ವಕೀಲರ ರಕ್ಷಣೆಗಾಗಿ ಕಾಯ್ದೆ ಜಾರಿಯಾಗಿದ್ದರೂ, ದುಷ್ಕರ್ಮಿಗಳು ಯಾವುದೇ ಕಾನೂನಿನ ಭಯ ಇಲ್ಲದೇ ಕೃತ್ಯ ಎಸಗಿದ್ದಾರೆ.
ತಪ್ಪಿತಸ್ಥರನ್ನು ಆದಷ್ಟು ಬೇಗ ಹಿಡಿದು ಅವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ರಾಜ್ಯಾದ್ಯಂತ ಎಲ್ಲಾ ವಕೀಲರಿಗೆ ಸೂಕ್ತ ರಕ್ಷಣೆ ಹಾಗೂ ಕಾನೂನು ಭದ್ರತೆಯನ್ನು ಒದಗಿಸಬೇಕೆಂದು ತೋಳಿಗೆ ಕೆಂಪು ಬಟ್ಟೆ ಕಟ್ಟಕೊಂಡು ಅಗ್ರಹಿಸಿದರು.

ವಕೀಲರಾದ ಸಿ ಎ ವನ್ನೂರ, ಶಿದಲಿಂಗ ಬೋಳಶೆಟ್ಟಿ, ಎಸ್ ಪಿ ಕುಲಕರ್ಣಿ, ಎಸ್ ಬಿ ಹಣ್ಣಿಕೆರಿ, ಜಿ ಎ ಅಂಗಡಿ, ಆರ್ ಎಫ್ ಕುರುಬರ, ಪಿ ಬಿ ಬಡಿಗೇರ, ಎಸ್ ಎಚ್‌ ಮಾಳಗಿ, ಎಂ ಜಿ ಅನಪಿನ, ಪಿ ಎಸ್‌ ಚೌಬಾರಿ, ಯು ಕೆ ಬುಲಾಕೆ, ಎಸ್ ಜಿ ಚಿಕ್ಕಮಠ, ಎಸ್ ಬಿ ಬಡಿಗೇರ, ಬಿ ಆ‌ರ್ ಹರಿದಾಸ, ಅಶ್ವಿನಿ ಪೀರಗೋಜಿ, ವಿಜಯಲಕ್ಷ್ಮಿ ಹಿರೇಮಠ, ಎಂ ಎಂ ಅಬ್ಬಾಯಿ, ಸಿ ಎಸ್ ಚಿಕ್ಕನಗೌಡರ ಇದ್ದರು.

Post a Comment

0Comments

Post a Comment (0)